Advertisement

Eid ul Fitr: ಕರಾವಳಿಯಲ್ಲಿ ಸಂಭ್ರಮದ ಈದುಲ್‌ ಫಿತ್ರ ಆಚರಣೆ

11:52 PM Apr 22, 2023 | Team Udayavani |

ಮಂಗಳೂರು/ಉಡುಪಿ: ಕರಾವಳಿಯ ಎಲ್ಲೆಡೆ ಶನಿವಾರ ಮುಸ್ಲಿಮರು ಸಡಗರ, ಸಂಭ್ರಮದಿಂದ “ಈದುಲ್‌ ಫಿತ್ರ’ ಆಚರಿಸಿದರು.

Advertisement

ದ.ಕ. -ಉಡುಪಿ ಜಿಲ್ಲೆಯ ಎಲ್ಲ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್‌ ಖುತಾº, ಈದ್‌ ಸಂದೇಶ, ಪ್ರವಚನ ನಡೆಯಿತು. ಮಂಗಳೂರು ಬಾವುಟ ಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ಬಂದರ್‌ ಝೀನತ್‌ ಬಕ್‌Ò ಕೇಂದ್ರ ಜುಮಾ ಮಸೀದಿಯ ಖತೀಬ್‌ ಅಲ್ಹಾಜ್‌ ಅಬುಲ್‌ ಅಕ್ರಂ ಮುಹಮ್ಮದ್‌ ಬಾಖವಿ ನೇತೃತ್ವದಲ್ಲಿ ಮತ್ತು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಖತೀಬ್‌ ಇಬ್ರಾಹೀಂ ಸಅದಿ ನೇತೃತ್ವದಲ್ಲಿ ಈದ್‌ ನಮಾಝ್, ಖುತಾº ಪಾರಾಯಣ ನಡೆಯಿತು.

ಉಡುಪಿಯಲ್ಲಿ ಮುಸ್ಲಿಮರು ಹಬ್ಬವನ್ನು ಶಾಂತಿ, ಸೌಹಾರ್ದ ಮತ್ತು ಮತದಾನದ ಜಾಗೃತಿ ಸಂದೇಶದೊಂದಿಗೆ ಸಂಭ್ರಮದಿಂದ ಆಚರಿಸಿದರು. ಉಡುಪಿ ನಗರ, ಕಾಪು, ಬ್ರಹ್ಮಾ ವರ, ಕುಂದಾಪುರ, ಬೈಂದೂರು, ಹೆಬ್ರಿ, ಕಾರ್ಕಳ ತಾಲೂಕುಗಳ ವಿವಿಧ ಮಸೀದಿಗಳಲ್ಲಿ ವಿಶೇಷ ಈದ್‌ ನಮಾಜ್‌ ನೆರವೇರಿಸಲಾಯಿತು.

ಉಭಯ ಜಿಲ್ಲೆಗಳ ಎಲ್ಲ ಮಸೀದಿ-ಈದ್ಗಾ ಗಳಲ್ಲಿ ವಿಶೇಷ ನಮಾಝ್, ಪ್ರವಚನದ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಹಬ್ಬದ ಶುಭಾಶಯ ವಿನಿಮಯ, ಮನೆಗಳಲ್ಲಿ ವಿಶೇಷ ಹಬ್ಬದೂಟದ ಜತೆಗೆ ನೆರೆಮನೆ, ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ಇತ್ಯಾದಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next