Advertisement

Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”

05:38 PM Jul 25, 2024 | Team Udayavani |

ಬೀದರ: ದಶಕದ ಹಿಂದೆ ಶೆ„ಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿ ಹೊತ್ತಿದ್ದ ಗಡಿನಾಡು ಬೀದರ ಈಗ “ಶಿಕ್ಷಣ ಕಾಶಿ’ಯಾಗಿ ಬೆಳೆಯುತ್ತಿದೆ. ಯುಪಿಎಸ್‌ಸಿ ಅಂತಹ ಉನ್ನತ ಪರೀಕ್ಷೆಗಳಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಜಿಲ್ಲೆಯ ಮಕ್ಕಳು, ನೀಟ್‌ ಪರೀಕ್ಷೆಯಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಈ ವರ್ಷದ ನೀಟ್‌ ಟಾಪರ್ಸ್ ಗಳ ಪಟ್ಟಿಯಲ್ಲಿ ರಾಜ್ಯದಲ್ಲೇ ಬೀದರ ಮೂರನೇ ಸ್ಥಾನಪಡೆದಿರುವುದೇ ಸಾಕ್ಷಿ.

Advertisement

ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇತ್ತೀಚೆಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET ) ಕೇಂದ್ರವಾರು ಪಟ್ಟಿ ಬಿಡುಗಡೆ ಮಾಡಿದ್ದು, ಈ ಬಾರಿ ಅತಿ ಹೆಚ್ಚು ಟಾಪರ್ಗಳ ಮೂರು ಜಿಲ್ಲೆಗಳಲ್ಲಿ ಬೀದರ ಸ್ಥಾನ ಪಡೆದಿರುವುದು ಗಮನಾರ್ಹ.

ಇದನ್ನೂ ಓದಿ:Mangaluru: ಸೊಳ್ಳೆ ಸೆರೆ ಹಿಡಿಯಲು ಬಂದಿದೆ ಯಂತ್ರ ! 20 ವರ್ಷಗಳ ಸಂಶೋಧನೆ ಫಲ…

ನೀಟ್‌ ಪರೀಕ್ಷೆಯಲ್ಲಿ 600 ರಿಂದ 720 ಶ್ರೇಣಿಯಲ್ಲಿ ಅಂತರದಲ್ಲಿ ಕರ್ನಾಟಕದ 4,320 ವಿದ್ಯಾರ್ಥಿಗಳು ಅಂಕಗಳಿಸಿದ್ದಾರೆ. ಬೆಂಗಳೂರು (1457), ಮಂಗಳೂರು (621) ಮೊದಲ ಎರಡು ಸ್ಥಾನದಲ್ಲಿದ್ದರೆ, ಬೀದರ ಜಿಲ್ಲೆ (309) ಮೂರನೇ ಸ್ಥಾನಕ್ಕೇರಿದೆ. ಬೀದರ ಜಿಲ್ಲೆಯ ನೀಟ್‌ ಟಾಪರ್‌ಗಳ ಪೈಕಿ 6 ವಿದ್ಯಾರ್ಥಿಗಳು 700+ ಅಂಕ ಗಳಿಸಿದರೆ, 96 ವಿದ್ಯಾರ್ಥಿಗಳು 650+ ಅಂಕ, 310 ಮಕ್ಕಳು 600+ ಅಂಕ, 601 ಜನರು 550+ ಅಂಕ ಮತ್ತು 924
ವಿದ್ಯಾರ್ಥಿಗಳು 500+ ಅಂಕ ಗಳಸಿದ್ದಾರೆ. ಶೈಕ್ಷಣಿಕವಾಗಿ ಮುಂದುವರೆದಿರುವ ಬೆಂಗಳೂರು ಮತ್ತು ಮಂಗಳೂರು ಜಿಲ್ಲೆಯವರ ಜತೆಗೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಬೀದರನ ಮಕ್ಕಳ ಮಹತ್ವದ ಸಾಧನೆ ಈ ಬಾರಿ ರಾಜ್ಯದ ಗಮನಸೆಳೆದಿದೆ.

ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ವಿದ್ಯಾರ್ಥಿಗಳು ನೀಟ್‌ನಲ್ಲಿ ಸಾಧನೆ ಮಾಡಿ ವೈದ್ಯ ಶಿಕ್ಷಣಕ್ಕೆ ಪ್ರವೇಶಿಸುತ್ತಿದ್ದಾರೆ. ಮಾಧ್ಯಮ, ಬಡತನವು ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗದು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಜಿಲ್ಲೆಯ ಸಾಧನೆಯಲ್ಲಿ 2007ರಲ್ಲಿ ಸ್ಥಾಪನೆಯಾದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್‌) ಸಹ ಪ್ರೇರಣೆಯಾಗಿದ್ದು, ಬ್ರಿಮ್ಸ್‌ನಲ್ಲಿ
ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಸ್ಥಳೀಯ ಹೆಚ್ಚಿರುವುದು ವಿಶೇಷ. ಈ ಮೊದಲು ವೈದ್ಯ ಶಿಕ್ಷಣಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ಬೆಂಗಳೂರು, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಹೋಗುತ್ತಿದ್ದರು. ಆದರೆ, ಈಗ ಆ ಜಿಲ್ಲೆಗಳು ಮಾತ್ರವಲ್ಲ ಹೊರ ರಾಜ್ಯದ ಮಕ್ಕಳು ಸಹ ಬೀದರನತ್ತ ಮುಖ ಮಾಡುತ್ತಿದ್ದಾರೆ.

Advertisement

ಬೀದರ ನಗರದಲ್ಲಿ 600 ವರ್ಷಗಳ ಹಿಂದೆ ಬಹುಮನಿ ರಾಜವಂಶದ ಅವ ಯಲ್ಲಿ ನಿರ್ಮಾಣವಾಗಿದ್ದ ಗವಾನ್‌ ಮದರಸಾ ಅಂದಿನ ಪ್ರಮುಖ ಶೈಕ್ಷಣಿಕವಾಗಿ ಕೇಂದ್ರವಾಗಿತ್ತು. ವಿಶ್ವದ 25 ರಾಷ್ಟ್ರಗಳ ಪ್ರತಿನಿಧಿ ಗಳು ಇಸ್ಲಾಮಿಕ್‌ ಶಿಕ್ಷಣಕ್ಕಾಗಿ ಬೀದರಗೆ ಬರುತ್ತಿದ್ದರು. ಈಗ ಮತ್ತೆ ಧರಿನಾಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದ್ದು, ಶಿಕ್ಷಣದ ಪ್ರಮುಖ ಕೇಂದ್ರ ಬಿಂದುವಾಗಿ ಬೆಳೆಯುತ್ತಿದೆ ಎಂಬ ಸುಳಿವನ್ನು ಈ ಫಲಿತಾಂಶ ನೀಡಿದೆ.

ನೀಟ್‌ ಟಾಪರ್ಗಳ ಪಟ್ಟಿಯಲ್ಲಿ ಬೀದರ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆ ವಿಷಯ. ಮುಖ್ಯವಾಗಿ ಇಲ್ಲಿನ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿರುವುದು, ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ತಯಾರು ಮಾಡುತ್ತಿರುವುದು ಸಾಧನೆಗೆ ಕಾರಣ. ಈ ಹಿಂದೆ ಜಿಲ್ಲೆಯ ವಿದ್ಯಾರ್ಥಿಗಳು ವೈದ್ಯ ಶಿಕ್ಷಣಕ್ಕಾಗಿ ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗುತ್ತಿದ್ದರು. ಆದರೆ, ಈಗ ಅಲ್ಲಿನ ಮಕ್ಕಳು ಬೀದರನತ್ತ ಮುಖ ಮಾಡುತ್ತಿದ್ದಾರೆ. ಶೆ„ಕ್ಷಣಿಕ ಬದಲಾವಣೆಯಿಂದ ಬೀದರ “ಶಿಕ್ಷಣ ಕಾಶಿ?ಯಾಗಿ ಬೆಳೆಯುತ್ತಿದೆ.
-ಡಾ| ಅಬ್ದುಲ್‌ ಖದೀರ್‌, ಅಧ್ಯಕ್ಷರು, ಶಾಹೀನ್‌ ಶಿಕ್ಷಣ ಸಮೂಹ ಸಂಸ್ಥೆ, ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next