Advertisement

ಮತದಾರರಿಗೆ ಮಿಂಚಿನ ನೋಂದಣಿ ಅಭಿಯಾನ​​​​​​​

06:25 AM Apr 03, 2018 | Team Udayavani |

ಪ್ರತಿಯೊಬ್ಬ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂಬ ಉದ್ದೇಶದಿಂದ ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ನಿರಂತವಾಗಿ ಮತದಾರ ನೋಂದಣಿ ಕಾರ್ಯ ನಡೆಸುತ್ತಿರುವ ಚುನಾವಣಾ ಆಯೋಗ, ಇದೀಗ ಹೆಸರು ಸೇರ್ಪಡೆಗೆ ಏಪ್ರಿಲ್‌ 8ರಂದು “ಮಿಂಚಿನ ನೋಂದಣಿ’ ಎಂಬ ಹೆಸರಲ್ಲಿ ಒಂದು ದಿನದ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಿದೆ.

Advertisement

ಬೆಂಗಳೂರು: “ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14ರವರೆಗೆ ಸಮಯವಿದೆ. ಇದು ಕೊನೆ ಅವಕಾಶ. ಈಗ ಹೆಸರು ಸೇರ್ಪಡೆ ಮಾಡದಿದ್ದರೆ, ಈ ಚುನಾವಣೆಯಲ್ಲಿ ಮತದಾನದ ಅವಕಾಶ ಸಿಗುವುದಿಲ್ಲ. ಹಾಗಾಗಿ ಈ ಕೊನೆಯ ಅವಕಾಶವನ್ನು ಕೈಚೆಲ್ಲಿ, ಪಶ್ಚಾತ್ತಾಪ ಪಡಬೇಡಿ. ಕೂಡಲೇ ಮತದಾರ ನೋಂದಣಿ ಅಧಿಕಾರಿ, ಸಹಾಯಕ ಮತದಾರ ನೋಂದಣಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮತದಾರರಾಗಿ ತಮ್ಮ ಹಕ್ಕು ಚಲಾಯಿಸುವ ಅರ್ಹತೆ ಗಿಟ್ಟಿಸಿಕೊಳ್ಳಿ ಎಂಬುದು ಅಭಿಯಾನದ ಘೋಷವಾಕ್ಯ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಏ.14ರವರೆಗೆ ಸಮಯವಿದೆ. ಆದರೆ, ಮಹಿಳೆಯರು, ವಿಕಲಚೇತನರು, ಮತ್ತು ದುರ್ಬಲ ವರ್ಗಗಳು ಸೇರಿದಂತೆ ಎಲ್ಲ ಮತದಾರರ ಅನುಕೂಲಕ್ಕಾಗಿ ಏ.8ರಂದು ಒಂದು ದಿನದ ರಾಜ್ಯವ್ಯಾಪಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಆ ದಿನ ಪ್ರತಿ ಮತಗಟ್ಟೆಯಲ್ಲಿ ಅಲ್ಲಿನ ಮತಗಟ್ಟೆ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಅರ್ಜಿ ಸ್ವೀಕರಿಸಲಿದ್ದಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಮನವಿ ಮಾಡಿದ್ದಾರೆ.

ಅಲ್ಲದೇ ಪ್ರತಿಯೊಬ್ಬ ಮತದಾರ ಸಮಸ್ಯೆ ಮತ್ತು ಗೊಂದಲಗಳಿಂದ ಮುಕ್ತನಾಗಬೇಕು. ಮತದಾನದ ದಿನ ಯಾವುದೇ ತಾಂತ್ರಿಕ ಸಮಸ್ಯೆ ಆತನಿಗೆ ಎದುರಾಗಬಾರದು ಅನ್ನುವುದು ಚುನಾವಣಾ ಆಯೋಗದ ಕಾಳಜಿ. ಅದಕ್ಕಾಗಿ ಈಗಾಗಲೇ ಮತದಾರರ ಗುರುತಿನ ಚೀಟಿ ಹೊಂದಿದವರು ಅಥವಾ ಈ ಬಾರಿ ಮತದಾರರ ಪಟ್ಟಿಗೆ ಹೆಸರು ಸೇರಿಸಿ ಗುರುತಿನ ಚೀಟಿ ಪಡೆದುಕೊಂಡವರು ತಮ್ಮ ಎಪಿಕ್‌ ಕಾರ್ಡ್‌ ಚೆಕ್‌ ಮಾಡಿಕೊಳ್ಳಿ. ಅದರಲ್ಲಿ ಏನಾದರೂ ತಪ್ಪು ಅಥವಾ ವ್ಯತ್ಯಾಸಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ. ನಿಮ್ಮಲ್ಲಿ ಎಪಿಕ್‌ ಕಾರ್ಡ್‌ ಇದ್ದು, ಅದರಲ್ಲಿರುವ ಹೆಸರು, ಕ್ರಮ ಸಂಖ್ಯೆ, ಮತಗಟ್ಟೆ ಸಂಖ್ಯೆ, ಭಾವಚಿತ್ರ ಮತದಾರರ ಪಟ್ಟಿಯಲ್ಲಿ ಇರುವ ವಿವರಗಳಿಗೆ ಹೊಂದಾಣಿಕೆ ಆಗದಿದ್ದರೆ, ಕೊನೆ ಕ್ಷಣದಲ್ಲಿ ಏನೂ ಮಾಡಲಿಕ್ಕೆ ಬರುವುದಿಲ್ಲ. ಹಾಗಾಗಿ ಅವಕಾಶ ಇರುವಾಗ ಎಲ್ಲವನ್ನೂ ಸರಿಪಡಿಸಿಕೊಂಡು ಗೊಂದಲ ರಹಿತ ಮನಸ್ಥಿತಿಯೊಂದಿಗೆ ಮತದಾನಕ್ಕೆ ಸಿದ್ಧರಾಗಿ ಎಂದು  ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next