Advertisement

ಕೋವಿಡ್ ನಿಂದ ದೂರವಾಗಿದ್ದ ವೃದ್ಧ ದಂಪತಿ ಮತ್ತೆ ಒಂದಾದ್ರು : ಆ ಕ್ಷಣ ಹೇಗಿತ್ತು ನೋಡಿ!

03:35 PM Apr 17, 2021 | Team Udayavani |

ನವದೆಹಲಿ : ಕೋವಿಡ್ ವೈರಸ್ ಎಷ್ಟೋ ಜನರ ಸಂಬಂಧಗಳನ್ನು ದೂರ ದೂರ ಮಾಡಿದೆ. ಅಪ್ಪ ಅಮ್ಮನಿಂದ ಮಕ್ಕಳನ್ನು ದೂರ ಮಾಡಿದೆ. ಗಂಡನಿಂದ ಹೆಂಡತಿಯನ್ನು ದೂರ ಮಾಡಿದೆ. ಪ್ರಿಯಕರನಿಂದ ಪ್ರೇಯಸಿಯನ್ನೇ ದೂರ ಮಾಡಿದೆ. ಇನ್ನು ಈ ಕೋವಿಡ್ ಇಂಗ್ಲೆಂಡ್ ನ ಆ ಇಬ್ಬರು ವಯೋ ವೃದ್ಧರನ್ನು ದೂರ ಮಾಡಿದ್ದು, ಸದ್ಯ ಬಹಳ ದಿನಗಳ ನಂತರ ಆ ವೃದ್ಧ ದಂಪತಿಗಳು ಒಂದಾಗಿದ್ದಾರೆ. ಆ ಇಬ್ಬರು ಒಂದಾಗುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗುತ್ತಿದೆ.

Advertisement

ಮೇರಿ ಡೆವಿಸ್ (89) ಎಂಬುವವರು ತನ್ನ ಪತಿ ಗಾರ್ಡನ್ (68) ಅವರನ್ನು ಬರೋಬ್ಬರಿ 8 ತಿಂಗಳ ನಂತರ ಭೇಟಿ ಮಾಡಿದ್ದಾರೆ. ಈ ಇಬ್ಬರು ಕಳೆದ ವರ್ಷ ಕೋವಿಡ್ ಕಾರಣದಿಂದ ಬೇರೆ ಬೇರೆಯಾಗಿದ್ದರು. ಗಾರ್ಡನ್ ಅವರು ಕೋವಿಡ್ ಸೋಂಕಿನ ಕಾರಣ ಕೇರ್ ಸೆಂಟರ್ ಗೆ ಸೇರಿಕೊಂಡಿದ್ದರು. ಇತ್ತ ಮೇರಿ ಕೂಡ ಮತ್ತೊಂದು ಕೇರ್ ಸೆಂಟರ್ ನಲ್ಲಿ ಉಳಿದು ಕೊಂಡಿದ್ದರು. ಈ ಕಾರಣದಿಂದ ಈ ಇಬ್ಬರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ಸದ್ಯ ಮೇರಿ ಇರುವ ಕೇರ್ ಸೆಂಟರ್ ನಲ್ಲಿ ಒಂದು ರೂಮ್ ಖಾಲಿ ಇರುವ ಕಾರಣ ಗಾರ್ಡನ್ ಕೂಡ ಮೇರಿ ಇರುವ ಕೇರ್ ಸೆಂಟರ್ ಗೆ ಬಂದಿದ್ದಾರೆ. ಈ ಮೂಲಕ 8 ತಿಂಗಳ ನಂತರ ಈ ಇಬ್ಬರು ವೃದ್ಧ ದಂಪತಿಗಳು ಮತ್ತೆ ಒಂದಾಗಿದ್ದಾರೆ.

ಈ ಸುಂದರ ಕ್ಷಣಗಳನ್ನು ಕೇರ್ ಸೆಂಟರ್ ನಲ್ಲಿ ಇದ್ದ  ಯಾರೋ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋ ಬರೋಬ್ಬರಿ 4 ಮಿಲಿಯನ್ (40 ಲಕ್ಷ) ವೀಕ್ಷಣೆ ಪಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next