ಶಿರಸಿ : ಅರಣ್ಯ ಭೂಮಿ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಮೃತರಾಗಿದ್ದಾರೆ. ಸಾಗುವಳಿದಾರರಿಗೆ ನ್ಯಾಯ ಸಿಗಲು ನಾನು ನನ್ನ ಕೊನೆಯ ಉಸಿರು ಇರುವ ತನಕ ಹೋರಾಟ ಮಾಡುತ್ತೇನೆ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಅವರು ಅರಣ್ಯಭೂಮಿ ಹೋರಾಟಕ್ಕೆ ಮೂರು ದಶಕ ಸಂದ ವೇಳೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅರಣ್ಯ ಅತಿಕ್ರಮಣದಾರರಿಗೆ ನ್ಯಾಯ ಕೊಡುವಲ್ಲಿ ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಗೊಂದಲ ಸೃಷ್ಟಿಸಿದ ಹುಚ್ಚರಿದ್ದಾರೆ. ಅವರಿಂದಲೇ ಸಮಸ್ಯೆ ಆಗಿದೆ. ಅಧಿಕಾರದಲ್ಲಿ ಇದ್ದವರಿಗೂ ಅಷ್ಟೇ ಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಹಿಂದೂ ದೇವಸ್ಥಾನಗಳು ಮಾತ್ರ ಟಾರ್ಗೇಟ್ ಮಾಡುತ್ತಿರುವುದು ಯಾಕೆ..!? : ಪ್ರತಾಪ್ ಸಿಂಹ
ಹಿಂದೆ ಗೇಣಿದಾರರಿಗೆ ನೂರಕ್ಕೆ ನೂರು ನ್ಯಾಯ ನೀಡುವಲ್ಲಿ ಯಶಸ್ವಿ ಆಗಿದ್ದೇನೆ ಎಂಬ ನೆಮ್ಮದಿ ಇದೆ. ಈ ಹೋರಾಟದ ನೆಲೆಗಟ್ಟಿನಲ್ಲಿಯೇ ಅರಣ್ಯ ಅತಿಕ್ರಮಣದಾರರ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಅರಣ್ಯ ಭೂಮಿ ಸಾಗವಳಿದಾರರಿಗೆ ಭೂ ಹಕ್ಕು ನೀಡಲು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ ಎಂಬುದು ದುಃಖದ ಸಂಗತಿ. ಇಡೀ ರಾಷ್ಟ್ರದಲ್ಲಿಯೇ ಈ ಸಮಸ್ಯೆ ಇರುವುದು ನಮ್ಮ ದುರಂತ ಎಂದು ಹೇಳಿದ್ದಾರೆ.
ಈ ಹೋರಾಟಕ್ಕೆ ಮುಕ್ತಾಯ ಇಲ್ಲ. ರವೀಂದ್ರ ನಾಯ್ಕ ಅವರ ಜೊತೆ ಸಾಯುವವರೆಗೂ ನಾನು ಹೋರಾಟ ನಡೆಸುತ್ತೇನೆ. 14 ಸಾವಿರ ಅರ್ಜಿಯನ್ನು ಸಹಾಯಕ ಆಯುಕ್ತ ತಿರಸ್ಕರಿಸುತ್ತಾರೆ. ಶೋಷಿತ ವರ್ಗದಿಂದ ಬಂದ ಅಧಿಕಾರಿಯೇ ಶೋಷಿತರ ಬಗ್ಗೆ ಕಾಳಜಿ ವಹಿಸದಿರುವುದು ದುರಂತ. ಶೇ. 62.82 ಅರ್ಜಿ ತಿರಸ್ಕೃತವಾಗಿದೆ. ಕೇವಲ ಶೇ.3 ಜನರಿಗೆ ಮಾತ್ರ ನ್ಯಾಯ ಸಿಕ್ಕಿದೆ. ಇನ್ನೂ ಸರ್ಕಾರದ ಕಣ್ಣೂ ತೆರೆಸಲು ಸಾಧ್ಯವಾಗುತ್ತಿಲ್ಲ. ಅರಣ್ಯದ ಒಳಗಡೆ ಬದುಕಿದವರು ಏನು ಮಾಡಬೇಕು ? ಎಂದೂ ಕೇಳಿದ್ದಾರೆ.
ಹೋರಾಟಗಾರ ಏ. ರವೀಂದ್ರ ಮಾತನಾಡಿ, ಹೋರಾಟಕ್ಕೆ 30 ವರ್ಷ ಆದರೂ ನಮ್ಮ ಉತ್ಸಾಹ ಕುಗ್ಗಿಲ್ಲ. ಹೋರಾಟ ನ್ಯಾಯ ಸಿಗುವ ತನಕ ಹೋರಾಟ ನಡೆಸುವದಾಗಿ ಹೇಳಿದರು. ಇದೇ ವೇಳೆ ಕಾಗೋಡು ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ : ಟರ್ಟಲ್ ಸಂರಕ್ಷಕ ಡಾ. ಶೈಲೇಂದ್ರ ಸಿಂಗ್ | ಆಮೆಗಳ ಉಳಿವಿಗೆ ಸಿಂಗ್ ಕೊಡುಗೆ ಅನನ್ಯ