Advertisement

ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ಏಕಾದಶಿ ಮಹಾತ್ಮೆ ಯಕ್ಷಗಾನ

03:20 PM Feb 27, 2018 | Team Udayavani |

ಮುಂಬಯಿ : ಸುವರ್ಣ ಗಣೇಶೋತ್ಸವ ಸಂಭ್ರಮದಲ್ಲಿರುವ ಜಿಎಸ್‌ಬಿ ಸಭಾ ಕುರ್ಲಾ-ಚೆಂಬೂರ್‌-ಘಾಟ್‌ಕೋಪರ್‌ ಇದರ ಸಂಚಾಲಕತ್ವದ  ಬಾಲಾಜಿ ಮಂದಿರ ಕುರ್ಲಾದಲ್ಲಿ ಈಗಾಗಲೇ ಸುವರ್ಣ ಗಣೇಶೋತ್ಸವ ಸಂಭ್ರಮವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗುತ್ತಿದೆ. ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 18 ರಂದು ಅಪರಾಹ್ನ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಆಡಿಟೋರಿಯಂನಲ್ಲಿ ಜನಪ್ರಿಯ ಯಕ್ಷಗಾನ ಕಲಾಮಂಡಳಿ ಕುರ್ಲಾ ಇವರಿಂದ ಏಕಾದಶಿ ಮಹಾತೆ¾ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

ಕೊಂಕಣಿ ರಂಗಕರ್ಮಿ ಡಾ| ಚಂದ್ರಶೇಖರ್‌ ಶೆಣೈ ಮತ್ತು ಸಿಎ ನಗರ್‌ ಸತೀಶ್‌ ನಾಯಕ್‌ ಇವರು ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸುವರ್ಣ ಗಣೇಶೋತ್ಸವ ಸಮಿತಿ ಕುರ್ಲಾ ಇದರ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವಿವೇಕ್‌ ಭಂಡಾರಿ ಇವರು ಅತಿಥಿಗಳನ್ನು ಗೌರವಿಸಿದರು.

ಬಾಲಾಜಿ ಮಂದಿರ ಕುರ್ಲಾ ಇದರ ಅಧ್ಯಕ್ಷ ಜಿ. ಬಿ. ಕಾಮತ್‌ ಇವರು ಸ್ವಾಗತಿಸಿದರು. ಜನಪ್ರಿಯ ಯಕ್ಷಗಾನ ಮಂಡಳಿಯ ಅಧ್ಯಕ್ಷ    ಮೇಲ್‌ಗ‌ಂಗೊಳ್ಳಿ ರವೀಂದ್ರ ಪೈ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. 

ಜನಾರ್ಧನ ಭಟ್‌, ಭಗೀರಥ್‌ ಶ್ಯಾನ್‌ಭಾಗ್‌, ಚಿತ್ರಾ ಕಾಮತ್‌, ಜಿ. ಬಿ. ಕಾಮತ್‌, ಕಾರ್ಯಕಾರಿ ಸಮಿತಿಯ ಸದಸ್ಯರು, ಕೊಂಕಣಿ ನಾಟಕ ಕಲಾವಿದ ಕಮಲಾಕ್ಷ ಸರಾಫ್‌, ಮುಂಬಯಿ ಕನ್ನಡ ಸಂಘ ಮಹಿಳಾ ವಿಭಾಗದ ಅಧ್ಯಕ್ಷ ರಜನಿ ಪೈ ಹಾಗೂ ಜಿಎಸ್‌ಬಿ ಸಭಾ ಕುರ್ಲಾ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಜನಪ್ರಿಯ ಯಕ್ಷಗಾನ ಮಂಡಳಿಯ ಕಲಾವಿದರಿಂದ ನಡೆದ ಏಕದಶಿ ಮಹಾತೆ¾ ಯಕ್ಷಗಾನವು ಉತ್ತಮ ರೀತಿಯಲ್ಲಿ ಪ್ರದರ್ಶನಗೊಂಡು ಅತಿಥಿ-ಗಣ್ಯರುಗಳಿಂದ ಪ್ರಶಂಸೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next