Advertisement

ರೌಡಿ ಸೆರೆಗೆ ತೆರಳಿದ್ದ 8 ಪೊಲೀಸರ ಹತ್ಯೆ ; ಕಾನ್ಪುರ ಬಳಿ ಆಘಾತಕಾರಿ ಕೃತ್ಯ

01:44 AM Jul 04, 2020 | Hari Prasad |

ಕಾನ್ಪುರ: ಮಧ್ಯರಾತ್ರಿ ರೌಡಿಗಳು ಗುಂಡಿನ ಸುರಿಮಳೆಗೈದು ಓರ್ವ ಡಿವೈಎಸ್ಪಿ, ಮೂವರು ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ನಾಲ್ವರು ಪೇದೆಗಳನ್ನು ಹತ್ಯೆಗೈದಿರುವ ಭೀಭತ್ಸ ಕೃತ್ಯ ಸಂಭವಿ­ಸಿದೆ.

Advertisement

ಸುಮಾರು 60 ಅಪರಾಧ ಪ್ರಕ­ರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಯೊಬ್ಬನನ್ನು ಪೊಲೀಸರ ತಂಡ ಬಂಧಿಸಲು ಹೊರಟಿದ್ದಾಗ ಈ ಕೃತ್ಯ ಜರುಗಿದೆ.

ಕಾನ್ಪುರ ಸಮೀಪದ ದಿಕ್ರು ಗ್ರಾಮ­ದಲ್ಲಿ ಕುಖ್ಯಾತ ರೌಡಿ ವಿಕಾಸ್‌ ದುಬೆ ಅಡಗಿದ್ದ ಮಾಹಿತಿ ಸಿಕ್ಕಿತ್ತು. ಹೀಗಾಗಿ, ಆತನನ್ನು ಬಂಧಿಸಲು ಡಿವೈಎಸ್ಪಿ ದೇವೇಂದ್ರ ಮಿಶ್ರಾ ನೇತೃತ್ವದ ಪೊಲೀಸರ ತಂಡವು ಶುಕ್ರವಾರ ನಸುಕಿನ 1 ಗಂಟೆ ಸಮಯದಲ್ಲಿ ತೆರಳಿತ್ತು.

ಪೊಲೀಸರು ಬರುವ ಮಾಹಿತಿಯನ್ನು ತಿಳಿದಿದ್ದ ರೌಡಿಗಳ ತಂಡವು, ಬುಲ್ಡೋಜರ್‌ ಬಳಸಿ ರಸ್ತೆಯನ್ನು ಬ್ಲಾಕ್‌ ಮಾಡಿದ್ದತ್ತು.

ಅವರು ಬರು­ವುದನ್ನೇ ಹೊಂಚು ಹಾಕಿ ಕಾಯುತ್ತಿದ್ದರು. ಈ ಕುತಂತ್ರ ಅರಿಯದ ಪೊಲೀಸರು ರಸ್ತೆ ತಡೆ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ.

Advertisement

ಈ ವೇಳೆ ಕಟ್ಟಡ­ವೊಂ­ದರಲ್ಲಿ ಅವಿತಿದ್ದ ಸುಮಾರು 8-10 ದುಷ್ಕರ್ಮಿಗಳು ನಿರಂತರವಾಗಿ ಗುಂಡಿನ ಸುರಿಮಳೆಗೈದಿದ್ದಾರೆ. ಇದ­ರಿಂದ ತಬ್ಬಿಬ್ಟಾದ ಪೊಲೀಸರು ಕೂಡ ಪ್ರತಿದಾಳಿ ನಡೆಸಿ­ದ್ದಾರೆ.

ಗುಂಡಿನ ಚಕಮಕಿಯಲ್ಲಿ ಡಿವೈಎಸ್ಪಿ, ಮೂವರು ಸಬ್‌ ಇನ್ಸ್‌ ಪೆಕ್ಟರ್‌ ಸೇರಿದಂತೆ 8 ಮಂದಿ ಪೊಲೀಸರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿ­ದ್ದಾರೆ. ಅಲ್ಲದೇ ಇಬ್ಬರು ರೌಡಿಗಳು ಕೂಡ ಹತರಾಗಿದ್ದಾರೆ.

ಘಟನಾ ಸ್ಥಳದಲ್ಲಿ ಎಕೆ 47 ಗನ್‌ಗಳು ದೊರೆತಿವೆ. ಕೊಲೆ, ದರೋಡೆ, ವಂಚನೆ ಸೇರಿದಂತೆ 60 ಪ್ರಕರಣಗಳಲ್ಲಿ ಕುಖ್ಯಾತ ರೌಡಿ ವಿಕಾಸ್‌ ದುಬೆ ಭಾಗಿಯಾಗಿದ್ದನು.

ಉತ್ತರ ಪ್ರದೇಶವು ಗೂಂಡಾ­ರಾಜ್ಯವಾಗಿರುವುದು ಈ ದುಷ್ಕೃತ್ಯದಿಂದ ಮತ್ತೆ ಸಾಬೀ­ತಾಗಿದೆ. ಪೊಲೀಸರಿಗೇ ಭದ್ರತೆ ಇಲ್ಲದಿರು­ವಾಗ ಜನಸಾಮಾನ್ಯರು ಹೇಗೆ ಸುರಕ್ಷಿತವಾಗಿ­ರುತ್ತಾರೆ ಪ್ರತಿಪಕ್ಷಗಳು ಟೀಕಿಸಿವೆ.

ಸಿಎಂ ಸೂಚನೆ
ಪೊಲೀಸರನ್ನು ಹತ್ಯೆಗೈದಿ­ರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಘಟನೆ ಸಂಬಂಧ ವರದಿ ಸಲ್ಲಿಸಲು ಡಿಜಿಪಿ ಅವಸ್ತಿಗೆ ಸಿಎಂ ಯೋಗಿ ಆದಿತ್ಯನಾಥ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next