Advertisement
ಬಹುತೇಕ ಸರ್ಕಾರಿ ಶಾಲೆಗಳು ಅದರಲ್ಲೂ ಶತಮಾನದ ಶಾಲೆಗಳು ಹಳೇ ವಿದ್ಯಾರ್ಥಿಗಳ ನೆರವಿನಿಂದಲೇ ಅಭಿವೃದ್ಧಿಗೊಂಡಿವೆ. ಅಭಿವೃದ್ಧಿಗೊಂಡಿರುವ ಕಟ್ಟಡಗಳು ಹಳೇ ವಿದ್ಯಾರ್ಥಿಗಳ ಉತ್ಸಾಹವನ್ನು ಸಾರಿ ಹೇಳುತ್ತವೆ. ಅಷ್ಟು ಸುಂದರವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಈ ತರಹದ ಅಭಿವೃದ್ಧಿಸಾಧನೆಗಳ ಕೆಲಸಗಳು ಸಾಕಷ್ಟು ನಡೆಯುತ್ತಿದ್ದು, ಇಂತಹ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಚಿದಾನಂದ್ ಗೌಡ ಮಾತನಾಡಿ, ಒಂದೇ ಸೂರಿನಡಿ ಗುಣಾತ್ಮಕ, ಮೌಲ್ಯಾಧಾರಿತ, ಕೌಶಲ್ಯಯುತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಈ ಹೊಸ ಶಿಕ್ಷಣ ನೀತಿಯನ್ನು ಎಲ್ಲರೂ ಹೃದಯತುಂಬಿ ಸ್ವಾಗತಿಸಿ, ನೂತನ ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನಕ್ಕೆ ಕೈಜೋಡಿಸೋಣ ಎಂದರು.
ಕೌಶಲ್ಯಾಧಾರಿತ ಶಿಕ್ಷಣ ಪದ್ಧತಿ: ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಕೌಶಲ್ಯಾಧಾರಿತ ಶಿಕ್ಷಣ ಪದ್ಧತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ ವಾಗಿದೆ. ಶಿಕ್ಷಕರು ಈ ಹೊಸ ಶಿಕ್ಷಣವ್ಯವಸ್ಥೆಗೆ ಒಗ್ಗಿ ಕೊಂಡು ಭೋದನೆಯಲ್ಲ. ತೊಡಗಬೇಕು. ರಾಷ್ಟ್ರೀಯ ಶಿಕ್ಷಣ ಪದ್ಧತಿಯಿಂದ ಭವಿಷ್ಯದಲ್ಲಿ ಅಂಕಗಳ ಆಧಾರದಲ್ಲಿ ಉದ್ಯೋಗ ನೀಡುವ ವ್ಯವಸ್ಥೆ ಕಣ್ಮರೆಯಾಗಲಿದೆ. ಅಭ್ಯರ್ಥಿಗಳ ಕೌಶಲ್ಯಧಾರಿತವಾಗಿ ಉದ್ಯೋಗ ನೀಡುವ ವ್ಯವಸ್ಥೆ ಬರಲಿದೆ ಎಂದು ಅಭಿಪ್ರಾಯ ಪಟ್ಟರು.
ಡಯಟ್ ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ್ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲುಹಾಗೂ ಶಿಕ್ಷಕರ ಮತ್ತು ಶೈಕ್ಷಣಿಕ ಅಧಿಕಾರಿಗಳ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಬದಲಾವಣೆ ತರುವನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಮೂರು ವರ್ಷಗಳ ಅವಧಿಗೆ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಾಲ್ಕು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಈಕಾರ್ಯಕ್ರಮ ರಾಜ್ಯದಲ್ಲಿ ಇದೇ ಪ್ರಥಮ ಪ್ರಯತ್ನವಾಗಿದೆ ಎಂದರು. ಕೇರಿಂಗ್ ವಿತ್ ಕಲರ್ ಸಂಸ್ಥೆಯ ರಾಜೀವ್ ಅಲನೂರ್ ಮಾತನಾಡಿ, ಶೈಕ್ಷಣಿಕಾ ಸಂವರ್ಧನಾ ಕಾರ್ಯಕ್ರಮದಿಂದ ಉತ್ತಮ ಭೋದನೆ, ತರಬೇತಿನೀಡುವ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಿ ಅನುಭವಾತ್ಮಕ ಕಲಿಕಾ ವಾತಾರವಣ ನಿರ್ಮಿಸಲಾಗುವುದು ಎಂದರು.
ಓದುವ ಹವ್ಯಾಸ ಬೆಳೆಸಲು ಸಹಕಾರಿ: ಇಂಡಿಯಾ ಲಿಟರಸಿ ಪ್ರಾಜೆಕ್ಟ್‌ನ ಪ್ರಮೋದ್ ಶ್ರೀಧರ್ ಮೂರ್ತಿ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಹತ್ತನೇ ತರಗತಿಯ ನಂತರದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದರು. ಮಂತ್ರ ಫಾರ್ ಚೇಂಜ್‌ನ ರಫಿಕ್, ಐಐಎಂಬಿ ಸಂಸ್ಥೆಯ ಪ್ರೊ. ಗೋಪಾಲನಾಯ್ಕ ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ. ನಂಜಯ್ಯ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಪಂ ಸಿಇಒ ಡಾ.ಕೆ. ವಿದ್ಯಾ ಕುಮಾರಿ, ಶಿಕ್ಷಣ ಅಧಿಕಾರಿ ರಂಗದಾಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಸಿ, ಬಿಆರ್‌ಸಿ ಮತ್ತಿತರರು ಇದ್ದರು.ಶಿಕ್ಷಕರ ತರಬೇತಿ ನಿರ್ವಹಣೆ ಹಾಗೂ ಕಲಿಕೆಯನ್ನು ಉತ್ತೇಜಿಸಲು ಟೀಚೋಪಿಯಾ ಆ್ಯಪ್ ಬಿಡುಗಡೆಗೊಳಿಸಿ, 1000 ಶಾಲೆಗಳಿಗೆ ವಿಜ್ಞಾನ ಪ್ರಯೋಗದ ಕಿಟ್ ವಿತರಣೆ ಮಾಡಲಾಯಿತು. ಶಿಕ್ಷಣ ತಜ್ಞ ಗುರುರಾಜ್ ಕರಜಗಿ ಅವರಿಂದ ಹೊಸ ಶಿಕ್ಷಣ ನೀತಿ ಬಗ್ಗೆ ಉಪನ್ಯಾಸ ನೀಡಿದರು.