Advertisement

Sirsi: ಸ್ವತಃ ಅತಿಥಿಯಾಗಿ ಬಂದು ಶಾಲಾ‌ ಕೊಠಡಿ ಉದ್ಘಾಟಿಸಿದ ಶಿಕ್ಷಣ ಸಚಿವ!

12:02 PM Jan 20, 2024 | Team Udayavani |

ಶಿರಸಿ: ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ 104 ಕಡೆ ಶಾಲೆಗಳಲ್ಲಿ  ನಿರ್ಮಾಣಗೊಂಡ‌ ನೂತನ ಶಾಲಾ‌ ಕೊಠಡಿಯನ್ನು ಸ್ವತಃ ಶಿಕ್ಷಣ‌ ಸಚಿವ ಮಧು ಬಂಗಾರಪ್ಪ ಅತಿಥಿಯಾಗಿ ಬಂದು ಜ.20ರ ಶನಿವಾರ ಉದ್ಘಾಟಿಸಿದರು.

Advertisement

ನಿಗದಿತ ಅಂಕೋಲಾ ಕಾರ್ಯಕ್ರಮಕ್ಕೆ ಹೊರಟ ವೇಳೆ ನೂತನ ಉರ್ದು ಶಾಲೆಯ ಕೊಠಡಿ ಉದ್ಘಾಟಿಸಿ ಕೊಟ್ಟರು.

ಪ್ರಾರಂಭದಲ್ಲಿ‌ ಶಾಸಕ ಭೀಮಣ್ಣ‌ ನಾಯ್ಕ‌ ಮಾತನಾಡಿ, ಶುಕ್ರವಾರ ರಾತ್ರಿ ಶಿರಸಿಗೆ ವಾಸ್ತವ್ಯಕ್ಕೆ ಬಂದಾಗ ಕೊಠಡಿ ಉದ್ಘಾಟನೆ ಪ್ರಸ್ತಾವನೆ ಬಂತು. ಚಿಕ್ಕ ಕೊಠಡಿ, ಉದ್ಘಾಟಿಸಿ ಬರುವೆ ಎಂದಾಗ, ನನ್ನ‌ ಇಲಾಖೆ ಕಾರ್ಯಕ್ರಮ. ಸಣ್ಣದಾದರೇನು? ದೊಡ್ಡದಾದರೇನು‌ ಎಂದು ಮಧು ಬಂಗಾರಪ್ಪ ಆಗಮಿಸಿದರು ಎಂದು ಬಣ್ಣಿಸಿದರು.

ಇದಕ್ಕೂ‌ ಮೊದಲು ಮಾತನಾಡಿದ ಡಿಡಿಪಿಐ ಬಸವರಾಜ್ ಪಾರಿ, ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅನೇಕ ಕ್ರಮಗಳಿವೆ. ಆದರೆ, ಅವರೇ ಶಿಕ್ಷಣ ಪ್ರೀತಿಯಿಂದ ಆಗಮಿಸಿದ್ದು ನಮ್ಮ ಭಾಗ್ಯ ಎಂದರು.

ಭೀಮಣ್ಣ ಶಾಸಕರು ಆದ‌ ಮೇಲೆ‌ ಪ್ರಥಮ ಬಾರಿಗೆ ಸರಕಾರಿ ಕಾರ್ಯಕ್ರಮದಲ್ಲಿ ಅವರ ಕ್ಷೇತ್ರದಲ್ಲಿ ಭಾಗಿಯಾದ ಸಂತೋಷ. ಮಕ್ಕಳಿಗೆ ಶಿಕ್ಷಣ ಕೊಡುವುದು ದೇವರ ಕೆಲಸ. ಮುಂದಿನ ವರ್ಷ 500 ಕೆಪಿಎಸ್ ಮಾದರಿ ಶಾಲೆ ಆರಂಭಿಸಲು ಯೋಜಿಸಿದ್ದೇವೆ. ಎಲ್ ಕೆಜಿಯಿಂದ ಪಿಯುಸಿ ತನಕ 14 ವರ್ಷ ಮಗು ಒಂದೇ ಕಡೆ ಓದುವಂತೆ ಆಗಬೇಕು ಎಂದರು.

Advertisement

ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ‌ ಮಹಾಲಿಂಗಣ್ಙವರ, ದಯಾನಂದ‌ ನಾಯಕ, ಖಾದರ‌ ಆನವಟ್ಟಿ, ಎಸ್.ಕೆ.ಭಾಗವತ, ಇಕ್ಬಾಲ್ ಬಿಳಗಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next