Advertisement
ಇಲಾಖೆಯ ಒಟ್ಟು ನಿರ್ವಹಣೆ ಹೇಗಿತ್ತು?ಅಧಿಕಾರ ಸ್ವೀಕರಿಸಿದ ಬಳಿಕ ಕರ್ತವ್ಯದಲ್ಲಿ ನನಗಿದು ಮೊದಲ ಚುನಾವಣೆ. ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಿಂದ ಮಾರ್ಚ್‌ನಿಂದಲೇ ಬಂದೋ ಬಸ್ತ್ಗೆ ಕಾರ್ಯಚಟುವಟಿಕೆ ಆರಂಭಿಸಿದ್ದೆ. ಪ್ರಧಾನಿ, ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರ ಜಿಲ್ಲಾ ಭೇಟಿ, ಇತರ ವಿವಿ ಐಪಿ ಬಂದೋಬಸ್ತ್ ಅನ್ನು ವ್ಯವಸ್ಥಿತವಾಗಿ ಕಲ್ಪಿಸಿದ್ದೆವು. ಅಧಿಕಾರಿಗಳೊಂದಿಗೆ ನಿರಂತರ ಸಭೆ, ವೀಡಿಯೋ ಕಾನ್ಫರೆನ್ಸ್, ಚುನಾವಣಾ ಆಯೋಗದೊಂದಿಗೂ ಸಭೆ, ಸಂವಹನ ನಡೆಸಲಾಗಿತ್ತು. ಸಿಬಂದಿ ನಿಯೋಜನೆ ಕುರಿತು ಜಿಲ್ಲಾ ಪೊಲೀಸ್ ಅಧಿಕಾರಿಗಳ ಜತೆಗೂ ಆಗಾಗ್ಗೆ ಸಭೆ ನಡೆಯುತ್ತಿತ್ತು. ಪರಿಣಾಮ ಶಾಂತಿಯುತ ಮತದಾನಕ್ಕೆ ನಾಂದಿಯಾಯಿತು.
ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿತ್ತು. ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಚೆಕ್‌ಪೋಸ್ಟ್, ಫ್ಲೈಯಿಂಗ್ ಸ್ಕ್ವಾಡ್ ಕೂಡ ಉತ್ತಮವಾಗಿ ಕೆಲಸ ಮಾಡಿದೆ. ಕೇಂದ್ರೀಯ ಅರೆಸೇನಾ ಪಡೆ, ಸಶಸ್ತ್ರ ಸೀಮಾದಳ, ಹರಿಯಾಣ ಪೊಲೀಸ್, ಬಿಎಸ್‌ಎಫ್ ನಿಯೋಜನೆಗೆ ನೀಲನಕಾಶೆ ಸಿದ್ಧಪಡಿಸಿ ಕೊಂಡಿದ್ದೆವು. ಅವರಿಗೆ ಮೂಲ ಸೌಕರ್ಯ, ಆಹಾರ, ವಸತಿಗೆ ಶಾಲೆ, ಕಾಲೇಜು ಹಾಸ್ಟೆಲ್ ಸಜ್ಜುಗೊಳಿಸಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದೆವು. ವೈದ್ಯಕೀಯಕ್ಕೆ ಕೆಎಂಸಿ ಸಹಿತ ಇತರ ಆಸ್ಪತ್ರೆಗಳು ಸಹಕಾರ ನೀಡಿವೆ. ಗಲಭೆಕೋರರ ನಿಯಂತ್ರಣ ಯಶಸ್ವಿಯಾಯೆ¤à?
ಜಿಲ್ಲೆಯಲ್ಲಿ ಒಟ್ಟು 226 ಸೂಕ್ಷ್ಮ ಮತಗಟ್ಟೆ ಇತ್ತು. ಅಲ್ಲಿಗೆ ಅರೆಸೇನಾ ಪಡೆ ಸಿಬಂದಿ ನಿಯೋಜಿಸಿ ವಿಶೇಷ ನಿಗಾ ವ್ಯವಸ್ಥೆ ಮಾಡಲಾಗಿತ್ತು. ಅಹಿತಕರ ಘಟನೆ ನಡೆಸುವ ಮನೋಸ್ಥಿತಿ ಇರುವ 2,232 ಮಂದಿಯಿಂದ ಮುಚ್ಚಳಿಕೆ ಪಡೆಯಲಾಗಿತ್ತು. ತಲೆಮರೆಸಿಕೊಂಡಿದ್ದವರ ಪೈಕಿ 4,300 ಮಂದಿಯನ್ನು ಪತ್ತೆ ಮಾಡಿ ಕೋರ್ಟ್‌ಗೆ ಹಾಜರುಪಡಿಸಿದ್ದೆವು. 17 ಮಂದಿ ಗಡೀಪಾರು ಮಾಡಿ, 3 ಮಂದಿ ವಿರುದ್ಧ ಗೂಂಡಾ ಕಾಯ್ದೆ ಕೇಸು ದಾಖಲಿಸಿಲಾಗಿತ್ತು. ಈ ಮೂಲಕ ಗಲಭೆಕೋರರನ್ನು ನಿಯಂತ್ರಿಸಿದ್ದೆವು.
Related Articles
ನಕ್ಸಲ್ ಪೀಡಿತವೆಂದು ಗುರುತಿಸಿದ್ದ 54 ಮತಗಟ್ಟೆಗಳಲ್ಲಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿತ್ತು. ನಕ್ಸಲರ ಚಲನವಲನ ಕ್ಷೀಣಿಸಿದ್ದರೂ ಸಂಶಯಿತ ಮತಗಟ್ಟೆಗಳ ಮೇಲೆ ಕಣ್ಗಾವಲು ಇರಿಸಲಾಗಿದ್ದುದರಿಂದ ಶಾಂತಿ ಯುತ, ಸುಗಮ ಮತದಾನ ಸಾಧ್ಯವಾಯಿತು.
Advertisement
– ಚೇತನ್ ಪಡುಬಿದ್ರಿ