Advertisement
ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್‌ಎ ಸಂಘಟನೆಯ ನೇತೃತ್ವದಲ್ಲಿ ಈ ಬಾರಿ ಸುಮಾರು 21 ಕಡೆಗಳಲ್ಲಿ ಸಮರೋಪಾದಿಯಲ್ಲಿ ಯಕ್ಷಗಾನ ಪ್ರದರ್ಶನ ನಡೆದದ್ದು ಒಂದು ದಾಖಲೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್‌ಎ ಅಧ್ಯಕ್ಷರಾದ ಡಾ| ಅರವಿಂದ ಉಪಾಧ್ಯಾಯರು. ಯಕ್ಷಗಾನ ತಂಡದ ಪ್ರಯಾಣ, ಪ್ರದರ್ಶನವನ್ನು ಏರ್ಪಡಿಸಲು ಆಯಾಯ ರಾಜ್ಯದ ಸಂಘಟಕರನ್ನು ಸಂಪರ್ಕಿಸುವುದು, ಸೂಕ್ತ ಸಮಯದಲ್ಲಿ ಮಾಹಿತಿಯನ್ನು ಒದಗಿಸಿವುದು ಹೀಗೆ ಹಲವಾರು ಕೆಲಸಗಳನ್ನು ಬಹಳ ತಾಳ್ಮೆಯಿಂದ ಮಾಡಿದವರಿಗೆ ಧನ್ಯವಾದ ಹೇಳಿದರು ಕಡಿಮೆಯೇ. ಹಾಗೆಯೇ ಫೌಂಡೇಶನ್‌ನ ಇನ್ನಿತರ ಪದಾಧಿಕಾರಿಗಳಿಗೂ ನನ್ನ ಧನ್ಯವಾದಗಳು.
Related Articles
Advertisement
ಸತೀಶ್ ಪಟ್ಲರ ಸಾರಥ್ಯದಲ್ಲಿ ಒಟ್ಟಾರೆಯಾಗಿ ಈ ಬಾರಿಯ ಅಮೆರಿಕದ ತಿರುಗಾಟ ಹಲವಾರು ಸಾಧನೆಯನ್ನು ಮಾಡಿದ್ದೂ ಎಲ್ಲ ಕಲಾವಿದರಿಗೂ, ಫೌಂಡೇಶನ್‌ನ ಪದಾಧಿಕಾರಿಗಳಿಗೂ, ಸಂಘಟಕರಿಗೂ ಮುಖ್ಯವಾಗಿ ನಮ್ಮೂರಿನ ಶ್ರೀಮಂತ ಕಲೆಯಾದ ಯಕ್ಷಗಾನಕ್ಕೆ ಸಂದ ಜಯ. ಮುಂಬರುವ ವರ್ಷಗಳಲ್ಲಿ ಇನ್ನೂ ಹಲವಾರು ಗರಿಮೆಗಳನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡವು ಗಳಿಸಲಿ ಎಂದು ಆಶಿಸುತಾ, ಪಟ್ಲರಿಂದ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
*ಪ್ರಶಾಂತ ಕುಮಾರ್ ಮಟ್ಟು, ಮಿಚಿಗನ್