Advertisement

ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ದಿ

03:33 PM May 16, 2022 | Team Udayavani |

ಮಾನ್ವಿ: ಆರ್ಯವೈಶ್ಯ ಸಮುದಾಯದವರು ವ್ಯಾಪಾರ ಹಾಗೂ ವ್ಯಾವಹಾರಗಳ ಅಭಿವೃದ್ಧಿಯ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯವಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಶಿಕ್ಷಣಕ್ಕೆ ಅಗತ್ಯವಿರುವ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘ ತಾಲೂಕು ಅಧ್ಯಕ್ಷ ಆರ್‌.ಮುತ್ತುರಾಜ ಶೆಟ್ಟಿ ತಿಳಿಸಿದರು.

Advertisement

ಪಟ್ಟಣದ ವಾಸವಿ ಶ್ರೀ ನಗರೇಶ್ವರ ದೇವಸ್ಥಾನದ ಆವರಣದಲ್ಲಿನ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ವಾಸವಿ ಜಯಂತಿ ಅಂಗವಾಗಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘ ತಾಲೂಕು ಘಟಕ ವತಿಯಿಂದ ಉನ್ನತ ಶಿಕ್ಷಣದಲ್ಲಿ ಬಂಗಾರದ ಪದಕ ಪಡೆದ ಪಟ್ಟಣದ ಸುಪ್ರಿಯಾ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು

ಕರ್ನಾಟಕ ಆರ್ಯವೈಶ್ಯ ಮಹಾಸಭಾ 2022 ನೇ ಸಾಲಿಗೆ ನಡೆದ ವಾರ್ಷಿಕ ಚುನಾವಣೆಯಲ್ಲಿ ಜಿಲ್ಲೆಯಿಂದ ಆವಿರೋಧವಾಗಿ ಆಯ್ಕೆಯಾದ ಆರ್‌.ಮುತ್ತುರಾಜ ಶೆಟ್ಟಿ ಹಾಗೂ ರಾಯಚೂರಿನ ಕುಂಟ್ನಾಳ್‌ ವೆಂಕಟೇಶ, ಬಿ.ಜಗದೀಶ ಗುಪ್ತಾ, ದೇವನಪಲ್ಲಿ ವಾಸುದೇವ, ಸಿ.ಗಿರಿಧರ ತಲಮಾರಿ, ಸುರುಪುರ ರಾಘವೇಂದ್ರ ಮುದಗಲ್‌, ಇ.ವೀರಭದ್ರ, ಕೆ.ಭೀಮಾಶಂಕರ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next