Advertisement

ಕೋಲಾರದಲ್ಲಿ ಏಕನಾಮ ಸದಾವೈರಿ!

12:08 AM Apr 24, 2023 | Team Udayavani |

ಕೋಲಾರ: ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಈ ಬಾರಿ ಒಂದೇ ಹೆಸರಿನ ಹಲವರು ನಾಮಪತ್ರ ಸಲ್ಲಿಸಿ ಗಮನಸೆಳೆದಿದ್ದಾರೆ. ಶ್ರೀನಿವಾಸಪುರ ಕ್ಷೇತ್ರದಲ್ಲಿ ಐವತ್ತು ವರ್ಷ ಗಳಿಂದಲೂ ರಮೇಶ್‌ಕುಮಾರ್‌ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿಯದ್ದೇ ಹವಾ. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಈ ಇಬ್ಬರ ಹೆಸರಿನಲ್ಲಿ ಒಂದಷ್ಟು ಮಂದಿ ನಾಮಪತ್ರ ಸಲ್ಲಿಸುವುದು ವಾಡಿಕೆ. ಈ ಬಾರಿಯೂ ಅದು ಮುಂದುವರೆದಿದೆ.

Advertisement

ಜೆಡಿಎಸ್‌ ಜಿ.ಕೆ.ವೆಂಕಟಶಿವಾರೆಡ್ಡಿ ಹೆಸರಿನವರೇ ಆದ ವೆಂಕಟಶಿವಾರೆಡ್ಡಿ ಮತ್ತು ಟಿ.ಎನ್‌.ವೆಂಕಟಶಿವಾರೆಡ್ಡಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಇದೇ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್‌.ರಮೇಶ್‌ಕುಮಾರ್‌ ಹೆಸರಿನ ಎನ್‌.ಎಸ್‌.ರಮೇಶ್‌ಕುಮಾರ್‌ ಹಾಗೂ ಎಸ್‌.ರಮೇಶ್‌ಕುಮಾರ್‌ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಮುಳಬಾಗಿಲು ಕ್ಷೇತ್ರದಲ್ಲಿ ಒಂದೇ ಹೆಸರಿನ ಇಬ್ಬರು ಮೂವರು ಪಕ್ಷೇತರರಾಗಿ ಸ್ಪರ್ಧಿಸಿರುವುದು ವಿಶೇಷ.

ಸಿ.ವಿ.ಗೋಪಾಲ್‌-ಎಂ.ಗೋಪಾಲ್‌, ಜಿ.ಎಂ.ಗೋವಿಂದಪ್ಪ-ಆರ್‌.ಗೋವಿಂದು, ಎಂ.ವೆಂಕಟರಮಣ-ವೆಂಕಟರವಣ, ವೆಂಕಟೇಶಪ್ಪ -ಎಂ.ವೆಂಕಟೇಶಪ್ಪ-ಪಿ.ವೆಂಕಟೇಶಪ್ಪ ಹೀಗೆ ನಾಮಪತ್ರಗಳ ಭರಾಟೆ ಜೋರಾಗಿದೆ.

ಬಂಗಾರಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಎಸ್‌.ಎನ್‌.ನಾರಾಯಣಸ್ವಾಮಿ ಹೆಸರು ಹೋಲುವ ಮತ್ತೋರ್ವ ಎಸ್‌.ಎನ್‌.ನಾರಾಯಣಸ್ವಾಮಿ ಪಕ್ಷೇತರರಾಗಿ ಕಣದಲ್ಲಿ ದ್ದಾರೆ. ಇದು ಸಾಲದು ಎಂಬಂತೆ ಕೆ.ಎನ್‌.ನಾರಾಯಣಸ್ವಾಮಿ ಬಿಎಸ್‌ಪಿ ಅಭ್ಯರ್ಥಿ ಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯ ಹೆಸರು ಎಂ.ನಾರಾಯಣಸ್ವಾಮಿಯೇ ಆಗಿರುವುದು ವಿಶೇಷ. ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥ ಗೌಡರಿಗೆ ಪೈಪೋಟಿ ನೀಡಲು ಡಿ.ವಿ.ಮಂಜುನಾಥಗೌಡ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಜಿ.ಇ.ರಾಮೇಗೌಡರ ಹೆಸರಿನ ಎಚ್‌.ಆರ್‌.ರಾಮೇಗೌಡ ಪಕ್ಷೇತರರಾಗಿದ್ದಾರೆ. ಬಿಜೆಪಿ ಬಂಡಾಯ ಹೂಡಿರುವ ವಿಜಯಕು ಮಾರ್‌ ಗೆ ಸ್ಪರ್ಧಿಯಾಗಿ ಇಬ್ಬರು ಎಂ.ವಿಜಯಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next