Advertisement

EESL‌ನಿಂದ 10,000 ವಿದ್ಯುತ್ ಚಾಲಿತ ವಾಹನ ಚಾರ್ಜಿಂಗ್‌ ನಿಲ್ದಾಣ

12:42 AM Jun 09, 2020 | Hari Prasad |

ಹೊಸದಿಲ್ಲಿ: ಭಾರತದ ಪ್ರತೀ ವ್ಯವಸ್ಥೆ ಪರಿಸರ ಸ್ನೇಹಿಯಾಗುವತ್ತ ಹೊರಟಿದೆ. ಅದರಲ್ಲಿ ಮುಖ್ಯವಾಗಿರುವುದು ಹೊಗೆ ಮುಕ್ತ ಭಾರತ ನಿರ್ಮಾಣ.

Advertisement

ಆದ್ದರಿಂದ ಕೇಂದ್ರ ಸರಕಾರ ಅಧೀನದ ಇಇಎಸ್‌ಎಲ್‌ (ಇಂಧನ ಸಾಮರ್ಥ್ಯ ಸೇವೆಗಳ ನಿಗಮ), 2020-21ರ ಅವಧಿಯಲ್ಲಿ, ವಿದ್ಯುತ್‌ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡುವ 2,000 ನಿಲ್ದಾಣಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಕೇಂದ್ರ ವಿದ್ಯುತ್‌ ಸಚಿವಾಲಯದ ಸಹಭಾಗಿತ್ವದೊಂದಿಗೆ ಈ ಗುರಿ ಸಾಧಿಸಲು ನಿರ್ಧರಿಸಲಾಗಿದೆ.

ಈಗಾಗಲೇ ದೇಶದಲ್ಲಿ ಈ ರೀತಿಯ 300 ನಿಲ್ದಾಣಗಳಿವೆ. ಆದರೆ ಕೋವಿಡ್ ಕಾರಣದಿಂದ ಹಲವು ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ 2-3 ವರ್ಷಗಳಲ್ಲಿ ದೇಶಾದ್ಯಂತ 10,000 ನಿಲ್ದಾಣ ಸ್ಥಾಪಿಸುವುದು ಇಇಎಸ್‌ಎಲ್‌ ಗುರಿ.

ಇದಕ್ಕಾಗಿ ಕೆಲ ಸರಕಾರಿ, ಖಾಸಗಿ ಕಂಪೆನಿಗಳಾದ ಅಪೊಲೊ ಆಸ್ಪತ್ರೆ, ಬಿಎಸ್‌ಎನ್‌ಎಲ್‌, ಮಹಾ- ಮೆಟ್ರೊ, ಬಿಎಚ್‌ಇಎಲ್‌, ಎಚ್‌ಪಿಸಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಲ್ಲದೇ ಜೈಪುರ, ಹೈದರಾಬಾದ್‌, ಚೆನ್ನೈ, ನೋಯ್ಡಾ, ಅಹ್ಮದಾಬಾದ್‌ನಂತಹ ಸ್ಥಳೀಯ ಆಡಳಿತಗಳೊಂದಿಗೂ ಕೈಜೋಡಿಸಿದೆ.

Advertisement

ಸದ್ಯ ಇಇಎಸ್‌ಎಲ್‌ಗೆ ಇಂತಹ ನಿಲ್ದಾಣಗಳನ್ನು ಆರಂಭಿಸಲು ಉಚಿತವಾಗಿ ಜಾಗ ಬೇಕಾಗಿದೆ. ಇದಕ್ಕೆ ಹಲವು ಸಾರ್ವಜನಿಕ, ಖಾಸಗಿ ಸಂಸ್ಥೆಗಳು ಸ್ಥಳಾವಕಾಶ ನೀಡುತ್ತವೆ. ಇಇಎಸ್‌ಎಲ್‌ ವಿದ್ಯುತ್‌ ಚಾರ್ಜ್‌ ಮಾಡುವ ನಿಲ್ದಾಣಗಳ ಜೊತೆಗೆ, ಸ್ಮಾರ್ಟ್‌ ಗ್ರಿಡ್‌, ಸ್ಮಾರ್ಟ್‌ ಮೀಟರ್‌, ಇನ್ನಿತರ ಸ್ವಚ್ಛತೆಗೆ ಪೂರಕವಾಗಿರುವ ತಂತ್ರಜ್ಞಾನಗಳನ್ನು ಹೊಂದಿರುತ್ತದೆ.

ಅವಶ್ಯಕತೆಯೇನು?
ಭಾರತದಲ್ಲಿ ನಿಧಾನವಾಗಿ ವಿದ್ಯುತ್‌ ಚಾಲಿತ ವಾಹನಗಳು ರಸ್ತೆಗಿಳಿಯಲಾರಂಭಿಸಿವೆ. ಇವು ಪರಿಸರಸ್ನೇಹಿಯೂ ಹೌದು. ಒಂದೊಂದೇ ಕಂಪನಿಗಳು ವಿದ್ಯುತ್‌ ಚಾಲಿತ ವಾಹನಗಳನ್ನು ಉತ್ಪಾದಿಸಲು ಶುರು ಮಾಡಿವೆ.
ಆದರೆ ಭಾರತದಲ್ಲಿ ಅಂತಹ ವಾಹನಗಳನ್ನು ಬಿಡುಗಡೆ ಮಾಡಿ ಉಪಯೋಗವಿಲ್ಲ ಎಂದು ಸುಮ್ಮನಾಗಿವೆ. ಈ ಹಿನ್ನೆಲೆಯಲ್ಲಿ ಈ ತಾಣಗಳು ಅಗತ್ಯವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next