Advertisement

ಕುವೈಟ್‌ನಿಂದ ಉಡುಪಿಗೆ ಹೊರಟ ಮಹಿಳೆ ನಾಪತ್ತೆ!

06:56 AM Sep 16, 2020 | mahesh |

ಉಡುಪಿ: ಕುವೈಟ್‌ನಲ್ಲಿ 28 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಸೆ. 12ರಂದು ಊರಿಗೆಂದು ಹೊರಟ 63 ವರ್ಷ ಪ್ರಾಯದ ಉಡುಪಿ ಜಿಲ್ಲೆಯ ಮಹಿಳೆಯೊಬ್ಬರು ವಿಮಾನ ನಿಲ್ದಾಣದ ತನಕ ಬಂದು ಬಳಿಕ ನಾಪತ್ತೆಯಾದ ಘಟನೆ ಸಂಭವಿಸಿದೆ.

Advertisement

ಹೆಚ್ಚಿನ ಓದು ಬರಹ ಅರಿಯದ ಮಹಿಳೆ ಅಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಕಳೆದೆರಡು ತಿಂಗಳುಗಳಿಂದ ಕೊರೊನಾ ಕಾರಣದಿಂದ ಕೆಲಸವೂ ಇದ್ದಿರಲಿಲ್ಲ. ಸಮಸ್ಯೆಗಳೂ ಇವೆ. ವಾರದ ಹಿಂದೆ ಬಿದ್ದು ತಾಗಿಸಿಕೊಂಡಿದ್ದರು. ಮಗಳ ಸಲಹೆಯಂತೆ ಊರಿಗೆ ಮರಳಲು ಸೆ. 12ರಂದು ಕುವೈಟ್‌ನಿಂದ ಬೆಂಗಳೂರಿಗೆ ಬರುವ ಇಂಡಿಗೋ ವಿಮಾನದಲ್ಲಿ ಟಿಕೆಟ್‌ ಮಾಡಲಾಗಿತ್ತು. ಆಗಾಗ್ಗೆ ಬಂದು ಹೋಗುತ್ತಿದ್ದ ಅವರಿಗೆ ಪ್ರಯಾಣವೇನೂ ಹೊಸದಲ್ಲ. ಕೊನೆಯ ಹಂತದಲ್ಲಿ ಪಾಸ್‌ಪೋರ್ಟ್‌ ಇಮಿಗ್ರೇಶನ್‌ ಸೆಂಟರ್‌ನಲ್ಲಿ ಅವರನ್ನು ತಡೆದರು. ಏಕೆ? ಏನಾಯಿತು ಎನ್ನುವುದು ಅವರಿಗೆ ಗೊತ್ತಾಗಲಿಲ್ಲ. ಬಳಿಕ ತಾಯಿಯ ದೂರವಾಣಿ ರಿಂಗಣಿಸುತ್ತಿದೆಯೆ ವಿನಾ ಸಂಪರ್ಕಕ್ಕೆ ಸಿಗುತ್ತಿಲ್ಲ. “ನನ್ನ ಅಮ್ಮನನ್ನು ಹೇಗಾದರೂ ಮಾಡಿ ಊರಿಗೆ ಬರುವಂತೆ ಮಾಡಿ’ ಎಂದು ಅವರ ಪುತ್ರಿ ಮನವಿ ಮಾಡಿದ್ದಾರೆ.

ಬಹ್ರೈನ್‌ನಲ್ಲಿರುವ ಶಶಿಧರ ಶೆಟ್ಟಿ, ಕುವೈಟ್‌ನಲ್ಲಿರುವ ಮೋಹನದಾಸ ಕಾಮತ್‌, ಲತೀಫ್, ಅನಿವಾಸಿ ಭಾರತೀಯ ವೇದಿಕೆಯ ಆರತಿ ಕೃಷ್ಣ ಮತ್ತು ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ತನ್ನ ತಾಯಿಯನ್ನು ಹುಡುಕಿ ಕೊಡುವ ಭರವಸೆ ನೀಡಿದ್ದಾರೆ ಎಂದು ಮಹಿಳೆಯ ಪುತ್ರಿ ತಿಳಿಸಿದ್ದಾರೆ.

ರಾಯಭಾರ ಕಚೇರಿ ಸ್ಪಂದನೆ
ಕುವೈಟ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯವರು ತುರ್ತಾಗಿ ಸ್ಪಂದಿಸಿದ್ದಾರೆ. ಮಂಗಳ ವಾರ ರಾತ್ರಿ ದೂರವಾಣಿ ಕರೆ ನೀಡಿ ತಾಯಿ ಕ್ಷೇಮ ವಾಗಿದ್ದಾರೆ. ಇನ್ನು 10 ದಿನಗಳಲ್ಲಿ ಸುರಕ್ಷಿತವಾಗಿ ಊರಿಗೆ ಕಳುಹಿಸಿಕೊಡುತ್ತೇವೆಂದು ಭರವಸೆ ನೀಡಿದ್ದಾರೆ.
– ಸಮಸ್ಯೆಗೊಳಗಾದ ಮಹಿಳೆಯ ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next