Advertisement

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಿಖ್‌ ವೃದ್ಧನ ಮೇಲೆ ಹಲ್ಲೆ

06:22 PM Apr 05, 2022 | Team Udayavani |

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ನಲ್ಲಿ 70 ವರ್ಷದ ಸಿಖ್‌ ಧರ್ಮೀಯನ ಮೇಲೆ ಹಲ್ಲೆ ನಡೆದಿದ್ದು, ಈ ವಿಚಾರವಾಗಿ ಅಲ್ಲಿನ ಭಾರತೀಯ ದೂತಾವಾಸ ಖಂಡನೆ ವ್ಯಕ್ತಪಡಿಸಿದೆ.

Advertisement

ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿರುವ ರಿಚ್‌ಮಂಡ್‌ ಹಿಲ್‌ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ನಿರ್ಮಲ್‌ ಸಿಂಗ್‌ ಹೆಸರಿನ ವೃದ್ಧನ ಮೇಲೆ ದಾಳಿ ನಡೆದಿದ್ದು, ಅವರ ದೇಹದಿಂದ ರಕ್ತ ಸುರಿಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ:ಗೋವಾವನ್ನು ಭಾರತದ ಪ್ರವಾಸಿ ರಾಜಧಾನಿಯನ್ನಾಗಿ ಮಾಡಲು ಸರ್ಕಾರದಿಂದ ಹೆಚ್ಚಿನ ಪ್ರಯತ್ನ: ಸಾವಂತ್

ಸೋಮವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ದೂತಾವಾಸ ಕಚೇರಿ , ಸ್ಥಳೀಯ ಪೊಲೀಸರು, ಸಂಘಟನೆ ಜೊತೆ ನಿಕಟ ಸಂಪರ್ಕದಲ್ಲಿದ್ದೇವೆ.

ಘಟನೆ ಬಗ್ಗೆ ಸೂಕ್ತ ತನಿಖೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next