ಕೋಲಾರ: ರಾಜ್ಯದಲ್ಲಿ ಜಿಪಂ ಹಾಗೂತಾಪಂ ಚುನಾವಣೆಯ ಮೀಸಲಾತಿ ಪಟ್ಟಿಪ್ರಕಟವಾಗಿದ್ದು, ಇದರ ಹಿನ್ನೆಲೆಯಲ್ಲಿ ಮಾಜಿಶಾಸಕ ಆರ್.ವರ್ತೂರು ಪ್ರಕಾಶ್ ತಮ್ಮಬೆಂಬಲಿಗರ ಸಭೆಯನ್ನು ಮಂಗಳವಾರತಮ್ಮ ನಿವಾಸದಲ್ಲಿ ನಡೆಸಿದರು.
ಸಭೆಯಲ್ಲಿ ಕೋಲಾರ ವಿಧಾನಸಭಾಕ್ಷೇತ್ರದ4 ಜಿಪಂ ಹಾಗೂ 10 ತಾಪಂಕ್ಷೇತ್ರಗಳಪೈಕಿ ಅರಹಳ್ಳಿ ತಾಪಂ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲುಆಸಕ್ತಿಇರುವವರಹಾಗೂತಮ್ಮ ಕಾರ್ಯಕರ್ತರ ಅಭಿಪ್ರಾಯಗಳನ್ನುಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿಸಚಿವ ಆರ್.ವರ್ತೂರು ಪ್ರಕಾಶ್, ತಾವುಅಧಿಕಾರದಲ್ಲಿ ಇಲ್ಲದಿದ್ದರೂ ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ಒಟ್ಟಿಗೆ ತಮ್ಮಜೊತೆ ಇದ್ದಾರೆ. ನಮ್ಮ ಶಕ್ತಿ ಕುಂದಿಲ್ಲ. ನಮಗೆಯಾವುದೇ ಪಕ್ಷದ ಬೆಂಬಲ ಇಲ್ಲದಿದ್ದರೂಗೆಲ್ಲುವ ಶಕ್ತಿ ಇದೆ ಎಂದು ಹೇಳಿದರು.
ಈಗಾಗಲೇ ಗ್ರಾಪಂ ಚುನಾವಣೆಯಲ್ಲಿನಮ್ಮ ಶಕ್ತಿ ತೋರಿಸಿದ್ದೇವೆ. ಮುಂದೆ ಬರುವಜಿಪಂ ಹಾಗೂ ತಾಪಂ ಚುನಾವಣೆಯಲ್ಲಿನಮ್ಮ ಬಣದ ಅಭ್ಯರ್ಥಿಗಳನ್ನು ಗೆಲ್ಲಿಸುವಮೂಲಕ ಅಧಿಕಾರ ಹಿಡಿಯಬೇಕೆಂದರು.ನಾವು ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ತೋರಿದರೆ ಮುಂದಿನ ಎಂ.ಎಲ್.ಎ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗಲಿದ್ದು, ಅತಿ ವಿಶ್ವಾಸದಿಂದ ಕಾರ್ಯಕರ್ತರು ಮೈಮರೆಯದೆ ಕೆಲಸ ಮಾಡಿದರೆ ಜಿಲ್ಲೆಯಲ್ಲಿ 10 ಜಿಪಂ ಸ್ಥಾನಹಾಗೂ ತಾಪಂನಲ್ಲಿ ಅಧಿಕಾರ ಪಡೆಯಬಹುದೆಂದು ತಿಳಿಸಿದರು.
ಸಭೆಯಲ್ಲಿ ವರ್ತೂರು ಬಣದಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್,ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್,ಜಿಪಂ ಮಾಜಿ ಸದಸ್ಯ ಅರುಣ್‌ಪ್ರಸಾದ್,ತಾಪಂ ಮಾಜಿ ಅಧ್ಯಕ್ಷ ಆಂಜನಪ್ಪ, ಪುಸ್ತಿನಾರಾಯಣಸ್ವಾಮಿ, ಕೃಷ್ಣೇಗೌಡ,ಅಪ್ಪಯ್ಯಪ್ಪ, ಅರಹಳ್ಳಿ ಮಂಜುನಾಥ್,ಸುಧಾಕರ್, ಅಮ್ಮೇರಹಳ್ಳಿ ಚಲಪತಿ, ರವಿ,ಹೂವಳ್ಳಿ ಚಂದ್ರಶೇಖರ್, ಭಗವಂತಪ್ಪಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು,ನೂರಾರುಕಾರ್ಯಕರ್ತರು ಹಾಜರಿದ್ದರು.