ಹೊನ್ನಾಳಿ: ತಾಲೂಕಿನ ಅಂಗನವಾಡಿ ಕೇಂದ್ರದಫಲಾನುಭವಿಗಳಿಗೆ ವಿತರಿಸುವ ಮೊಟ್ಟೆಯ ದರಕ್ಕೆಅನುಗುಣವಾಗಿ ಮೊಟ್ಟೆಯ ಹಣವನ್ನು ಬಿಡುಗಡೆಮಾಡಬೇಕು.
ಈ ಮೂಲಕ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಚನ್ನಮ್ಮ ಒತ್ತಾಯಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಟ್ಟೆ ದರದಲ್ಲಿ ಪಟ್ಟಣ ಹಾಗೂಗ್ರಾಮೀಣಪ್ರದೇಶದಲ್ಲಿ ವ್ಯತ್ಯಾಸವಿದೆ.
ಕೆಲವು ತಿಂಗಳುಗಳಿಂದಸಮಸ್ಯೆ ಎದುರಿಸುತ್ತಿರುವ ಕಾರ್ಯಕರ್ತೆಯರು, ಅಧಿಕಾರಿಗಳು, ಶಾಸಕರು, ಸಚಿವರೊಂದಿಗೆ ಚರ್ಚಿಸಿದರೂಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.ಅಂಗನವಾಡಿಯಲ್ಲಿನ ಮೊಟ್ಟೆ ವಿತರಣೆ ರಜೆ ದಿನಹೊರತುಪಡಿಸಿ ಗರ್ಭಿಣಿಯರಿಗೆ, ಪ್ರತಿದಿನ ಕೇಂದ್ರದಮಕ್ಕಳಿಗೆ, ವಾರದಲ್ಲಿ 2 ದಿನ ಅಪೌಷ್ಟಿಕ ಮಕ್ಕಳಿಗೆ ನೀಡಲಾಗುತ್ತಿದೆ.
ಪ್ರತಿ ತಿಂಗಳು ಮೊಟ್ಟೆ ವಿತರಣೆಯಲ್ಲಿನಾವು ಸಂಕಷ್ಟವನ್ನು ಎದುರಿಸುತ್ತಿದ್ದೇವೆ. ಮೊಟ್ಟೆ ಬೆಲೆವ್ಯತ್ಯಾಸ ಸರಿದೂಗಿಸಲು ನಮಗೆ ಬರುವ ಗೌರವಧನವನ್ನೇವ್ಯಯಿಸುತ್ತಿದ್ದೇವೆ ಎಂದರು.ಹೆಚ್ಚಿನ ದರಕ್ಕೆ ಸರ್ಕಾರ ಹಣ ನೀಡದೆ ನಷ್ಟಅನುಭವಿಸುವಂತಾಗಿದೆ. ಈ ಬಗ್ಗೆ ಜಿಲ್ಲಾ ಹಾಗೂ ರಾಜ್ಯಕಮಿಟಿಯೊಂದಿಗೆ ಚರ್ಚಿಸಿದ್ದೇವೆ.
ಸಂಬಂಧಪಟ್ಟ ಸಚಿವರನ್ನುಸೆ .6 ರಂದು ಭೇಟಿ ಮಾಡಿ ಸಮಸ್ಯೆಯನ್ನು ಅವರ ಗಮನಕ್ಕೆತಂದಿದ್ದೇವೆ. ಮುಂದೆ ಟೆಂಡರ್ ಮೂಲಕ ಸಮರ್ಪಕವಾಗಿಮೊಟ್ಟೆ ವಿತರಣೆಗೆ ಮುಂದಾಗುವುದಾಗಿ ಭರವಸೆನೀಡಿದ್ದರಿಂದ ಮುಷ್ಕರ ನಡೆಸುವ ನಿರ್ಧಾರದಿಂದ ಸದ್ಯಕ್ಕೆಹಿಂದೆ ಸರಿದಿರುವುದಾಗಿ ಹೇಳಿದರು.ಮುಂಗಡ ಹಣವನ್ನು ಮುಂದಿನ ತಿಂಗಳಿನಿಂದಭರಿಸುವಂತಾಗಬೇಕು. ಮೊಟ್ಟೆ ವಿತರಿಸುವ ಹಾಗೂ ವಿತರಿಸಿದಬಗ್ಗೆ ಕಾರ್ಯಕರ್ತೆಯರು ಬರೆದು ಕೊಡುವಂತೆ ಒತ್ತಡಹಾಕುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷೆ ಗೀತಮ್ಮ,ಉಪಾಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ವಸಂತಮ್ಮ,ಖಜಾಂಚಿ ಶಾರದಾ ದೇವಿ, ರತ್ನಮ್ಮ, ಅನಸೂಯಮ್ಮ,ಲಲಿತಮ್ಮ ಇದ್ದರು.