Advertisement

Education: ಗ್ರಾಮೀಣ ಭಾಗದ ಕೆಲ ಯುವಕರಿಗೆ 2ನೇ ತರಗತಿ ಪಠ್ಯ ಓದಲೂ ಕಷ್ಟ!

10:35 PM Jan 17, 2024 | Team Udayavani |

ನವದೆಹಲಿ: ಭಾರತದ ಗ್ರಾಮೀಣ ಭಾಗದಲ್ಲಿರುವ 14ರಿಂದ 18 ವರ್ಷದೊಳಗಿನ ವ್ಯಕ್ತಿಗಳ ಶೈಕ್ಷಣಿಕ ಗುಣಮಟ್ಟ ಹೇಗಿದೆ? ಪ್ರಥಮ್‌ ಫೌಂಡೇಶನ್‌ ಸಿದ್ಧಪಡಿಸಿರುವ ಎಎಸ್‌ಇಆರ್‌ (ಶೈಕ್ಷಣಿಕ ವರದಿಯ ವಾರ್ಷಿಕ ಸ್ಥಿತಿಗತಿ) ವರದಿ ತುಸು ಆತಂಕ ಮೂಡಿಸುತ್ತದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ 34,745 ಯುವಕರ ಪೈಕಿ; ಕಾಲು ಪ್ರತಿಶತ ವ್ಯಕ್ತಿಗಳಿಗೆ ತಮ್ಮದೇ ಭಾಷೆಯಲ್ಲಿ 2ನೇ ತರಗತಿ ಪಠ್ಯವನ್ನೂ ಸರಾಗವಾಗಿ ಓದಲು ಬರುವುದಿಲ್ಲ. ಶೇ.42.7 ವ್ಯಕ್ತಿಗಳಿಗೆ ಇಂಗ್ಲಿಷ್‌ ವಾಕ್ಯಗಳನ್ನು ಓದಲು ಕಷ್ಟವಾಗಿದ್ದು ಗಮನಕ್ಕೆ ಬಂದಿದೆ.

Advertisement

ಅಧ್ಯಯನ ವರದಿಗೆ “ಬಿಯಾಂಡ್‌ ಬೇಸಿಕ್ಸ್‌’ ಎಂದು ಹೆಸರನ್ನಿಡಲಾಗಿದೆ. ದೇಶದ 26 ರಾಜ್ಯಗಳ 28 ಜಿಲ್ಲೆಗಳ ಗ್ರಾಮೀಣ ಭಾಗದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಮಾತಾಡಿಸಲಾಗಿದೆ. 14ರಿಂದ 18 ವಯೋಮಿತಿಯ ಒಟ್ಟು ಯುವಕ/ಯುವತಿಯರ ಪೈಕಿ ಶೇ.86.8 ಮಂದಿ ಶಾಲಾ-ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಈ ಪೈಕಿ ಹೆಚ್ಚು ವಯಸ್ಸಾದವರು ಓದಿಗೆ ನಮಸ್ಕಾರ ಹೇಳಿದ ಪ್ರಮಾಣವೂ ಜಾಸ್ತಿಯಿದೆ. ಉದಾಹರಣೆಗೆ 18 ವರ್ಷದವರ ಪೈಕಿ ಶೇ.32.6 ಮಂದಿ ಕಲಿಕೆಯಿಂದ ಹೊರಗಿದ್ದಾರೆ.

2023ಕ್ಕೂ ಮುನ್ನ ಪ್ರಥಮ್‌ ಸಂಸ್ಥೆ 2017ರಲ್ಲಿ ಸಮೀಕ್ಷೆ ನಡೆಸಿತ್ತು. ಆಗ ಮಾತನಾಡಿಸಿದ್ದ 14ರಿಂದ 18 ವಯೋಮಿತಿಯ ವ್ಯಕ್ತಿಗಳ ಪೈಕಿ ಶೇ.76.6 ಮಂದಿ 2ನೇ ತರಗತಿ ಪಠ್ಯ ಓದಲು ಸಮರ್ಥರಿದ್ದರು. 2023ರಲ್ಲಿ ಆ ಪ್ರಮಾಣ ಶೇ.73.6ಕ್ಕಿಳಿದಿದೆ!

Advertisement

Udayavani is now on Telegram. Click here to join our channel and stay updated with the latest news.

Next