Advertisement

ಸಿಟಿ ಓಪನ್‌ ಟೆನಿಸ್‌ ಮಕರೋವಾ ಮ್ಯಾಜಿಕ್‌

12:20 PM Aug 08, 2017 | Team Udayavani |

ವಾಷಿಂಗ್ಟನ್‌: ರಶ್ಯದ ಎಕತೆರಿನಾ ಮಕರೋವಾ ಸಿಟಿ ಓಪನ್‌ ಡಬ್ಲ್ಯುಟಿಎ ಟೆನಿಸ್‌ ಕೂಟದಲ್ಲಿ ಭಾರೀ ಹೋರಾಟ ನೀಡಿ ಪ್ರಶಸ್ತಿಯನ್ನೆತ್ತಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಆವರು ಜರ್ಮನಿಯ ಜೂಲಿಯಾ ಜಾರ್ಜಸ್‌ ಅವರ ಪ್ರಬಲ ಸವಾಲನ್ನು ಮೆಟ್ಟಿನಿಂತು 3-6, 7-6 (2), 6-0 ಅಂತರದಿಂದ ಗೆದ್ದು ಬಂದರು.

Advertisement

ಮೊದಲ ಸೆಟ್‌ ಕಳೆದುಕೊಂಡು, ದ್ವಿತೀಯ ಸೆಟ್‌ನಲ್ಲೂ ಹಿನ್ನಡೆ ಅನುಭವಿಸಿ, ಬಳಿಕ ಟೈ-ಬ್ರೇಕರ್‌ನಲ್ಲಿ ಗೆದ್ದ ಮಕರೋವಾ, ನಿರ್ಣಾಯಕ ಸೆಟ್‌ನಲ್ಲಿ ಹೆಚ್ಚು ನಿರಾಳರಾದಂತೆ ಕಂಡುಬಂದರು. ಜೂಲಿಯಾಗೆ ಒಂದೂ ಅಂಕ ನೀಡದೆ ಗೆಲುವಿನ ಸಂಭ್ರಮ ಆಚರಿಸಿದರು. ಜರ್ಮನ್‌ ಆಟಗಾರ್ತಿ ಕೈಯಲ್ಲಿದ್ದ ಪ್ರಶಸ್ತಿ ಕಳೆದುಕೊಂಡು ತೀವ್ರ ನಿರಾಸೆ ಅನುಭವಿಸಿದರು.

ಮಕರೋವಾ ಕಳೆದ 3 ವರ್ಷಗಳ ಅವಧಿಯಲ್ಲಿ ಗೆದ್ದ ಮೊದಲ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next