Advertisement

Election 2023: ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲೂ ಕಾರ್ಕಳಕ್ಕೆ ಅಭ್ಯರ್ಥಿ ಇಲ್ಲ

12:11 AM Apr 07, 2023 | Team Udayavani |

ಕಾರ್ಕಳ: ಕಾರ್ಕಳ ಹೊರತು ಪಡಿಸಿ ಉಡುಪಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ 2ನೇ ಪಟ್ಟಿಯಲ್ಲೂ ಕಾರ್ಕಳವನ್ನು ಕೈ ಬಿಡಲಾಗಿದೆ.

Advertisement

ಉಡುಪಿ ಹಾಗೂ ಕಾರ್ಕಳ ಕ್ಷೇತ್ರ ಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲೇ ಪ್ರಕಟಿಸಲಾಗಿತ್ತು. ಈಗ ಎರಡನೇ ಪಟ್ಟಿ ಯಲ್ಲಿ ಉಡುಪಿ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಯನ್ನು ಘೋಷಿಸಲಾಗಿದೆ.

ಕಾರ್ಕಳ ಕಾಂಗ್ರೆಸ್‌ನಿಂದ ನಾಲ್ವರು ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದು ಮಂಜುನಾಥ ಪೂಜಾರಿ, ಡಿ.ಆರ್‌. ರಾಜು, ಉದಯ ಶೆಟ್ಟಿ ಮುನಿಯಾಲು ಹೆಸರೂ ಚಾಲ್ತಿಯಲ್ಲಿದೆ. ಪ್ರತಿಷ್ಠೆಯ ಕಣವಾಗಿರುವ ಕಾರಣ ಕಾಂಗ್ರೆಸ್‌ನ ಅಭ್ಯರ್ಥಿ ಯಾರೆಂಬ ಅಂಶ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಬಿಜೆಪಿಯ ಸಚಿವ ವಿ. ಸುನಿಲ್‌ ಕುಮಾರ್‌ ವಿರುದ್ಧ ಪ್ರಮೋದ್‌ ಮುತಾಲಿಕ್‌ ತೊಡೆ ತಟ್ಟಿದ್ದು ಬಿಜೆಪಿಯ ಮತ ಗಳನ್ನೇ ಹೆಚ್ಚು ಬುಟ್ಟಿಗೆ ಹಾಕಿಕೊಳ್ಳುತ್ತಾರೆ ಎನ್ನಲಾಗಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರಗಾರಿಕೆಯಲ್ಲಿ ತೊಡಗಿದೆ.

ದಿಢೀರ್‌ ಹುದ್ದೆ
ಈ ಮಧ್ಯೆ ಹೈಕಮಾಂಡ್‌ ನಡೆ ನಿಗೂಢವಾಗಿದೆ. ಇದರ ಬೆನ್ನಿಗೇ ಆಕಾಂಕ್ಷಿಗಳಲ್ಲಿ ಒಬ್ಬ ರಾದ ಡಿ.ಆರ್‌. ರಾಜು ಅವರನ್ನು ತತ್‌ಕ್ಷಣ ಜಾರಿಗೆ ಬರುವಂತೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಇದು ನಾನಾ ವಿಶ್ಲೇಷಣೆಗೆ ಕಾರಣವಾಗಿದೆ. ಹಾಗಾಗಿ ಹೈಕಮಾಂಡ್‌ ಮಂಜುನಾಥ ಪೂಜಾರಿ ಅಥವಾ ಉದಯ ಶೆಟ್ಟಿ ಮುನಿಯಾಲು ಅವರಲ್ಲಿ ಒಬ್ಬರನ್ನು ಆರಿಸುತ್ತದೆಯೋ ಮತ್ತೆ ಹೊಸ ಹೆಸರನ್ನು ಘೋಷಿಸುತ್ತದೆಯೋ ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next