ಕೈರೋ : ಐಸಿಸ್ ಉಗ್ರರು ಅಲ್ಪಸಂಖ್ಯಾಕ ಸಮುದಾಯದ ಎರಡು ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್‌ಗಳಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಠ 45 ಮಂದಿಯನ್ನು ಬಲಿತೆಗೆದುಕೊಂಡ ಘಟನೆಯನ್ನು ಅನುಸರಿಸಿ ಈಜಿಪ್ಟ್ ಮೂರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ಮಿಲಿಟರಿ ವಿಶೇಷ ದಳಕ್ಕೆ ದೇಶದ ಪ್ರಮುಖ ಮೂಲಸೌಕರ್ಯ ಘಟಕಗಳನ್ನು ರಕ್ಷಿಸುವಂತೆ ಆದೇಶಿಸಿದೆ.
ನಿನ್ನೆ ಭಾನುವಾರ (ಪಾಮ್ ಸಂಡೇ) ಕಾಪ್ಟಿಕ್ ಚರ್ಚ್‌ಗಳ ಮೇಲೆ ಐಸಿಸಿ ಬಾಂಬ್ ದಾಳಿ ನಡೆದುದನ್ನು ಅನುಸರಿಸಿ ದೇಶದ ಅಧ್ಯಕ್ಷ ಅಬ್‌ದೆಲ್ ಫತಾ ಅಲ್ ಸಿಸಿ ಅವರು 3 ತಿಂಗಳ ಮಟ್ಟಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.
ಈಗಿನ್ನು ತಿಂಗಳ ಒಳಗೆ ಅಧ್ಯಕ್ಷ ಸಿಸಿ ಅವರು ತುರ್ತು ಘೋಷಣೆಯನ್ನು ದೇಶದ ಸಂಸತ್ತಿನ ಮುಂದೆ ಇಡಬೇಕಾಗಿದೆ.