Advertisement

ಸಂಘದ ಆರ್ಥಿಕತೆ ಹೆಚ್ಚಿಸಲು ಪ್ರಯತ್ನ :ವಸಂತ ಬಂಗೇರ 

03:20 PM Oct 23, 2017 | Team Udayavani |

ಬೆಳ್ತಂಗಡಿ: ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಸಿಗುವಂತೆ ಮಾಡುವುದು ಸಂಘದ ಗುರಿಯಾಗಿರಬೇಕು. ಅದಕ್ಕಾಗಿ ಸಂಘದ ಆರ್ಥಿಕತೆ ಹೆಚ್ಚಿಸುವಲ್ಲಿ ಪ್ರಯತ್ನಿಸಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ಅವರು ರವಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದರು. 

ಸಮಾಜ ಪ್ರಗತಿಯಾಗಲು ವಿದ್ಯೆಯೇ ಮೂಲ ಸಾಧನ. ಸಂಘಕ್ಕೆ ಬರುತ್ತಿರುವ ಆದಾಯದಲ್ಲಿ ಶೇ. 65 ಪಾಲು ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೀಸಲಿಡಬೇಕು. 56 ವರ್ಷಗಳ ಇತಿಹಾಸವಿರುವ ಸಂಘದಲ್ಲಿ ವೈಮನಸ್ಸಿಗೆ ಅವಕಾಶ ನೀಡದೆ ಒಗ್ಗಟ್ಟು ಮತ್ತು ಒಮ್ಮನಸ್ಸು ಬೆಳೆಸಿಕೊಂಡು ಹೋಗಬೇಕು ಎಂದರು.

ಪ್ರಾಧ್ಯಾಪಕ ರಾಜೇಶ್‌ ಬೆಜ್ಜಂಗಳ ಸ್ವಾರ್ಥವನ್ನು ಬದಿಗಿಟ್ಟು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಬೆಳೆಸುವ ಪಣವನ್ನು ಪ್ರತಿಯೊಬ್ಬರೂ ಹೊಂದಬೇಕು ಎಂದು ಹೇಳಿದರು.  ಮನುಷ್ಯತ್ವದ ಶ್ರೇಷ್ಠ ಗುಣ ಮೈಗೂಡಿಸಿಕೊಂಡು, ಶಿಕ್ಷಣಕ್ಕೆ ಒತ್ತುಕೊಟ್ಟು ಸಂಸ್ಕಾರಯುತ ಸಮಾಜ ನಿರ್ಮಿಸಬೇಕು ಎಂದರು.

ಮುಖ್ಯಅತಿಥಿ ನಿವೃತ್ತ ಎಸ್‌.ಪಿ.ಪೀತಾಂಬರ ಹೇರಾಜೆ ಮಾತನಾಡಿ ಪ್ರತಿಯೊಬ್ಬರೂ ತಾನು ವಹಿಸಿಕೊಂಡ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ಮಾಡಿದಾಗ ಸಂಘ ಯಶಸ್ವಿಯಾಗುತ್ತದೆ. ಶಿಕ್ಷಣಕ್ಕೆ ಒತ್ತು ನೀಡುವುದರ ಜತೆಗೆ, ಸಂಘಕ್ಕಾಗಿ ಜಾಗ ಖರೀದಿಯ ಕಡೆಗೂ ಮನಸ್ಸು ಕೊಡಬೇಕು ಎಂದರು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಭಗೀರಥ ಜಿ., ನಿಯೋಜಿತ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆಯವರಿಗೆ ಅಧಿಕಾರ ಹಸ್ತಾಂತರಿಸಿದರು.

ವೇದಿಕೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ವಸಂತ ಸಾಲಿಯಾನ್‌ ಕಾಪಿನಡ್ಕ, ಗಂಗಾಧರ ಮಿತ್ತಮಾರ್‌, ಪಿ.ಕೆ.ರಾಜು ಪೂಜಾರಿ, ಯುವವಾನಿ ಕೇಂದ್ರ ಸಮಿತಿಅಧ್ಯಕ್ಷಯಶವಂತ ಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆಯನ್ನಾಗಿ ರಾಜಶ್ರೀ ರಮಣ್‌, ಯುವ ಬಿಲ್ಲವ ವೇದಿಕೆ ಅಧ್ಯಕ್ಷರನ್ನಾಗಿ ಸಂತೋಷ್‌ಕುಮಾರ್‌ ಉಪ್ಪಾರ್‌ ಇವರನ್ನು ನೇಮಿಸಲಾಯಿತು. ಶಾಸಕ ವಸಂತ ಬಂಗೇರ ದಂಪತಿಯನ್ನು ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸಮ್ಮಾನಿಸಿದರು.

 ಸಂಘದ ಉಪಾಧ್ಯಕ್ಷೆ ಸುಜಿತಾ ಬಂಗೇರ ಸ್ವಾಗತಿಸಿದರು. ಪದ್ಮನಾಭ ಸಾಲ್ಯಾನ್‌ ಮತ್ತು ಸದಾನಂದ ಸಾಲ್ಯಾನ್‌ಕಾರ್ಯಕ್ರಮ ನಿರೂಪಿಸಿ, ನಿಯೋಜಿತ ಕಾರ್ಯದರ್ಶಿ ರಾಕೇಶ್‌ ಕುಮಾರ್‌ ಮೂಡುಕೋಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next