Advertisement

ಥರ್ಡ್‌ ಪಾರ್ಟಿಯಲ್ಲಿ ಹಿರಿಯರ ಕಥೆ

11:51 AM Dec 26, 2017 | Team Udayavani |

ಹಾರರ್‌ ಹಿನ್ನೆಲೆಯಲ್ಲಿ ಈ ವರ್ಷ ತೆರೆಕಂಡ ಚಿತ್ರಗಳಲ್ಲಿ “ಕರಾಲಿ’ ಚಿತ್ರದ ಬಗ್ಗೆ ಒಂದಷ್ಟು ಮೆಚ್ಚುಗೆಯ ಮಾತುಗಳು ಕೇಳಿಬಂದುವು. ಹಾರರ್‌ ಶೇಡ್‌ನ‌ಲ್ಲಿ ಒಂದು ಸೆಂಟಿಮೆಂಟ್‌ ಕಥೆ ಹೇಳಿದ್ದರು ನಿರ್ದೇಶಕ ದಕ್ಷಿಣಾ ಮೂರ್ತಿ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೂಡಾ ಕೇಳಿಬಂದಿದ್ದವು. ಆದರೆ, ಹೊಸಬರಿಗೆ ಎದುರಾಗುವ ಸಹಜ ಸಮಸ್ಯೆಯಾದ ಥಿಯೇಟರ್‌ ಸಮಸ್ಯೆ ಎದುರಾಯಿತು.

Advertisement

ಈಗ ನಿರ್ದೇಶಕ ದಕ್ಷಿಣ ಮೂರ್ತಿ ಏನು ಮಾಡುತ್ತಿದ್ದಾರೆಂದರೆ ಥರ್ಡ್‌ ಪಾರ್ಟಿ ಕಡೆ ಬೆರಳು ತೋರಿಸಬೇಕು. ಹೌದು, ದಕ್ಷಿಣಾ ಮೂರ್ತಿ ಈಗ “ಥರ್ಡ್‌ ಪಾರ್ಟಿ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿ, ಬಹುತೇಕ ಮುಗಿಸಿದ್ದಾರೆ. “ಕಿರಿಕ್‌ ಪಾರ್ಟಿ’ಗೂ ಇದಕ್ಕೂ ಏನಾದರು ಸಂಬಂಧವಿದೆಯಾ ಎಂದು ನೀವು ಕೇಳುವಂತಿಲ್ಲ. ಅದೇ ಬೇರೆ ಇದೇ ಬೇರೆ. 

ಈ ಚಿತ್ರದಲ್ಲಿ ಹೀರೋ ಇಲ್ಲ. ಒಂದಷ್ಟು ಮಂದಿ ಹಿರಿಯ ಕಲಾವಿದರನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ರಾಜೇಶ್‌ ಕಾರಂತ್‌, ರಾಕ್‌ಲೈನ್‌ ಸುಧಾಕರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರದಲ್ಲಿ ಕೆಲವು ಮನೆಗಳಲ್ಲಿ ಹಿರಿಯರನ್ನು ಎಷ್ಟು ನಿಕೃಷ್ಟವಾಗಿ ನೋಡಲಾಗುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ಕಥೆ ಹೇಳಿದ್ದಾರಂತೆ. ಚಿತ್ರದ ಹಾಡುಗಳ ಚಿತ್ರೀಕರಣ ಬಾಕಿ ಇದ್ದು,

ಮುಂದಿನ ತಿಂಗಳು ಆರಂಭವಾಗುವ ಸಾಧ್ಯತೆ ಇದೆಯಂತೆ. “ಹಿರಿಯ ಜೀವಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಕುರಿತು ಈ ಬಾರಿ ಕಥೆ ಮಾಡಿದ್ದೇನೆ. ಇದು ಕೂಡಾ ಸೆಂಟಿಮೆಂಟ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದು, ಚಿತ್ರರಂಗದ ಬಹುತೇಕ ಹಿರಿಯ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ ದಕ್ಷಿಣಾ ಮೂರ್ತಿ. ಸದ್ಯ ಅವರು ಕಾಮಿಡಿ ಶೋವೊಂದರ ಬರವಣಿಗೆಯಲ್ಲೂ ಬಿಝಿ. 

Advertisement

Udayavani is now on Telegram. Click here to join our channel and stay updated with the latest news.

Next