Advertisement
ತಾಜ್ ಮಹಲ್ ಕುರಿತಾಗಿ:
Related Articles
Advertisement
ಐಫೆಲ್ ಟವರ್ ವಿಶೇಷತೆ:
ಆದರೆ ಇತ್ತೀಚೆಗೆ ಪ್ರೀತಿಯ ಸಂಕೇತವಾಗಿ ಗುರುತಿಸಲ್ಪಡುತ್ತಿರುವ ಐಫೆಲ್ ಟವರ್ 300 ಮೀಟರ್ ಅಂದರೆ 984 ಅಡಿ ಎತ್ತರವಾಗಿದ್ದು, 5 ಮೀಟರ್ ಅಂದರೆ 17 ಅಡಿ ಎತ್ತರದ ಅಡಿಪಾಯವನ್ನು ಹೊಂದಿದೆ. ಐಫೆಲ್ ಟವರ್ ನ ಮೇಲೆ ದೂರದರ್ಶನ ಆಂಟೆನಾ ಇದೆ. ಐಫೆಲ್ ಟವರ್ ಪ್ಯಾರಿಸ್ ನ ಏಕಮಾತ್ರ ಸುಂದರ ಗೋಪುರವಾಗಿದೆ ಮಾತ್ರವಲ್ಲದೆ ಇದು ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ನ ಅದ್ಭುತ ರಚನೆ ಎನ್ನಬಹುದು.
ಫ್ರೆಂಚ್ ಕ್ರಾಂತಿಯ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಚಾಂಪ್ ಡಿ ಮಾರ್ಸ್ ನಲ್ಲಿ ನಿರ್ಮಿಸಲಾಗಿರುವ “ಕಬ್ಬಿಣದ ರಚನೆ”ಗಾಗಿ ಗುಸ್ಟೇವ್ ಐಫೆಲ್ ಎಂಬ ಹೆಸರಿನ ವಿನ್ಯಾಸವನ್ನು ಆಯ್ಕೆ ಮಾಡಲಾಯಿತು. ನಂತರ 1889 ರ ಸಾರ್ವತ್ರಿಕ ಪ್ರದರ್ಶನದ ಸಮಯದಲ್ಲಿ ಈ ಐಫೆಲ್ ಟವರ್ ನ ರಚನೆಯನ್ನು ತಾತ್ಕಾಲಿಕವಾಗಿ ರಚಿಸಲಾಗಿದ್ದರೂ, ಇದು ಇಂದಿಗೂ ಶಾಶ್ವತವಾಗಿ ಪ್ಯಾರಿಸ್ ಅನ್ನು ಖ್ಯಾತಿಗೊಳಿಸಿದೆ.
ಕಲಾ ಸಮುದಾಯವು ಮೊದಲು ಐಫೆಲ್ ಟವರ್ ಅನ್ನು ಕಟುವಾಗಿ ಟೀಕಿಸಿತು. ಆದರೆ, ಕಾಲಾನಂತರ ಇದು ರೇಡಿಯೋ ಆಂಟೆನಾ ಟವರ್ ಆಗಿಯೂ ಉಪಯೋಗಿಸಲ್ಪಡುತ್ತಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಮಿಲಿಟರಿ ಸಂವಹನಗಳಿಗೆ ನಿರ್ಣಾಯಕವಾಗಿಯೂ ಸೇವೆ ಸಲ್ಲಿಸಿದ ಇದು ಫ್ರೆಂಚ್ ಇತಿಹಾಸದ ಪ್ರಮುಖ ಭಾಗವಾಗಿದೆ. ಯುನೈಟೆಡ್ ಸ್ಟೇಟ್ಸ್ನ ಓಟಿಸ್ ಎಲಿವೇಟರ್ ಕಂಪನಿಯು ರಚಿಸಿದ ಗಾಜಿನ ಪಂಜರದ ಎಲಿವೇಟರ್ಗಳು ಈ ರಚನೆ ಮತ್ತಷ್ಟು ಸುಂದರವಾಗಿ ಕಾಣಲು ಕಾರಣವಾದವು ಮತ್ತು ವಿಶ್ವದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದೆನಿಸಿತು.
ಇದು ವಿಶ್ವದ ಅತ್ಯಂತ ಜನಪ್ರಿಯ ಪೇಯ್ಡ್ ವಿಸಿಟರ್ಸ್ ಆಕರ್ಷಣೆಯಾಗಿದೆ. ಅದ್ಭುತವಾದ ಐಫೆಲ್ ಟವರ್‌ನ ತೂಕ 10,000 ಟನ್‌ಗಳು ಮತ್ತು ಐಫೆಲ್ ಟವರ್ 5 ಬಿಲಿಯನ್ ದೀಪಗಳನ್ನು ಹೊಂದಿದೆ. ಈ ಗೋಪುರವನ್ನು ಫ್ರೆಂಚ್ ಭಾಷೆಯಲ್ಲಿ ಲಾ ಡೇಮ್ ಡಿ ಫೆರ್ ಅಥವಾ “ಐರನ್ ಲೇಡಿ” ಎಂದು ಕರೆಯಲಾಗುತ್ತದೆ. 108 ಅಂತಸ್ತುಗಳು ಮತ್ತು 1,710 ಮೆಟ್ಟಿಲುಗಳು ಐಫೆಲ್ ಟವರ್ ಹೊಂದಿದೆ. ಇದರ ಜೊತೆಗೆ ಐಫೆಲ್ ಟವರ್ ಶಿಖರದಲ್ಲಿ ಒಂದು ಗುಪ್ತ ಅಪಾರ್ಟ್ಮೆಂಟ್ ಕೂಡ ಇದೆ. ಒಮ್ಮೆ ಹಿಟ್ಲರ್ ಹಿಟ್ಲರ್ ಐಫೆಲ್ ಟವರ್ ಅನ್ನು ಕೆಡವಲು ಆದೇಶ ನೀಡಿದ್ದ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.
ಪ್ರತಿ ವರ್ಷ ಸರಿ ಸುಮಾರು ಏಳು ಮಿಲಿಯನ್ ಜನರು ಈ ಜಗತ್ಪ್ರಸಿದ್ದ ರಚನೆಯನ್ನು ನೋಡಲು ಬರುತ್ತಾರೆ. 1889 ರಲ್ಲಿ ಐಫೆಲ್ ಟವರ್ ಸಾರ್ವಜನಿಕರಿಗೆ ತೆರೆದಾಗಿನಿಂದ, ಪ್ರಪಂಚದಾದ್ಯಂತದ ಸುಮಾರು 300 ಮಿಲಿಯನ್ ಜನರು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ. ಎರಡು ರೆಸ್ಟೋರೆಂಟ್ ಗಳು, ಅನೇಕ ಬಫೆಗಳು, ಒಂದು ಬ್ಯಾಂಕ್ವೆಟ್ ಹಾಲ್, ಒಂದು ಶಾಂಪೇನ್ ಬಾರ್, ಮತ್ತು ಹಲವಾರು ಗಿಫ್ಟ್ ಅಂಗಡಿಗಳು ಗೋಪುರದ ಮೂರು ಪ್ಲಾಟ್ ಫಾರ್ಮ್ ಗಳಲ್ಲಿವೆ.