Advertisement

Anantnag: ಕಮರಿಗೆ ಬಿದ್ದ ಕಾರು; ಒಂದೇ ಕುಟುಂಬದ 8 ಮಂದಿ ಸಾವು

08:41 PM Jul 27, 2024 | Team Udayavani |

ಶ್ರೀನಗರ: ಕಾರೊಂದು ಸ್ಕಿಡ್‌ ಆಗಿ ಕಮರಿಗೆ ಬಿದ್ದ ಪರಿಣಾಮ 5 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 8 ಮಂದಿ ಮೃತಪಟ್ಟ ಘಟನೆ ಜಮ್ಮು- ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶನಿವಾರ (ಜು.27ರಂದು) ನಡೆದಿದೆ.

Advertisement

ಮೃತರು ಕಿಶ್ತ್ವಾರ್ ನಿಂದ ಮಾರ್ವಾದೆಡೆಗೆ ಸಾಗುತ್ತಿದ್ದಾಗ ಈ ದುರ್ಘ‌ಟನೆ ಸಂಭವಿಸಿದೆ. ಮೃತರಲ್ಲಿ ಓರ್ವ ಪೊಲೀಸ್‌ ಅಧಿಕಾರಿ, ಇಬ್ಬರು ಮಹಿಳೆಯರು ಮತ್ತು 6ರಿಂದ 16 ವರ್ಷದ ನಡುವಿನ ಐವರು ಮಕ್ಕಳು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next