Advertisement

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆ ಸ್ವಾಗತಾರ್ಹ

04:19 PM Dec 12, 2021 | Team Udayavani |

ಯಲಬುರ್ಗಾ: ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಮೊಟ್ಟೆ, ಬಾಳೆ ಹಣ್ಣುವಿತರಿಸುತ್ತಿರುವುದು ಸ್ವಾಗತಾರ್ಹ.  ಆದರೆ ಕೆಲ ಸ್ವಾಮಿಗಳು ವಿರೋಧ ಮಾಡುತ್ತಿರುವುದು ಸರಿಯಲ್ಲ. ಸರಕಾರ ಯಾವುದೇ ಒತ್ತಡಕ್ಕೂ ಮಣಿಯದೇಯೋಜನೆ ಮುಂದುವರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದ ವತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತಹಶೀಲ್ದಾರ್‌ ಕಚೇರಿಯಲ್ಲಿ ಆಹಾರನಿರೀಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಮಠ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ನೇತೃತ್ವ ವಹಿಸಿದ್ದ ಎಸ್‌ಎಫ್‌ಐಜಿಲ್ಲಾ ಕಾರ್ಯದರ್ಶಿ ಎಂ. ಶಿದ್ದಪ್ಪಮಾತನಾಡಿ, ಕಲ್ಯಾಣ ಕರ್ನಾಟಕದಕೊಪ್ಪಳ, ಬೀದರ್‌, ಯಾದಗಿರಿ,ಕಲಬುರಗಿ, ಬೀದರ್‌, ಬಳ್ಳಾರಿ,ರಾಯಚೂರು ಸೇರಿದಂತೆ ಬಿಜಾಪುರಜಿಲ್ಲೆಯಲ್ಲಿ 1ರಿಂದ 8ನೇ ತರಗತಿವರೆಗೆಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವಮಕ್ಕಳು ಅಪೌಷ್ಟಿಕತೆ ಮತ್ತುರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮೀಕ್ಷಾ ವರದಿಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನ ಮೊಟ್ಟೆ ಮತ್ತುಬಾಳೆಹಣ್ಣು ವಿತರಿಸುವುದನ್ನು ಭಾರತವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ರಾಜ್ಯ ಸಮಿತಿ ಸ್ವಾಗತಿಸುತ್ತದೆ ಎಂದರು.

ಅಲ್ಲಾಬಕ್ಷಿ ಸಿಂಧನೂರು, ಮರಿಸ್ವಾಮಿ ಮಂಡಲಗೆರಿ, ರುದ್ರಯ್ಯ, ಜಗದೀಶ, ಮಂಜುನಾಥ, ಸುರೇಶ,ವೆಂಕಟೇಶ, ಮುತ್ತಪ್ಪ, ರಾಜು, ಗಣೇಶ,ಶಿವಕುಮಾರ, ನಾಗರಾಜ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next