Advertisement
ಗುರುವಾರ ಸುಮಾರು 75 ಜನರಿದ್ದರೆ ಶುಕ್ರವಾರ ಸುಮಾರು 125 ಜನರು ಪಾಲ್ಗೊಂಡು ಜನಸೇವೆಗೆ ತಮಗಿರುವ ಉತ್ಸಾಹವನ್ನು ಪ್ರಕಟಿಸಿದರು.
ಹಿಟಾಚಿ ಬ್ರೇಕರ್ ತರಿಸಿದರು. ಹಿಟಾಚಿ ಸಾಗಿಸಲು ಟ್ರಾಲಿಯನ್ನು ಮಂಗಳೂರಿ ನಿಂದ ತರಿಸಿದರೆ ಹಿಟಾಚಿ ಬ್ರೇಕರ್‌ನ್ನು ಉಡುಪಿಯಿಂದ ತರಿಸಿದರು. ಇದಕ್ಕೆ
ಬೇಕಾದ ಡೀಸೆಲ್ ಖರ್ಚನ್ನು ಸಾರ್ವ ಜನಿಕರೇ ಭರಿಸುತ್ತಿದ್ದಾರೆ. ಬ್ರೇಕರ್‌ನಿಂದ ಹೂಳನ್ನು ತೆಗೆಯಲಾಗುತ್ತಿದ್ದು , ಶನಿವಾರ ದೊಡ್ಡ ದೊಡ್ಡ ಕಲ್ಲುಗಳನ್ನು ಒಡೆದು ತೆಗೆಯಲಾಗುವುದು. ಶಾಸಕರ ಜತೆ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಹುತೇಕ ಎಲ್ಲ ನಗರಸಭಾ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು. ಗುರುವಾರದ ಶ್ರಮದಾನ ದಿಂದ ಬಜೆ ಪಂಪಿಂಗ್ ಸ್ಟೇಶನ್‌ನಲ್ಲಿ ನೀರಿನ ಪಂಪಿಂಗ್ ಆರಂಭಗೊಂಡಿದೆ. ಶನಿವಾರವೂ ಶ್ರಮದಾನ ಮುಂದು ವರಿಯುವ ಸಾಧ್ಯತೆ ಇದೆ. ಕಲ್ಲು ಒಡೆದು ನೀರು ಹರಿದರೆ ಇದು ಶಾಶ್ವತ ಪರಿಹಾರ ವಾಗಲಿದೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ. ನೀರು ಸರಬರಾಜು ಪ್ರದೇಶಗಳು
ಶುಕ್ರವಾರ ಈಶ್ವರನಗರ, ನೆಹರೂ ನಗರ, ಸರಳೆಬೆಟ್ಟು, ಕೊಡಿಂಗೆ, ವಿವೇಕಾನಂದ ನಗರ, ಶೇಷಾದ್ರಿನಗರ, ವಿ.ಪಿ.ನಗರ, ಇಂದ್ರಾಳಿ, ರೈಲ್ವೆ ಗೋಡೌನ್ ರಸ್ತೆ, ಮಂಚಿ ಶಾಲೆ ರಸ್ತೆ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿಎಂ ನಗರ, ದೊಡ್ಡಣಗುಡ್ಡೆ, ಪೆರಂಪಳ್ಳಿ ರೈಲ್ವೆ ಸೇತುವೆ ಬಳಿ, ಆದಿಶಕ್ತಿ ದೇವಸ್ಥಾನ ಬಳಿ, ಪತ್ರಕರ್ತರ ಕಾಲನಿ ಇಂದ್ರಾಳಿ, ವಿದ್ಯಾರತ್ನನಗರ, ಶೀಂಬ್ರ, ಮಣಿಪಾಲ ನಗರ, ಕೊಡಂಕೂರು, ಸಾಯಿಬಾಬಾ ನಗರ, ಮೂಡುಬೆಟ್ಟು, ಆದಿಉಡುಪಿ, ಮುಖ್ಯಪ್ರಾಣನಗರ, ರಾಜೇಶ ನಗರ, ಕುದ್ಮಲ್ ರಂಗರಾವ್ ನಗರ ಪ್ರದೇಶದಲ್ಲಿ ನೀರು ಸರಬರಾಜು ಆಗಿವೆ. ಕೆಲವು ಎತ್ತರದ ಪ್ರದೇಶಗಳಿಗೆ ನೀರು ಹೋಗಲಿಲ್ಲ. ಇಂತಹ ಕಡೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಐದು ಟ್ಯಾಂಕರ್‌ಗಳು ಇದಕ್ಕಾಗಿ ಬಂದಿವೆ ಎಂದು ನಗರಸಭೆ ಮೂಲಗಳು ತಿಳಿಸಿವೆ.