Advertisement

Education: ಮಹಾಭಾರತ-ರಾಮಾಯಣ ಶಾಲಾ ಪಠ್ಯಕ್ರಮದಲ್ಲಿರಲಿ- NCERT ಉನ್ನತ ಸಮಿತಿ ಶಿಫಾರಸು

12:59 AM Nov 22, 2023 | Team Udayavani |

ಹೊಸದಿಲ್ಲಿ: ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ಸಮಾಜ -ವಿಜ್ಞಾನ ವಿಷಯದ ಪಠ್ಯಗಳಾಗಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸೇರ್ಪಡೆಗೊಳಿಸುವಂತೆ ಹಾಗೂ ತರಗತಿಗಳ ಗೋಡೆಯ ಮೇಲೆ ಸಂವಿಧಾನದ ಪ್ರಸ್ತಾವನೆಯನ್ನು ಬರೆಯುವಂತೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸ್ಥಾಪಿಸಿರುವ ಉನ್ನತ ಸಮಿತಿಯು ಶಿಫಾರಸು ಮಾಡಿದೆ.

Advertisement

ಸಮಿತಿಯ ಅಧ್ಯಕ್ಷರಾದ ಸಿ.ಐ.ಇಸಾಕ್‌ ಈ ಕುರಿತು ಮಂಗಳವಾರ ಮಾಹಿತಿ ನೀಡಿದ್ದು, 7 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಮಹಾಕಾವ್ಯಗಳನ್ನು ಕಲಿಸುವುದು ಮಹತ್ವದ್ದಾಗಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಹದಿಹರೆಯದಲ್ಲೇ ಸ್ವಾಭಿಮಾನ, ದೇಶಭಕ್ತಿ, ರಾಷ್ಟ್ರಹಿತ ಚಿಂತನೆಗಳನ್ನು ಬೆಳಸಿಕೊಳ್ಳುತ್ತಾರೆ. ಪ್ರತೀವರ್ಷ ಸಾವಿರಾರು ವಿದ್ಯಾರ್ಥಿಗಳು ದೇಶ ತೊರೆದು, ಬೇರೆ ರಾಷ್ಟ್ರಗಳ ಪೌರತ್ವ ಬಯಸುತ್ತಾರೆ. ಏಕೆಂದರೆ ಅವರಲ್ಲಿ ದೇಶಭಕ್ತಿಯ ಕೊರತೆಯಿದೆ. ಆ ಕೊರತೆಯನ್ನು ನಿವಾರಿಸಲು ನಮ್ಮ ಬೇರುಗಳನ್ನು, ಮೂಲಗಳನ್ನು ಅರಿಯುವುದು ಮುಖ್ಯ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಬೆಳೆಯಲು ಈ ಕಲಿಕೆ ಅಗತ್ಯವೆಂದು ಸಮಿತಿ ಭಾವಿಸಿದೆ ಎಂದು ಇಸಾಕ್‌ ತಿಳಿಸಿದ್ದಾರೆ.

ಎನ್‌ಸಿಇಆರ್‌ಟಿ ಕಳೆದ ವರ್ಷ ರಚಿಸಿರುವ ಈ 7 ಸದ್ಯಸರ ಸಮಿತಿಯು ಸಮಾಜ ವಿಜ್ಞಾನ ವಿಷಯದ ಪಠ್ಯ ಪರಿಷ್ಕರಣೆಗೆ ಈಗಾಗಲೇ ಹಲವಾರು ಶಿಫಾರಸುಗಳನ್ನು ನೀಡಿದೆ. ಬಹುಶಃ ಮುಂದಿನ ವರ್ಷ ಜುಲೈಯಲ್ಲಿ ಈ ಶಿಫಾರಸುಗಳನ್ನು 19 ಸದಸ್ಯರು ಇರುವ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿ (ಎನ್‌ಎಸ್‌ಟಿಸಿ) ಪರಿಗಣಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next