Advertisement
ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಇದೇ ಮೊದಲು.
Related Articles
ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 139 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. 51 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Advertisement
ಬೆಳ್ತಂಗಡಿ: ಐದು ಪಾಸಿಟಿವ್ ಪ್ರಕರಣತಾಲೂಕಿನಲ್ಲಿ ಶುಕ್ರವಾರ ಐದು ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. ಗುಂಡೂರಿ ಗ್ರಾಮದ 27 ವರ್ಷದ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಂದಿದೆ. ಇದೇ ಗ್ರಾಮದ 10 ವರ್ಷದ ಬಾಲಕನಿಗೆ ತಂದೆಯ ಸಂಪರ್ಕದಿಂದ ಪಾಸಿಟಿವ್ ದೃಢಪಟ್ಟಿದೆ. ಕುವೆಟ್ಟು ಗ್ರಾಮದ (59) ವ್ಯಕ್ತಿ ಆಶಾ ರ್ಕಾಕರ್ತೆ ಪತಿ ಹಾಗೂ ಪಡಂಗಡಿ ಗ್ರಾಮದ (57)ದ ಮಹಿಳೆ ಹಾಗೂ ಲಾೖಲ ರಾಘವೇಂದ್ರ ಮಠದ ನಿವಾಸಿಗೆ (65) ಸೋಂಕು ದೃಢಪಟ್ಟಿದೆ. ಪಡುಪಣಂಬೂರು: ವೃದ್ಧೆಗೆ ಕೋವಿಡ್ 19 ಸೋಂಕು
ಇಲ್ಲಿನ ಪಡುಪಣಂಬೂರು ಗ್ರಾ. ಪಂ. ವ್ಯಾಪ್ತಿಯ ಬಸದಿ ಬಳಿಯಲ್ಲಿ 64 ವರ್ಷದ ವೃದ್ಧೆಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದೆ. ಪತಿಯೊಂದಿಗೆ ವಾಸಿಸುತ್ತಿರುವ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದಾಗ ಈ ಸೋಂಕು ಪತ್ತೆಯಾಗಿದೆ. ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಸುಳ್ಯ: ನರ್ಸ್‌ನ 2ನೇ ವರದಿಯಲ್ಲಿ ನೆಗೆಟಿವ್
ಸುಳ್ಯ ಸರಕಾರಿ ಆಸ್ಪತ್ರೆಯ ಸಿಬಂದಿ, ಕಡಬದ 102 ನೆಕ್ಕಿಲಾಡಿ ನಿವಾಸಿಗೆ ಕಳೆದ ವಾರ ಕೋವಿಡ್ 19 ಪಾಸಿಟಿವ್ ಬಂದಿದ್ದು, ಇದೀಗ ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಉಳ್ಳಾಲ: 20 ಮಂದಿಗೆ ಸೋಂಕು
ಉಳ್ಳಾಲದಲ್ಲಿ ಇಂದು ಮೂವರ ಸಹಿತ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 20 ಪ್ರಕರಣಗಳು ದೃಢವಾಗಿದೆ. ಮಾಸ್ತಿಕಟ್ಟೆ, ಉಳ್ಳಾಲ ಬಸ್ತಿಪಡ್ಪು, ಕೋಟೆಕಾರು ಪಟ್ಟಣ ಪಂಚಾಯತ್, ಮಾಡೂರು, ಕೋಟೆಕಾರು ಜಂಕ್ಷನ್, ಸೋಮೇಶ್ವರ ಉಚ್ಚಿಲ, ಕೋಣಾಜೆ, ಮುನ್ನೂ ಸಂತೋಷ್ ನಗರದ ವ್ಯಾಪ್ತಿಯಲ್ಲೂ ಕೋವಿಡ್ 19 ಸೋಂಕು ಹರಡಿದೆ. ಸೋಂಕಿತರಲ್ಲಿ ಒಂದು ವರ್ಷದ ಮಗು ಕೂಡ ಸೇರಿದೆ. ಉಳ್ಳಾಲದಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯೊಂದಿಗೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಎಕ್ಕಾರು: ಓರ್ವ ವ್ಯಕ್ತಿಗೆ ಸೋಂಕು
ಎಕ್ಕಾರು ದುರ್ಗಾನಗರದಲ್ಲಿ ಮಹಾರಾಷ್ಟ್ರ ದಿಂದ ಬಂದ 62 ವರ್ಷದ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿದೆ. ಕಳೆದ ರವಿವಾರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಂದಿದ್ದ ಅವರು 3 ದಿನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಆ ಬಳಿಕ ಸರಕಾರದ ಅದೇಶದಂತೆ ಹೋಂ ಕ್ವಾರಂಟೈನ್‌ನಲ್ಲಿದ್ದರು. ಜು.7ರಂದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರತ್ಕಲ್: ಇಬ್ಬರು ಸಾವು
ಕೋವಿಡ್ 19 ಸೋಂಕಿನಿಂದ ಶುಕ್ರವಾರ ಸುರತ್ಕಲ್ ವ್ಯಾಪ್ತಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಹೊಸಬೆಟ್ಟು ನಿವಾಸಿ, ಕಲಾವಿದರೂ ಆಗಿದ್ದ ವ್ಯಕ್ತಿ ಮತ್ತು ಸಿಐಎಸ್‌ಎಫ್ ಯೋಧ ಮೃತಪಟ್ಟಿದ್ದಾರೆ. ಉಳಿದಂತೆ ಸುರತ್ಕಲ್ ಕಾವೂರು ವ್ಯಾಪ್ತಿಯಲ್ಲಿ ಒಟ್ಟು 9 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಾವೂರಿನಲ್ಲಿ ಮೂರು, ಕೆಐಒಸಿಎಲ್ ಒಂದು, ಕಾಟಿಪಳ್ಳ ಎರಡು, ಕೃಷ್ಣಾಪುರ ಮತ್ತು ಸಿಐಎಸ್‌ಎಫ್ ಯೂನಿಟ್‌ನಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 9ನೇ ಯೋಧ
ಕೂಡಗು ನಿವಾಸಿಯಾಗಿರುವ ಸಿಐಎಸ್‌ಎಫ್ ಯೋಧ ಅವರು ಕೋವಿಡ್-19ರಿಂದ ಮೃತಪಟ್ಟ 9ನೇ ಸಿಐಎಸ್‌ಎಫ್ ಯೋಧರಾಗಿದ್ದಾರೆ. ದೇಶಾದ್ಯಂತ 1,137 ಸಿಐಎಸ್‌ಎಫ್ ಯೋಧರು ಕೊರೊನಾ ಸೋಂಕಿಗೆ ಒಳಗಾಗಿದ್ದು ಸದ್ಯ 410 ಮಂದಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ 20 ಯೋಧರಿಗೆ ಸೋಂಕು ತಗಲಿದೆ. ಕಳೆದ 24 ತಾಸುಗಳ ಅವಧಿಯಲ್ಲಿ 22 ಮಂದಿ ಚೇತರಿಸಿಕೊಂಡಿದ್ದಾರೆ. ಪುತ್ತೂರು: ಮೂವರಿಗೆ ಪಾಸಿಟಿವ್
ನಗರಸಭಾ ವ್ಯಾಪ್ತಿಯ ಚಿಕ್ಕಮುಟ್ನೂರು ಗ್ರಾಮದ 69 ವರ್ಷದ ವೃದ್ಧರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇವರು ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇವರ ಗಂಟಲ ದ್ರವ ಪರೀಕ್ಷಾ ವರದಿ ಶುಕ್ರವಾರ ಪಾಸಿಟಿವ್ ಬಂದಿದೆ. ರೈಲ್ವೇ ಸಿಬಂದಿಗೆ ಸೋಂಕು
ಹದಿನೈದು ದಿನಗಳ ಹಿಂದೆ ಬಿಹಾರದಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ನೆಟ್ಟಣ ರೈಲ್ವೇ ಸಿಬಂದಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿದೆ, ಈ ಹಿನ್ನೆಲೆಯಲ್ಲಿ ರೈಲ್ವೇ ವಸತಿ ಗೃಹ, ಅವರು ಭೇಟಿ ನೀಡಿದ್ದ ನೆಟ್ಟಣದ ಅಂಗಡಿಯೊಂದನ್ನು ಸೀಲ್‌ಡೌನ್ ಮಾಡಲಾಗಿದೆ. 22 ವರ್ಷದ ಯುವಕ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು, ಬಳಿಕ ಅವರ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ.