Advertisement

ದಿಲ್ಲಿಯಲ್ಲಿ 1 ಮೊಟ್ಟೆಯ ಬೆಲೆ 7.50 ರೂ.!

06:25 AM Nov 21, 2017 | Harsha Rao |

ಹೊಸದಿಲ್ಲಿ: ದೇಶದ ಬಹುತೇಕ ಭಾಗಗಳಲ್ಲಿ ಮೊಟ್ಟೆ ದರ ಶೇ.40ರಷ್ಟು ಹೆಚ್ಚಾಗಿದೆ. ಅದರಂತೆ ದಿಲ್ಲಿಯಲ್ಲಿ ಒಂದು ಮೊಟ್ಟೆಗೆ 7ರಿಂದ 7.50 ರೂ. ತಲುಪಿದೆ ಎಂದು ಕುಕ್ಕುಟ ಮಂಡಳಿ ಅಧ್ಯಕ್ಷ ರಮೇಶ್‌ ಕಾರ್ತಿ ಸೋಮವಾರ ಹೇಳಿದ್ದಾರೆ. ಕಳೆದ 4-5 ವರ್ಷಗಳಲ್ಲಿ ಮೊಟ್ಟೆ ಬೆಲೆಯಲ್ಲಿ ಇಷ್ಟೊಂದು ಏರಿಕೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ. ದೇಶದಲ್ಲಿ ಮೊಟ್ಟೆ ಉತ್ಪಾದನೆ ಕುಂಠಿತವಾಗಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಈ ವರ್ಷ ಮೊಟ್ಟೆ ಉತ್ಪಾದನೆ ಶೇ.25ರಿಂದ 30ರಷ್ಟು ಕಡಿಮೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ದರ ಇನ್ನಷ್ಟು ಏರಬಹುದು ಎಂದಿದ್ದಾರೆ ಕಾರ್ತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next