Advertisement

ಅಗಲಿದ ಹಿರಿಯ ಕಲಾವಿದ ಸುಂದರ ಶೆಟ್ಟಿ 

12:30 AM Mar 08, 2019 | |

 ತೆಂಕುತಿಟ್ಟಿನ ಹವ್ಯಾಸಿ ಹಿರಿಯ ಕಲಾವಿದ ಸುಂದರ ಶೆಟ್ಟಿ ಪಳ್ಳತ್ತಡ್ಕ 89ನೇ ವಯಸ್ಸನಲ್ಲಿ  ಫೆ. 2ರಂದು ನಿಧನರಾಗಿದ್ದಾರೆ. ಅರ್ಥ ದಾರಿಯಾಗಿ, ವೇಷಧಾರಿಯಾಗಿ, ಬಹುಭಾಷಾ ವಿದ್ವಾಂಸರಾಗಿ ಶಿಕ್ಷಕರಾಗಿ ಗುರುತಿಸಿಕೊಂಡವರು.  

Advertisement

ಮೀಯಪದವು ಶಾಲೆಯಲ್ಲಿ ಅಧ್ಯಾಪನ ನಡೆಸುತ್ತಿದ್ದ ಕಾಲದಲ್ಲೇ ತೆಂಕುತಿಟ್ಟಿನ ಕುರಿಯ ವಿಠಲ ಶಾಸ್ತ್ರಿಗಳಿಂದ ಯಕ್ಷಗಾನ ನಾಟ್ಯವನ್ನು ಕಲಿತು ರಂಗದಲ್ಲಿ ಮೆರೆದವರು. ಆಗಿನ ಕಾಲದ ಹಿರಿಯ ನಾಟ್ಯ ಗುರು ಕಣ್ಣನ್‌ ಅವರಿಂದ ತಾಂಡವ ನೃತ್ಯವನ್ನೂ ಕಲಿತು ರಂಗದಲ್ಲಿ ಪ್ರದರ್ಶಿಸಿ ಶಿವನ ಪಾತ್ರಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟವರು. ಮುಂದೆ ಧರ್ಮಸ್ಥಳ ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿ ಕಲಾವೃತ್ತಿ ಬದುಕಿನ ಸಿಹಿ ಕಹಿಗಳನ್ನು ತಿಂದುಂಡವರು. ಅವರ ತಾಂಡವನೃತ್ಯ ಪ್ರದರ್ಶನಕ್ಕಾಗಿಯೇ ಶಿವ ಪ್ರಧಾನವಾದ ಪ್ರಸಂಗಗಳನ್ನು ಮೇಳದಲ್ಲಿ ಹಾಗೂ ಮುಂದೆ ಹವ್ಯಾಸಿ ರಂಗದಲ್ಲೂ ಇರಿಸಲಾಗುತ್ತಿತು. ಭಸ್ಮಾಸುರ ಮೋಹಿನಿಯ ಶಿವ, ವಿಷ್ಣು, ದಕ್ಷಾಧ್ವರದ ಶಿವ, ಬ್ರಹ್ಮಕಪಾಲದ ಶಿವ, ಹಾಗೇ ವಿವಿಧ ಪೌರಾಣಿಕ ಪ್ರಸಂಗಗಳಲ್ಲಿ ರಾಮ, ಕೃಷ್ಣ, ಮನ್ಮಥ, ವಿಷ್ಣು ಪಾತ್ರಗಳು ಇವರಿಗೆ ಹೆಚ್ಚು ಖ್ಯಾತಿಯನ್ನೂ ಬೇಡಿಕೆಯನ್ನೂ ತಂದಿತ್ತು. ದೇವಿ ಮಹಾತ್ಮೆಯ ದೇವಿ ಹಾಗೂ ಬ್ರಹ್ಮನ ಪಾತ್ರಗಳು ಬಹುಬೇಡಿಕೆಯನ್ನು ಪಡೆದಿತ್ತು. ರಾಮಕೃಷ್ಣ ವಿದ್ಯಾಲಯದಲ್ಲಿ ವಾರ್ಷಿಕ ಯಕ್ಷಗಾನ ಕಾರ್ಯಕ್ರಮಗಳನ್ನು ಸಂಘಟಿಸಿ ನಡೆಸುತ್ತಿದ್ದರು. ಸಾಹಿತ್ಯಪೂರ್ಣ ಹಾಗೂ ಲಾಲಿತ್ಯಪೂರ್ಣ ಮಾತುಗಳಿಂದ ವ್ಯಾಕರಣ ಬದ್ಧ ಶೈಲಿಯಿಂದ ಕೂಟಗಳಲ್ಲೂ ಭಾಗವಹಿಸುತ್ತಿದ್ದ ಸುಂದರ ಶೆಟ್ಟಿ ಕನ್ನಡ, ಹಿಂದಿ, ಸಂಸ್ಕೃತ, ತುಳು ಭಾಷೆಗಳ ಬಗ್ಗೆ  ಅಧ್ಯಯನ ಮಾಡಿದವರು. 

ಯೋಗೀಶ ರಾವ್‌, ಚಿಗುರುಪಾದೆ 

Advertisement

Udayavani is now on Telegram. Click here to join our channel and stay updated with the latest news.

Next