Advertisement

ELECTION 2023: ಕರಾವಳಿಯಲ್ಲೀಗ ಮುತ್ಸದ್ದಿಗಳ ಕೊರತೆ

11:43 PM Apr 09, 2023 | Team Udayavani |

ಶಾಸಕರಾದವರೆಲ್ಲರೂ ಮುತ್ಸದ್ದಿಗಳಾಗಲು ಸಾಧ್ಯವಿಲ್ಲ. ಹಾಗೆಯೇ ಸಚಿವರಾದ ತತ್‌ಕ್ಷಣವೇ ಮುತ್ಸದ್ದಿಗಳೆಂದೂ ಅಲ್ಲ. ಮುತ್ಸದ್ದಿಗಳೆಂದರೆ ಬರೀ ವಾದ ಮಾಡುವವರೂ ಅಲ್ಲ. ಅವರ ವಿಷಯ ಮಂಡನೆ, ಪರಿಣತಿಯನ್ನು ಆಡಳಿತ ಮತ್ತು ವಿಪಕ್ಷ ಸೇರಿದಂತೆ ಇಡೀ ಸದನವೇ ಹೌದೌದು ಎನ್ನುವಂತಿರಬೇಕು. ಮತದಾರರೂ ಕಿವಿಗೊಟ್ಟು ಆಲಿಸುವಂತಿರಬೇಕು. ಆ ಹಂತ ತಲುಪಲು ವಿಷಯ ಪರಿಣತಿ ಪಡೆಯುವ ಆಸಕ್ತಿ, ದೂರದೃಷ್ಟಿಯುಳ್ಳ ಆಲೋಚನ ಕ್ರಮ, ತಲಸ್ಪರ್ಶಿ ಅಧ್ಯಯನ, ಪರಿಶ್ರಮ ಅಗತ್ಯ. ಕರಾವಳಿಯಲ್ಲಿ ಹಿಂದಿದ್ದ ಆ ಮುತ್ಸದ್ದಿಗಳ ಖದರು ಈಗ ಕಡಿಮೆಯಾಗಿದೆ. ಯುವ ಜನಪ್ರತಿನಿಧಿಗಳು ಸಾಕಷ್ಟಿದ್ದು, ಉತ್ತಮ ಸಂಸದೀಯ ಪಟುಗಳಾಗಿ ರೂಪುಗೊಳ್ಳಬೇಕಿದೆ.

Advertisement

ಉಡುಪಿ: ಕರಾವಳಿ ಜಿಲ್ಲೆಯ ಕ್ಷೇತ್ರಗಳ ಮತದಾರರು ಬಯಸುವುದು ತಮ್ಮ ಜನಪ್ರತಿನಿಧಿ ಗಳು ಅತ್ಯುತ್ತಮ ಸಂಸದೀಯ ಪಟುಗಳಾಗ ಬೇಕೆಂದು.
ಬುದ್ಧಿವಂತರು, ಸುಶಿಕ್ಷಿತರ ಜಿಲ್ಲೆ ಎಂಬ ಹೆಸರು ಪಡೆದ ಉಡುಪಿಯಲ್ಲೀಗ ಮುತ್ಸದ್ದಿ ಹಾಗೂ ಉತ್ತಮ ಸಂಸದೀಯ ಪಟುವಿನ ಕೊರತೆ ಎದ್ದು ಕಾಣುತ್ತಿದೆ. ಈ ಚುನಾವಣೆಯದ್ದಾದರೂ ಆ ಸ್ಥಾನ ತುಂಬ ಬಲ್ಲವರು ಆಯ್ಕೆಯಾಗುತ್ತಾರೆಯೇ ಎಂಬ ನಿರೀಕ್ಷೆೆ ಮತದಾರರಲ್ಲಿ ಮನೆ ಮಾಡಿದೆ.

ಗೆದ್ದು ವಿಧಾನಸಭೆಗೆ ಹೋದವರಿಂದ ಮೂಲ ಸೌಕರ್ಯದ ನಿರೀಕ್ಷೆೆ ಸಾಮಾನ್ಯ. ಅದರೊಂದಿಗೆ ವಿಧಾನಸೌಧದ ಒಳಗೆ ತಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಯಾವ ರೀತಿಯ ಪ್ರಭಾವ ಹೊಂದಿದ್ದಾರೆ, ಯಾವ ರೀತಿಯ ದೂರದೃಷ್ಟಿಯ ಯೋಜನೆಗಳಿಗೆ ಹೇಗೆ ಅನುದಾನ ತರಿಸಿ, ಸೀಮಿತ ಅವಧಿಯೊಳಗೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ತೋರುವ ಆಸಕ್ತಿ, ಶ್ರಮ, ಬದ್ಧತೆಯನ್ನು ಗಮನಿಸುತ್ತಾರೆ. ಬಹು ಮುಖ್ಯವಾಗಿ ವಿಧಾನಮಂಡಲ ಅಧಿವೇಶನಗಳಲ್ಲಿ ಕ್ಷೇತ್ರದ ಸಮಸ್ಯೆಯನ್ನು ಎಷ್ಟು ಪರಿಣಾಮ ಕಾರಿಯಾಗಿ ಮಂಡಿಸಿ, ಪರಿಹಾರ ಕಂಡು ಕೊಳ್ಳುತ್ತಾರೆ ಎಂಬ ಕುತೂಹಲವೂ ಜನರಲ್ಲಿ ಇರುತ್ತದೆ. ಕಲಾಪದ ಸಂದರ್ಭದಲ್ಲಿ ಹಲವು ವಿಚಾರಗಳು ಬಂದಾಗ ನಮ್ಮ ಕ್ಷೇತ್ರದ ಶಾಸಕರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ, ಯಾರ ಪರವಾಗಿ ಮಾತ ನಾಡುತ್ತಾರೆ, ಎಷ್ಟು ಮಾತನಾಡುತ್ತಾರೆ. ಅದರಲ್ಲಿ ಜೊಳೆೆಷ್ಟು, ಕಾಳೆಷ್ಟು? ಎಲ್ಲವನ್ನೂ ಜನರು ನೋಡುತ್ತಿರುತ್ತಾರೆ. ನೀತಿ ನಿರೂಪಣೆಗಳಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆ ಎಂಬು ದನ್ನೂ ಮತದಾರರು ಗಮನಿಸುತ್ತಾರೆ. ಆ ದಿಸೆಯಲ್ಲಿ ಈ ವಿಧಾನಸಭೆಯಲ್ಲಿ ಕರಾವಳಿಯ ಸಮಸ್ಯೆಗಳು ಪ್ರತಿನಿಧಿಸಿದ್ದು, ಅಂಥದೊಂದು ವಾತಾವರಣ ನಿರ್ಮಿಸಲು ಕೆಲವರಷ್ಟೇ ಸೀಮಿತರಾಗಿದ್ದರು.

ಕೆಲವರು ತಮ್ಮ ಪ್ರಶ್ನೆ, ತಮ್ಮ ಉತ್ತರಕ್ಕಷ್ಟೇ ಸೀಮಿತರಾಗುತ್ತಾರೆ. ಸದನದಲ್ಲಿ ನಡೆಯುವ ಚರ್ಚೆಯಲ್ಲಿ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ ಮುಂತಾದ ಪ್ರಮುಖ ವಿಷಯಗಳಲ್ಲಿ ಪ್ರಸ್ತಾಪಿಸುವುದೇ ಕಡಿಮೆ. ಆದರೆ ಈ ಹಿಂದೆ ಕರಾವಳಿಯ ಹಲವು ಜನಪ್ರತಿನಿಧಿಗಳು ವಿವಿಧ ವಿಷಯಗಳಲ್ಲೂ ಪರಿಣಿತರಾಗಿದ್ದರು. ಕೆಲವು ನಿರ್ದಿಷ್ಟ ವಿಷಯಗಳು ಬಂದಾಗ ಇಡೀ ಸದನವೇ ಆವರ ಆಭಿಪ್ರಾಯಕ್ಕೆ ಹಾತೊರೆ ಯುತ್ತಿತ್ತು. ಈಗ ಆ ವಾತಾವರಣ ಮರು ನಿರ್ಮಾಣವಾಗಬೇಕಿದೆ.

ಎಲ್ಲ ಪಕ್ಷಗಳಿಗೂ ಸವಾಲು
ಕರಾವಳಿಯ ಉಭಯ ಜಿಲ್ಲೆಗಳ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಹಿಂದೆಯೂ ಗೆದ್ದಿತ್ತು. ಈ ಬಾರಿಯೂ ಗೆಲ್ಲುವ ಸಂಭವವಿದೆ. ಅದರಂತೆಯೇ ಕಾಂಗ್ರೆಸ್‌ಗೂ ಅವ
ಕಾಶ ಇದೆ. ಇಬ್ಬರೂ ಸಂಘಟನಾತ್ಮಕ ವಾಗಿ ಸಬಲವಾಗಿರುವ ಪಕ್ಷಗಳು. ಶಾಸಕರಾದವರು ಸದನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪ್ರಮುಖ ನೀತಿ, ನಿರೂಪಣೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಸಂಸದೀಯ ಪಟುವಾಗಿ, ಮುತ್ಸದ್ದಿಯಾಗಿ ರೂಪು ಗೊಳ್ಳ ಬೇಕು ಎಂಬ ಒತ್ತಾಸೆಯೂ ಸಂಘ ಪರಿವಾರ, ಬಿಜೆಪಿಯದ್ದು. ಇದೇ ಆಲೋಚನೆ ಕಾಂಗ್ರೆಸ್‌ಗೂ ಇದೆ. ಹೀಗಾಗಿ ಎರಡೂ ಪಕ್ಷಗಳು ಉತ್ತಮ ಸಂಸದೀಯ ಪಟುವಾಗಬಲ್ಲವರಿಗೆ ಅವಕಾಶ ಕೊಟ್ಟರೆ ಈ ಕೊರತೆಯನ್ನು ನೀಗಿಸಬಬಹುದಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next