Advertisement

ದಾಂಪತ್ಯಕ್ಕೆ ಕಾಲಿಟ್ಟ ಹಿರಿಯ ಪ್ರೇಮಿಗಳು

11:59 PM Dec 02, 2021 | Team Udayavani |

ಮೇಲುಕೋಟೆ: ನೈಜ ಪ್ರೀತಿಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಮೇಲುಕೋಟೆ ಯತಿರಾಜದಾಸರ್‌ ಗುರುಪೀಠದಲ್ಲಿ ನಡೆದ ಅಪರೂಪದ ವಿವಾಹ ಸಾಕ್ಷಿಯಾಗಿಜೆ. ಇಲ್ಲಿ 65 ವರ್ಷ ಹಾಗೂ 55 ವರ್ಷದ ವಧು-ವರರು ಹಸೆಮಣೆಯೇರಿದ್ದಾರೆ.

Advertisement

ಮೂಲತಃ ಹೊಳೆನರಸೀಪುರ ದವರಾದ ಚಿಕ್ಕಣ್ಣ ಹಿಂದೆ ಮೈಸೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಅತ್ತೆ ಮಗಳಾದ ಜಯಮ್ಮರನ್ನು ಪ್ರೇಮಿಸುತ್ತಿದ್ದರು.

ಆದರೆ ಮದುವೆಗೆ ಜಯಮ್ಮನ ಮನೆಯವರು ಒಪ್ಪದೆ, ಆಕೆಗೆ ಬೇರೆ ವಿವಾಹ ಮಾಡಿದ್ದರು. ಆದರೆ ಜಯಮ್ಮರನ್ನು ಪತಿ ತೊರೆದಿದ್ದ. ಜಯಮ್ಮರಿಗೆ ವಿವಾಹವಾಗಿ 35 ವರ್ಷ ಕಳೆದಿದ್ದರೂ ಚಿಕ್ಕಣ್ಣ ಮದುವೆಯಾಗಿರಲಿಲ್ಲ.

ಈಚೆಗೆ ಇವರಿಬ್ಬರೂ ಭೇಟಿಯಾಗಿ ವಿವಾಹವಾಗಲು ನಿಶ್ಚಯಿಸಿದ್ದರು. ಅದರಂತೆ ಗುರುವಾರ ಇವರು ಸತಿಪತಿಗಳಾಗಿದ್ದಾರೆ.

ಇದನ್ನೂ ಓದಿ:ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

Advertisement
Advertisement

Udayavani is now on Telegram. Click here to join our channel and stay updated with the latest news.

Next