Advertisement

8 ವರ್ಷದ ಬಳಿಕ ಪಾಕ್‌ನಲ್ಲಿ ಅಂ.ರಾ. ಕ್ರಿಕೆಟ್‌ಗೆ ವೇದಿಕೆ ಪಾಕ್‌ನಲ್ಲಿ

01:11 PM Aug 22, 2017 | Team Udayavani |

ಕರಾಚಿ: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ನಡೆಸಲು ಮುಂದಾಗಿರುವ ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ವೆಸ್ಟ್‌ ಇಂಡೀಸ್‌ ಮತ್ತು ಲಂಕಾ ಮಂಡಳಿ ಜತೆ ಮಾತುಕತೆ ನಡೆಸಿದೆ. ಇದರಿಂದಾಗಿ 8 ವರ್ಷದ ಬಳಿಕ ಪಾಕ್‌ನಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವೇದಿಕೆ ಸಜ್ಜಾಗಿದೆ.

Advertisement

ಸೆಪ್ಟೆಂಬರ್‌ ನಂತರ ಲಾಹೋರ್‌ನಲ್ಲಿ ವಿಶ್ವ ಇಲೆವೆನ್‌ ಟಿ20 ಸರಣಿ ನಡೆಯಲಿದೆ. ಇದರಲ್ಲಿ ಲಂಕಾ ಮತ್ತು ವೆಸ್ಟ್‌ ಇಂಡೀಸ್‌ ಆಟಗಾರರು ಪಾಲ್ಗೊಳ್ಳುವ ಬಗ್ಗೆ ಪಿಸಿಬಿ ಖಚಿತಪಡಿಸಿದೆ. ಅದೇ ರೀತಿ ವೆಸ್ಟ್‌ ಇಂಡೀಸ್‌ ವಿರುದ್ಧ ಲಾಹೋರ್‌ನಲ್ಲಿ ಟಿ20 ಸರಣಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ವೆಸ್ಟ್‌ ಇಂಡೀಸ್‌ ಒಪ್ಪಿಗೆ ನೀಡಿದೆ ಎನ್ನಲಾಗಿದೆ.

2009ರಲ್ಲಿ ಪಾಕ್‌ನಲ್ಲಿ ಲಂಕಾ ತಂಡದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿಯಲ್ಲಿ ಪಾಕ್‌ ಆಟಗಾರರು ಗಾಯಗೊಂಡರೆ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಆ ನಂತರ ಪಾಕ್‌ ಪ್ರವಾಸಕ್ಕೆ ಇತರೆ ರಾಷ್ಟ್ರಗಳು ಹೋಗುತ್ತಿರಲಿಲ್ಲ. ಐಸಿಸಿ ಕೂಡ ಪಾಕ್‌ನಲ್ಲಿ ಕ್ರಿಕೆಟ್‌ ನಡೆಸುವುದನ್ನು ನಿರ್ಬಂಧಿಸಿತ್ತು. ಆ ನಂತರ ಪಾಕ್‌ ಮಂಡಳಿಯ ಒತ್ತಾಯದಿಂದ ಐಸಿಸಿ ಪಾಕ್‌ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಒಪ್ಪಿಗೆ ನೀಡಿತ್ತು. ಆದರೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಪಾಕ್‌ಗೆ ಹೋಗಲು ಹಿಂದೇಟು ಹಾಕುತ್ತಿದ್ದವು. ಇದರಿಂದಾಗಿ ಪಾಕ್‌ ಮಂಡಳಿ ಭಾರೀ ಆರ್ಥಿಕ ನಷ್ಟಕ್ಕೆ ತುತ್ತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next