Advertisement
ನಗರದ ಶಕ್ತಿ ನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಮುಂದಿನ ಸಮಾಜದ ನೇತಾರರು. ಅದುದರಿಂದ ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಅಗತ್ಯ. ಇದೊಂದು ಸವಾಲಿನ ವರ್ಷ. ಕೊರೊನಾ ಎಲ್ಲ ಕ್ಷೇತ್ರಕ್ಕೂ ಹೊಡೆತ ನೀಡಿರುವಂತೆ ಶಿಕ್ಷಣ ಕ್ಷೇತ್ರದಲ್ಲೂ ದೂರ ಗಾಮಿ ಪರಿಣಾಮ ಬೀರಿದೆ. ಹಾಗಿದ್ದರೂ ಶಿಕ್ಷಣ ಸಂಸ್ಥೆಗಳು ಅನೇಕ ಸವಾಲುಗಳನ್ನು ಎದುರಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕಡಿತ ಆಗದಂತೆ ಉತ್ತಮ ಪ್ರಯತ್ನಗಳನ್ನು ನಡೆಸುತ್ತಿವೆ ಎಂದರು.
Related Articles
ಅಧ್ಯಕ್ಷತೆ ವಹಿಸಿದ್ದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, ವಿದ್ಯಾರ್ಥಿ, ಅಧ್ಯಾಪಕ ವೃಂದ, ಆಡಳಿತ ವೃಂದ ಮತ್ತು ಪಾಲಕರು ವಿದ್ಯಾಸಂಸ್ಥೆಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೂ ಒಂದು ದುರ್ಬಲವಾದರೂ ವಿದ್ಯಾಸಂಸ್ಥೆ ಶಿಥಿಲಗೊಳ್ಳುತ್ತದೆ ಎಂದರು. ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಛಲ ಮತ್ತು ಶ್ರದ್ಧೆಯಿಂದ ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
Advertisement
ವಿದ್ಯಾಭಾರತಿ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಜಿ.ಆರ್. ಜಗದೀಶ್ ಮಾತನಾಡಿ, ಶಕ್ತಿ ವಿದ್ಯಾಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ ಕಾರ್ಪೋರೆಟರ್ ವನಿತಾ ಪ್ರಸಾದ್ ಅತಿಥಿಯಾಗಿದ್ದರು. ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ| ಕೆ.ಸಿ. ನಾೖಕ್‌ಅತಿಥಿಗಳಿಗೆ ಗೌರವಾರ್ಪಣೆಗೈದರು.
ಆಡಿಟೋರಿಯಂನ ಆರ್ಕಿಟೆಕ್ಟ್ ದೀಪಕ್ ಡಿ’ಸೋಜಾ ಅವರನ್ನು ಸಮ್ಮಾನಿಸ ಲಾಯಿತು. ಕಾರ್ಯದರ್ಶಿ ಸಂಜಿತ್ ನಾೖಕ್ ಸ್ವಾಗತಿಸಿದರು. ಮುಖ್ಯ ಸಲಹೆಗಾರ ರಮೇಶ್ ಕೆ. ದಿಕ್ಸೂಚಿ ಭಾಷಣ ಮಾಡಿದರು. ಕೋಶಾಧಿಕಾರಿ ಮುರಳೀಧರ್ ನಾೖಕ್, ಶಕ್ತಿ ಪಿಯು ಕಾಲೇಜಿನ ಪ್ರಾಂಶುಪಾಲ (ಪ್ರಭಾರ) ಸುಧೀರ್ ಎಂ.ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪ್ರಿಸ್ಕೂಲ್ ಸಂಯೋಜಕಿ ನೀಮಾ ಸಕ್ಸೇನಾ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ ರೈ, ಪ್ರೊ| ಎಂ.ಬಿ. ಪುರಾಣಿಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಎಂಎಲ್‌ಸಿ ಬಾಲಕೃಷ್ಣ ಭಟ್‌ಉಪಸ್ಥಿತರಿದ್ದರು. ಶ್ರೀವರ ವಂದಿಸಿದರು.
ಆಡಿಟೋರಿಯಂ- ಈಜುಕೊಳದ ವಿಶೇಷತೆಆಕರ್ಷಕ ವಿನ್ಯಾಸದ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂ 1,000 ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಲಾಗುತ್ತದೆ.ಯೋಗ ತರಬೇತಿಯನ್ನು ನಡೆಸಲು ಸಹಕಾರಿಯಾಗಿದೆ. ಸರೋಜ್ ಮೆಮೊರಿಯಲ್ ಈಜುಕೊಳ ಸುಮಾರು 25 ಮೀಟರ್ ಉದ್ದ, 6 ಅಡಿ ಆಳ ಹೊಂದಿದೆ. ಈಜು ತಜ್ಞರು ತರಬೇತಿ ನೀಡಲಿರುವರು. ಸಣ್ಣ ಮಕ್ಕಳಿಗೆ ಸಣ್ಣ ಈಜುಕೊಳವನ್ನು ನಿರ್ಮಿಸಲಾಗಿದೆ.