Advertisement

ಖಗೋಳ ವಿಜ್ಞಾನ ಆಸಕ್ತಿ ಹೆಚ್ಚಿಸಲು ಶ್ರಮ : ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ಮಾಹಿತಿ

04:21 PM Jan 05, 2021 | Team Udayavani |

ಭಟ್ಕಳ: ಖಗೋಳ ವಿಜ್ಞಾನ ವಿದ್ಯಾರ್ಥಿಗಳಲ್ಲಿ ಆಕಾಶ ಕಾಯಗಳ ಕುರಿತು ಆಸಕ್ತಿ ಮೂಡಿಸುವ ಕಾರ್ಯ ಭೈರುಂಬೆಯ ಶಾರದಾಂಬಾ ಪ್ರೌಢಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ.

Advertisement

ಇಲ್ಲಿನ ವಿಜ್ಞಾನ ಶಿಕ್ಷಕ ಹಾಗೂ ಮುಖ್ಯಾಧ್ಯಾಪಕ ವಸಂತ ಹೆಗಡೆ ಮೊದಲಿಗೆ ಶಿರಸಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಅಹೋರಾತ್ರಿ ಆಕಾಶ ವೀಕ್ಷಣಾ ಕಾರ್ಯಕ್ರಮ, ಟೆಲಿಸ್ಕೋಪ್‌ ತಯಾರಿಕೆ ಮತ್ತು ಅದರ ಕಾರ್ಯ ವಿಧಾನ, ಪಂಚಾಂಗದ ಓದುವಿಕೆ
ಹಾಗೂ ಅದರ ಅರ್ಥೈಸುವಿಕೆ ಹೀಗೆ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಕುರಿರು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು ಜಿಲ್ಲೆಯಲ್ಲಿ ಹಲವು ತಾಲೂಕುಗಳಿಗೆ ತೆರಳಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ನಾಗರಿಕರಿಗೆ ಉಚಿತವಾಗಿ ಅತ್ಯಾಧುನಿಕ ಟೆಲಿಸ್ಕೋಪ್‌ ಮೂಲಕ ಆಕಾಶಕಾಯಗಳನ್ನು ತೋರಿಸುತ್ತಾ ಅವುಗಳ ಮಹತ್ವ ತಿಳಿಸುತ್ತಾ ಬಂದಿದ್ದಾರೆ.

ಆಕಾಶ ವೀಕ್ಷಣೆ ಮತ್ತು ಖಗೋಳಶಾಸ್ತ್ರದಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಕೈಗೊಳ್ಳಲು ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಮಾರ್ಗದರ್ಶನ ನೀಡಲು ಅಗತ್ಯ ಪರಿಕರಗಳ ಅವಶ್ಯಕತೆ ಇದ್ದಾಗ ಪರಿಸರದ ಕುರಿತು ಅಧ್ಯಯನ ಮಾಡುತ್ತಿರುವ ಪರಿಸರ ಬರಹಗಾರ ಶಿವಾನಂದ ಕಳವೆ ಅವರು ಸೆಲ್ಕೋ ಸಂಸ್ಥೆಯ ಮೋಹನ ಹೆಗಡೆಯರನ್ನು ಸಂಪರ್ಕಿಸಿದ್ದು, ಅವರು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ ಮೂಲಕ 15 ಲಕ್ಷ ಬೆಲೆಬಾಳುವ ಖಗೋಳ ವೀಕ್ಷಣೆಗೆ ಸಹಾಯಕವಾಗುವಂತಹ ಪರಿಕರಗಳನ್ನು ನೀಡಿದ್ದಾರೆ. ಅಂದಿನಿಂದ ಇಂದಿನ ತನಕ ಸಾವಿರಾರು ಮಕ್ಕಳಿಗೆ ಖಗೋಳ ವಿಜ್ಞಾನದ ಕುರಿತು ಆಕಾಶಕಾಯಗಳ ಪರಿಚಯವನ್ನು ಮಾಡುವ ಕಾರ್ಯವನ್ನು ಆಗಸ್‌-360 ತಂಡ ಮಾಡುತ್ತಲೇ ಬಂದಿದೆ. ತಂಡದಲ್ಲಿ ಶ್ರೀರಾಜ ಹೆಗಡೆ, ನಮನ್‌ ಭಟ್ಟ, ಸಮರ್ಥ ಹೆಗಡೆ ಬಂಗ್ಲೆ, ಪ್ರತೀಕ ಹೆಗಡೆ ಬಂಗ್ಲೆ ಇವರೂ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಅಗಸ್‌-360 ತಂಡದಲ್ಲಿ ಅತ್ಯಾಧುನಿಕವಾದ 16 ಇಂಚಿನ ಡಿಜಿಟಲ್‌ ಟೆಲಿಸ್ಕೋಪ್‌, ವಿಲಿಯಮ್‌ ಓಪ್ಟಿಕ್ಸ್‌ ಕ್ಯಾಮೆರಾ ಸಹಿತವಾದ ಟೆಲಿಸ್ಕೋಪ್‌ ಹೀಗೆ ಮೊದಲಾದ ವೈಜ್ಞಾನಿಕ ಉಪಕರಣಗಳನ್ನು ತಂಡ ಹೊಂದಿದೆ. ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ ಮತ್ತು ಅಗಸ್‌-360
ಇವುಗಳ ಉದ್ದೇಶ ಒಂದೇ ಆಗಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು, ಅವರು ವಿಜ್ಞಾನದ ಅಧ್ಯಯನದಲ್ಲಿ ತೊಡಗುವಂತೆ ಮಾಡುವುದಾಗಿದೆ.

ಇದನ್ನೂ ಓದಿ:ಕೊಚ್ಚಿ- ಮಂಗಳೂರು ನ್ಯಾಚುರಲ್ ಗ್ಯಾಸ್ ಪೈಪ್ ಲೈನ್ ಗೆ ಪ್ರಧಾನಿಯಿಂದ ಚಾಲನೆ

ಈ ನಿಟ್ಟಿನಲ್ಲಿ “ಅನಂತ ದೃಷ್ಟಿ’ ಎಂಬ ಸರಣಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಆಕಾಶ ವೀಕ್ಷಣೆ ಕುರಿತಾಗಿ ಮಾಹಿತಿ ನೀಡುವುದು, ಖಗೋಳ ಕಾಯಗಳ ಬಗ್ಗೆ ಅಗತ್ಯ ಮಾಹಿತಿ ನೀಡುವುದು, ರಾತ್ರಿಯ ಆಕಾಶ ಕಾಯಗಳನ್ನು ವೈಜ್ಞಾನಿಕ ಉಪಕರಣಗಳ ಮೂಲಕ ವೀಕ್ಷಿಸುವುದು, ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅವಕಾಶ ನೀಡುವುದು. ಇಂಥ ಉದ್ದೇಶಗಳನ್ನು ಇಟ್ಟುಕೊಂಡು ಜಿಲ್ಲೆಯಾದ್ಯಂತ ನಡೆಯುತ್ತಿದೆ.

Advertisement

ಕಳೆದ 2015ರಿಂದ ಜಿಲ್ಲೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದ್ದು, 3 ಸಾವಿರ ವಿದ್ಯಾರ್ಥಿಗಳು, 2 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಇದರ ಪ್ರಯೋಜನ ಪಡೆದಿದ್ದಾರೆ. ಸಪ್ತಋಷಿ ಮಂಡಳದಿಂದ ದ್ರುವ ನಕ್ಷತ್ರವನ್ನು ಗುರುತಿಸುವಿಕೆ, ಆಸ್ಟ್ರೋ ಫೋಟೋಗ್ರಫಿಯಲ್ಲಿ ಸುಮಾರು 11 ಸಾವಿರ ಜ್ಯೋತಿವರ್ಷ ದೂರದಲ್ಲಿರುವ ಸಿರಿಯನ್‌ (ಲುಬ್ದಕ್‌) ಅತಿ ಹೆಚ್ಚು ಹೊಳೆಯುವ ನಕ್ಷತ್ರವನ್ನು ಗುರುತಿಸುವಿಕೆ ಮುಂತಾದವುಗಳು ತೀವ್ರ ಕುತೂಹಲಕಾರಿ ವಿಷಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next