Advertisement
17 ವರ್ಷಗಳ ಹಿಂದೆ ಬೆಂಗಳೂರು ಮೂಲದ ಇಸ್ಕಾನ್ ಸಂಸ್ಥೆ “ಅಕ್ಷಯ ಪಾತ್ರೆ’ ಯೋಜನೆಯಡಿ ಆರಂಭಿಸಿದ್ದ ಬಡಮಕ್ಕಳಿಗೆ ಉಚಿತ ಅನ್ನದಾನ ಸೇವೆಯು 300 ಕೋಟಿ ಊಟದ ಗಡಿ ಮುಟ್ಟಿದ್ದು, ಈ ಹಿನ್ನೆಲೆಯಲ್ಲಿ, 300ನೇ ಕೋಟಿಯ ಊಟವನ್ನು ಬಡಿಸಲು ಇಸ್ಕಾನ್ ಸಂಸ್ಥೆ ಪ್ರಧಾನಿಗೆ ಆಹ್ವಾನ ನೀಡಿತ್ತು. ಈ ಹಿನ್ನೆಲೆಯಲ್ಲಿ, ಮಥುರಾದ ಬೃಂದಾವನ ಚಂದ್ರೋದಯ ಮಂದಿರಕ್ಕೆ ಆಗಮಿಸಿದ್ದ ಮೋದಿ, ಬಡಮಕ್ಕಳಿಗೆ ಊಟ ಬಡಿಸಿದರು. ಕೆಲವರಿಗೆ ತಮ್ಮ ಕೈಯಾರೆ ಊಟ ಮಾಡಿಸಿದರು.
ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಚುನಾವಣಾ ನಿಧಿಗೆ ತಲಾ 1 ಸಾವಿರ ರೂ. ದೇಣಿಗೆ ನೀಡಿದ್ದಾರೆ. ನಮೋ ಆ್ಯಪ್ ಮೂಲಕ ದೇಣಿಗೆ ಪಾವತಿಸಿದ್ದಾರೆ. ಈ ವೇಳೆ ಮಾತನಾಡಿದ ಅಮಿತ್ ಶಾ “ನಮ್ಮ ಪಕ್ಷ ಕಾರ್ಯಕರ್ತರು ನೀಡಿದ ದೇಣಿಗೆಯಿಂದಲೇ ನಡೆಯುತ್ತದೆಯೇ ವಿನಃ ದೊಡ್ಡ ಹಣದ ಗಂಟನ್ನು ಅವಲಂಬಿಸಿಲ್ಲ ಎಂದಿದ್ದಾರೆ.