Advertisement

ತಿರುವು: ಅಪಘಾತ ತಪ್ಪಿಸಲು ಸಂಚಾರ ಠಾಣೆಯಿಂದ ಕ್ರಮ

02:33 PM Mar 19, 2017 | Team Udayavani |

ನಗರ : ನಗರದ ತಿರುವು ರಸ್ತೆಗಳಲ್ಲಿ ಅಪಘಾತವನ್ನು ತಪ್ಪಿಸುವ ದೃಷ್ಟಿಯಿಂದ ಪುತ್ತೂರು ನಗರ ಸಂಚಾರ ಪೊಲೀಸ್‌ ಇಲಾಖೆ ತಿರುವು ಪ್ರದೇಶದಲ್ಲಿ ರಸ್ತೆ ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದೆ.

Advertisement

ಡಿವೈಎಸ್‌ಪಿ ಭಾಸ್ಕರ ರೈ ನಿರ್ದೇಶನದಂತೆ ಪುತ್ತೂರು ಸಂಚಾರ ಠಾಣೆಯ ಎಸ್‌ಐ ವಿಟuಲ ಶೆಟ್ಟಿ ಅವರ ನೇತೃತ್ವದಲ್ಲಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗುರುವಾರ ನಗರದ ಅಪಘಾತ ವಲಯ ಉರ್ಲಾಂಡಿ ಬೈಪಾಸ್‌ ರಸ್ತೆಯಲ್ಲಿನ ತಿರುವು ರಸ್ತೆಯನ್ನು ಸ್ಥಳೀಯ ಜಮೀನು ಮಾಲಕರ ಸಹಕಾರದಿಂದ ವಿಸ್ತರಿಸಲಾಯಿತು. ಸ್ಥಳೀಯ ನಾಗರಿಕರ, ಜೇಸಿಬಿ ಯಂತ್ರಗಳ ಸಹಾಯದಿಂದ ಈ ಕಾರ್ಯ ನಡೆದಿದೆ.

ಅಪಘಾತಕ್ಕೆ ಕಡಿವಾಣ ಹಾಕಬೇಕೆಂಬ ಉದ್ದೇಶದಿಂದ ಅಪಾಯಕಾರಿ ತಿರುವು ಪ್ರದೇಶಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ. ತಿರುವು ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಇಲಾಖೆ ಮುಂದಾಗಿದೆ. ನಗರದ ಬಳಿ ಎರಡು ಹೊಸ ಬ್ಯಾರಿಕೇಡರ್‌ ಅಳವಡಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಸಂಚಾರ ಠಾಣೆಯ ಎಸ್‌ಐ ವಿಟuಲ ಶೆಟ್ಟಿ ಪ್ರತಿಕಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next