ಯಾದಗಿರಿ: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ತಜ್ಞರ ಜತೆ ಚರ್ಚಿಸಿ ಸಮಾಜ ಹಾಗೂ ಮಕ್ಕಳ ಹಿತದೃಷ್ಟಿಯಿಂದ ನಿರ್ಧಾರಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಳಿಕ ಮೊದಲ ಬಾರಿಗೆ ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ನಾಳೆಯೇ ಶಿಕ್ಷಣ ತಜ್ಞರ ಜತೆ ಸಭೆ ನಡೆಸುವುದಾಗಿ ಹೇಳಿದ ಅವರು, ಮುಖ್ಯಮಂತ್ರಿಗಳ ಸಲಹೆ ಪಡೆದು ನಿರ್ಣಯಕ್ಕೆ ಬರುವುದಾಗಿ ಹೇಳಿದರು.
ಟಾಸ್ಕ್ ಫೋರ್ಸ್ ಸಮಿತಿಯಿದ್ದು ಈಗಾಗಲೇ ಸಮಿತಿ ಶಾಲೆಗಳ ಆರಂಭ ಮಾಡಬೇಕು ಎಂದು ಹೇಳಿದ್ದು, ಪ್ರಾಥಮಿಕ ಶಾಲೆಯೂ ಆರಂಭಿಸಬೇಕು ಎಂದು ಅಭಿಪ್ರಾಯ ಮೂಡಿಬಂದಿದ್ದು ಸರ್ಕಾರ ಈ ವಿಚಾರವಾಗಿ ಗಮನಹರಿಸಿದ್ದು ತಜ್ಞರ ಜತೆ ಚರ್ಚಿಸಿ ಶಾಲೆ ಆರಂಭಿಸುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ :ವಿಜಯಪುರ : ತೋಟದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ
ಪ್ರಪಂಚದಲ್ಲಿ ಎಲ್ಲೂ ಶಾಲೆ ತರಗತಿ ಸ್ಥಗಿತವಾಗಿರಲಿಲ್ಲ. ಕೋವಿಡ್ ಸಮಯದಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿಯುವಂತಾಯಿತು. ಆದರೇ, ಆನ್‌ಲೈನ್ ಶಿಕ್ಷಣ, ಶಿಕ್ಷಕರೆ ಮನೆ ಮನೆಗೆ ತೆರಳಿ ಪಾಠ ಮಾಡಿದರು.
ಮೊದಲು ಕೋವಿಡ್ ಎಂದರೆ, ಏನು ಅಂತ ಗೊತ್ತಿರಲಿಲ್ಲ. ಅದು ನಮ್ಮ ದೇಶಕ್ಕೆ ಹೊಸ ರೋಗ. ನಮ್ಮಲ್ಲಿ ಮೊದಲು ಪಿಪಿಇ ಕಿಟ್ ಇರಲಿಲ್ಲ, ಈಗಾಗಲೇ ನಾವು ಮೊದಲು ಹಾಗೂ ಎರಡನೇ ಅಲೆಯನ್ನು ಎದುರಿಸಿದ್ದು, ರಾಜ್ಯದಲ್ಲಿ ಮೂಲನೇ ಅಲೆ ಎದುರುಸಲು ಸರ್ಕಾರ ಸಕಲ ಸನ್ನದ್ದವಾಗಿದೆ ಎಂದರು.