Advertisement
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 65 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಮೂರು ಭಾಷೆಯ ಕಲಿಕೆ ಇರಬೇಕಿದೆ. 3 ರಿಂದ 6 ವಯೋಮಾನದ ಮಕ್ಕಳಲ್ಲಿ 15 ಭಾಷೆಗಳನ್ನು ಕಲಿಯುವ ಸಾಮಾರ್ಥ್ಯವಿರುತ್ತದೆ. ಹೀಗಾಗಿ ಮೂರು ಭಾಷಾ ಕಲಿಕೆ ಒತ್ತಡ ಇರಲಾರದು. ಶಿಶುವಿಹಾರಗಳಿಂದಲೇ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡಲಾಗಿದೆ. ರಾಜ್ಯದಲ್ಲಿ ಕನ್ನಡ ಭಾಷಾ ಬಳಕೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡಲಾಗುವುದು ಎಂದರು.
Related Articles
Advertisement
ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್ಪಿ ಗಿರೀಶ್, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರುಳೀಧರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್ ಉಪಸ್ಥಿತರಿದ್ದರು.
ಕರ್ನಾಟಕ ಏಕೀಕರಣದ ಹೋರಾಟಗಾರರನ್ನು ಸ್ಮರಿಸೋಣ :
ಮಾಗಡಿ: ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕು ಎಂದು ಮಾನಸ ಪೂರ್ವ ಪ್ರಾಥಮಿಕ ಮತ್ತು ಶ್ರೀವಿದ್ಯಾನಿಧಿ ಪ್ರಾಥಮಿಕ ಹಾಗೂ ಕೆಂಪೇಗೌಡ ಪ್ರೌಢ ಶಾಲಾ ಪ್ರಾಂಶುಪಾಲ ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಡೆಯುತ್ತಿರುವ ಮಾನಸ ಪೂರ್ವ ಪ್ರಾಥಮಿಕ ಮತ್ತು ಶ್ರೀವಿದ್ಯಾನಿಧಿ ಪ್ರಾಥಮಿಕ ಕೆಂಪೇಗೌಡ ಪ್ರೌಢ ಶಾಲೆಯಲ್ಲಿಏರ್ಪಡಿಸಿದ್ದ 65 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಆಲೂರು ವೆಂಕಟರಾಯ ಸೇರಿದಂತೆ ಅನೇಕರ ಹೋರಾಟದ ಫಲವೇ ಅಖಂಡ ಕರ್ನಾಟಕವಾಯಿತು. ಆದರೂ ಹಿಪ್ಪಾಣಿ, ಕಾಸರಗೋಡು ಪ್ರಾಂತ್ಯ ಕರ್ನಾಟಕಕ್ಕೆ ಸೇರಲಿಲ್ಲ. ಅಲ್ಲಿನ ಕನ್ನಡಿಗರೂ ಇಂದಿಗೂ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.
ಪೋಷಕ ಬೋಧಕ ಸಮಿತಿ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್ ಮಾತನಾಡಿ, ಅತ್ಯಂತ ಪ್ರಾಚೀನವಾದ ಕನ್ನಡ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕರ್ನಾಟಕ ಕಲೆ, ಸಾಹಿತ್ಯ ಸಂಗೀತ, ಸಂಸ್ಕೃತಿಗೆ ಹೆಸರಾಗಿದೆ. ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚಿದೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಕಟ್ಟಿದ ಕವಿ ಪುಂಗವರ ಸ್ಮರಣೆ ಮಾಡಬೇಕು. ಕೇವಲ ನವೆಂಬರ್ ಉತ್ಸವವಾಗದೆ ನಿತ್ಯೋತ್ಸವವಾಗಿ ಮೊಳಗಬೇಕಿದೆ. ಸರ್ವಜನಾಂಗದ ತೋಟದಲ್ಲಿ ಕನ್ನಡಿಗರು ಆಗ್ರಸ್ಥಾನದಲ್ಲಿರಬೇಕು ಎಂದು ತಿಳಿಸಿದರು.
ಉಪಪ್ರಾಂಶುಪಾಲ ಅರ್ಜುನ್, ಶಿಕ್ಷಕಿ ಧನಲಕ್ಷ್ಮೀ, ಶಿಕ್ಷಕರಾದ ಬಿ.ಎನ್.ನಾಗರಾಜು, ಶ್ರೀನಿವಾಸ್, ದಾಕ್ಷಾಯಿಣಿ, ಜಗದಾಂಬ, ಕೋಮಲಾ, ಚೈತ್ರ, ರಂಜಿತಾ, ಶೃತಿ, ಶೈಲಜಾ, ಕುಮಾರ್, ವೆಂಕಟೇಶ್, ರೇಣುಕಪ್ಪ, ಪ್ರವೀಣ್, ಗಾಯಿತ್ರಿದೇವಿ, ಅಲೀಂ ಉಲ್ಲಾ ಬೇಗ್, ಲೋಕೇಶ್, ಶಿವಯೋಗಿ, ರಶ್ಮಿ, ಲತಾ, ತಿಮ್ಮಮ್ಮ, ಸುಧಾ, ಅರಸನಾಳ್, ರಂಗೇಗೌಡ, ಚಂದ್ರಕಲಾ, ಸುಭ್ರಮಣ್ಯ, ಮಂಜುಳಾ, ಉಷಾ, ಮಾನಸಾ ಜಯಶ್ರೀ, ಎಚ್.ಕುಮಾರ್, ರಂಗೇಗೌಡ ಇದ್ದರು.