ಕ್ವಿವ್: 8 ವರ್ಷದ ಈ ಬಾಲಕಿ ‘ವೃದ್ಧಾಪ್ಯದಿಂದ ಮರಣ ಹೊಂದಿದ ಅತಿ ಕಿರಿಯ ವ್ಯಕ್ತಿ’! ಅರೆ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ? ಅಚ್ಚರಿಯಾದರೂ ಇದು ಸತ್ಯ. ಪ್ರೊಗೇರಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ಉಕ್ರೇನ್‌ನ 8ರ ಬಾಲಕಿ ಅನ್ನಾ ಸಾಕಿಡಾನ್ ರವಿವಾರ ಕೊನೆಯು ಸಿರೆಳೆದಿದ್ದಾಳೆ. ಆಕೆಗೆ ಆಗಿರುವುದು 8 ವರ್ಷ ವಾದರೂಆಕೆಯ ಜೈವಿಕ ವಯಸ್ಸು 80 ವರ್ಷ!
ಹೌದು.
ಶರೀರದ ಒಳ ಅಂಗಾಂಗಗಳಿಗೆ ಮತ್ತು ಶಾರೀರಿಕ ವ್ಯವಸ್ಥೆಗೆ ಅವಧಿಗೆ ಮುನ್ನವೇ ವಯಸ್ಸಾಗುತ್ತಾ ಹೋಗುವ ಕಾಯಿಲೆ ಯಿದು. ಜಗತ್ತಿನಲ್ಲಿ 160 ಮಂದಿ ಯಷ್ಟೇ ಈ ಕಾಯಿಲೆಯಿಂದ ಬಳಲುತ್ತಿ ದ್ದಾರೆ. ಅನ್ನಾ ಸಾಕಿಡಾನ್‌ಳ ಮೂಳೆಗಳು ನಿಧಾನವಾಗಿ ಬೆಳೆಯುತ್ತಿದ್ದವು. ಆದರೆ ಆಕೆಯ ದೇಹದೊಳಗಿನ ಅಂಗಾಂಗಗಳು ಕ್ಷಿಪ್ರವಾಗಿ ಬೆಳವಣಿಗೆ ಹೊಂದಿದವು. ಹೀಗಾಗಿ ಬಹು ಅಂಗ ವೈಫಲ್ಯದಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
1886ರಲ್ಲಿ ಈ ಕಾಯಿಲೆ ಮೊದಲು ಪತ್ತೆಯಾಯಿತು. ಕಾಯಿಲೆಯಿಂದ ಬಳಲುತ್ತಿರುವವರು 10 ತಿಂಗಳಲ್ಲೇ ಎಲ್ಲರಂತೆ ನಡೆಯಲು ಆರಂಭಿಸುತ್ತಾರೆ. ಹುಟ್ಟುವಾಗ ಇವರು ಸಾಮಾನ್ಯ ಮಕ್ಕಳಂತೆಯೇ ಇರುತ್ತಾರೆ. ಆದರೆ ಒಂದು ವರ್ಷದಲ್ಲೇ, ಅವರ ಬೆಳವಣಿಗೆಯಲ್ಲಿ ಏರುಪೇರು ಉಂಟಾಗುತ್ತದೆ. ಇಂಥ ಮಕ್ಕಳು ನೋಡಲು ವಿಚಿತ್ರವಾಗಿ ಕಾಣುತ್ತಾರೆ. ಕೆಲವರ ತಲೆಗೂದಲು ಉದುರಿ ಬೋಳಾಗುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಯೋವೃದ್ಧರಲ್ಲಿ ಕಂಡುಬರುವಂತಹ ಸಮಸ್ಯೆಗಳು ಇವರನ್ನು ಕಾಡಲಾರಂಭಿಸುತ್ತವೆ.