Advertisement

ಆರೋಗ್ಯ ಸಂಜೀವಿನಿ ಈ ಏಲಕ್ಕಿ

02:22 PM May 03, 2021 | ಆದರ್ಶ ಕೊಡಚಾದ್ರಿ |

ಭಾರತದ ಶ್ರೀಮಂತ ಪರಂಪರೆಯಲ್ಲಿ ಸಾಂಬಾರು ಪದಾರ್ಥಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಇಲ್ಲಿನ ವಿವಿಧ ಮಾಸಾಲೆ ಪದಾರ್ಥಗಳು ಬಾಯಿಗೆ ರುಚಿ ನೀಡುವುದರೊಂದಿಗೆ ಆರೋಗ್ಯಕ್ಕೆ ಪೂರಕವಾಗುವ ಹಲವಾರು ಅಂಶಗಳನ್ನು ಒಳಗೊಂಡಿದೆ.

Advertisement

ಏಲಕ್ಕಿ ತನ್ನ ಅದ್ಭುತ ಸುವಾಸನೆಯೊಂದಿಗೆ ಮಸಾಲೆ ಪದಾರ್ಥಗಳಲ್ಲಿ ಅಗ್ರ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಮಸಾಲೆಗಳ ರಾಣಿ ಎಂದು ಕರೆಸಿಕೊಳ್ಳುವ ಈ ಏಲಕ್ಕಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವುದನ್ನೂ ಒಳಗೊಂಡಂತೆ  ಉತ್ತಮ  ಆರೋಗ್ಯಕ್ಕೂ ವರದಾನವಾಗಿದೆ.

ಏಲಕ್ಕಿಯಲ್ಲಿ ಶೇ.45 ರಷ್ಟು ಆಲ್ಫಾ-ಟೆರ್ಫಿನೋಲ್, ಶೇ.27 ಮೈರ್ಸೀನ್, ಶೇ.8ರಷ್ಟು ಲಿಮೋನೆನ್, ಶೇ.6ರಷ್ಟು  ಮೆಂಥೋನ್ ಫೈಟೋಕೆಮಿಕಲ್ಸ್‍ಗಳಿದ್ದು, ಇವೆಲ್ಲವೂ ಸುವಾಸನೆ ಭರಿತ ಗಿಡಮೂಲಿಕೆಯ ಚಿಕಿತ್ಸಕ ಗುಣಗಳಾಗಿದೆ. ಏಲಕ್ಕಿ ವಾತ, ಪಿತ್ತ ಮತ್ತು ಕಫದ ದೋಷಗಳನ್ನು ಸಮತೋಲನದಲ್ಲಿ ನಿಯಂತ್ರಿಸುವ ಗುಣವನ್ನು ಪಡೆದುಕೊಂಡಿದ್ದು, ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ಏಲಕ್ಕಿಯ  ಉಪಯೋಗಗಳು

ಏಲಕ್ಕಿ ಸೇವನೆಯನ್ನು ಮಾಡುವುದರಿಂದ ಹಲವಾರು ಉಪಯೋಗಗಳಿದ್ದು, ಉತ್ತಮ ಆರೋಗ್ಯಕ್ಕೆ ಇದು ಸಹಾಯಕವಾಗುತ್ತದೆ.

Advertisement

ವಾಕರಿಗೆ ನಿವಾರಣೆ

ಏಲಕ್ಕಿ ಆ್ಯಂಟಿಮೆಟಿಕ್ ಗುಣಗಳನ್ನು ಹೊಂದಿದ್ದು , ಇದು ವಾಕರಿಕೆ ಹಾಗೂ ವಾಂತಿಯಂತಹ ಸಂವೇದನೆಯನ್ನು ಶಮನಗೊಳಿಸುತ್ತದೆ. ದೂರದ ಸ್ಥಳಗಳಿಗೆ ಪ್ರಯಾಣಿಸುವಾಗ ಟ್ರಾವೆಲ್ ಕಿಟ್‍ನಲ್ಲಿ ಏಲಕ್ಕಿಯನ್ನು ಸಹ ಇಟ್ಟುಕೊಳ್ಳಬಹುದು. ಮುಂಜಾನೆಯ ವಾಕರಿಕೆ ಸಮಸ್ಯೆ ಹೊಂದಿರುವ ಗರ್ಭಿಣಿಯರು ಏಲಕ್ಕಿಯ ಪರಿಮಳವನ್ನು ಗ್ರಹಿಸಿ, ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಹಲ್ಲಿನ ಆರೋಗ್ಯದ ಗುಟ್ಟು

ಏಲಕ್ಕಿ ತನ್ನಲ್ಲಿ ಪ್ರಬಲವಾದ ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು   ಸಾಮಾನ್ಯವಾಗಿ ಹಲವರನ್ನು ಕಾಡುವ ಹಲ್ಲಿನ ನೈರ್ಮಲ್ಯದ ಜೊತೆಗೆ ಕೆಟ್ಟ ಉಸಿರನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಏಲಕ್ಕಿ ಎಣ್ಣೆಯಲ್ಲಿರುವ ಫೈಟೋಕೆಮಿಕಲ್ ಮತ್ತು ಸಿನೋಲ್ ಗುಣವು ಬ್ಯಾಕ್ಟೀರಿಯವನ್ನು ನಾಶಪಡಿಸುವುದು. ಕೆಟ್ಟ ಉಸಿರು, ಹಲ್ಲಿನಲ್ಲಿ ಕುಳಿ ಬೀಳುವುದು ಹಾಗೂ ಅನುಚಿತವಾಗಿ ಹುಟ್ಟುವ ಹಲ್ಲುಗಳನ್ನು ತಡೆಯುತ್ತದೆ. ಏಲಕ್ಕಿ ಹಣ್ಣು ಮತ್ತು ಬೀಜದ ಸಾರವು ಜೀವ ವಿರೋಧಿ ಲಕ್ಷಣವನ್ನು ಹೊಂದಿದೆ. ಉರಿಯೂತ ಲಕ್ಷಣಗಳ ಮೂಲಕ ಆವರ್ತಕ ಸೋಂಕುಗಳ ವಿರುದ್ಧ ಚಿಕಿತ್ಸಕ ರೂಪದಲ್ಲಿ ಕೆಲಸ ನಿರ್ವಹಿಸುತ್ತದೆ.

ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ, ಜೀರ್ಣಶಕ್ತಿ ವೃದ್ಧಿಸಿ, ವ್ಯಕ್ತಿಯು ಚೈತನ್ಯಯುಕ್ತವಾಗಿ ಮತ್ತು ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ. ಅಲ್ಲದೆ ತಲೆಗೂದಲಿನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಊಟದ ಅನಂತರ ಒಂದೆರಡು ಕಾಳು ಏಲಕ್ಕಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು..

ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ

ಏಲಕ್ಕಿಯನ್ನು ಸೇವನೆ ಮಾಡುವುದರಿಂದ ಇದು ದೇಹಕ್ಕೆ ಸೇರಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿ ಇರುವ ವಿಷಕಾರಿ ಅಂಶವನ್ನು ಕಡಿಮೆ ಮಾಡುತ್ತದೆ. ಸೌಮ್ಯ ಮೂತ್ರವರ್ಧನೆಯನ್ನು ವೃದ್ಧಿಸುವುದು. ಜೀವಾಣುಗಳ ನಿರ್ಮೂಲನೆಯನ್ನು ಹೆಚ್ಚಿಸುವುದು.

ಹೃದಯದ ಆರೋಗ್ಯವನ್ನು ಸಮಸ್ಥಿತಿಯಲ್ಲಿಡಲು ಇದು ಸಹಕಾರಿ. ಅಸ್ತಮಾ ಸಮಸ್ಯೆಯಿಂದ ಬಳಲುವವರು ಹೆಚ್ಚು ಏಲಕ್ಕಿ ಉಪಯೋಗಿಸುವುದು ಒಳ್ಳೆಯದು. ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ…

ನೆಗಡಿ ಮತ್ತು ಕೆಮ್ಮು ಸಮಸ್ಯೆಯನ್ನು ನಿವಾರಿಸಲು. ಚರ್ಮದ ಕಾಂತಿಯನ್ನು ಹೆಚ್ಚಿಸಲು. ಅಸಿಡಿಟಿಯಿಂದ ತೇಗು ಬರುತ್ತಿದ್ದರೆ ಏಲಕ್ಕಿ ಸೇವನೆಯಿಂದ ಕಡಿಮೆಯಾಗುತ್ತದೆ.

ದುಷ್ಚಟಗಳಿಂದ ದೂರವಿರಿಸುತ್ತದೆ

ಏಲಕ್ಕಿಯನ್ನು ಸೇವನೆ ಮಾಡುವುದರಿಂದ ದುಷ್ಚಟಗಳಿಗೆ ದಾಸರಾಗಿರುವವರು ಅವುಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಏಲಕ್ಕಿಯನ್ನು ಆಗಾಗ ಸೇವನೆ ಮಾಡುವುದರಿಂದ ನಿಕೋಟಿನ್ ಚಡಪಡಿಕೆ, ಕಿರಿಕಿರಿ, ಅಸಹನೆ ಮತ್ತು ಆತಂಕದ ಹಂಬಲ ಕಡಿಮೆ ಆಗುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಜೊತೆಗೆ ಖಿನ್ನತೆಯ ಭಾವನೆಯನ್ನು ತಡೆಯುವುದು.

ಏಲಕ್ಕಿ ಚಹ ಬಳಕೆ

ಆಯುರ್ವೇದದ ಪ್ರಕಾರ ನಿಮ್ಮ ಮಾನಸಿಕ ಹಾಗು ದೈಹಿಕ ಒತ್ತಡ, ಖಿನ್ನತೆಯನ್ನು ಏಲಕ್ಕಿ ಚಹ ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿಯಲಾಗಿದೆ. ಹೃದಯದ ಆರೋಗ್ಯಕ್ಕೆ ಹಾಗೂ ದೇಹದಲ್ಲಿನ ರಕ್ತ ಸಂಚಲನಕ್ಕೆ ಏಲಕ್ಕಿ ಉತ್ತಮವಾದದ್ದು.

ಕ್ಯಾನ್ಸರ್ ನಿರೋಧಕ

ಏಲಕ್ಕಿಯಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇದೆ. ಈ ವಿಚಾರ  ಸಂಶೋಧನೆಯ ಮೂಲಕ ತಿಳಿಯುತ್ತಿದ್ದಂತೆ, ವೈದ್ಯಕೀಯ ರಂಗದಲ್ಲಿ ಭಾರಿ ಬೇಡಿಕೆ ಉಂಟಾಗಿದೆ. ಹಲವು ರೀತಿಯ ಔಷಧ ಪದ್ದತಿಗಳಲ್ಲಿ ಏಲಕ್ಕಿಯನ್ನು ಬಳಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next