Advertisement

ಶಿಕ್ಷಣ ವ್ಯಾಪಾರೀಕರಣ ಸಲ್ಲದು: ಬೆಲ್ದಾಳ ಶ್ರೀ

10:42 AM Mar 22, 2019 | Team Udayavani |

ಬಸವಕಲ್ಯಾಣ: ಶಿಕ್ಷಣದ ವ್ಯಾಪಾರೀಕರಣದಿಂದ ಗ್ರಾಮೀಣ ಭಾಗದ ಶಿಕ್ಷಣದ ಮೇಲೆ ಪರಿಣಾಮ ಬೀಳುತ್ತಿದೆ ಎಂದು ಬಸವ ಮಹಾಮನೆ ಸಂಸ್ಥೆ ಅಧ್ಯಕ್ಷ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.

Advertisement

ಮುಡಬಿ ಗ್ರಾಮದ ವೆಂಕಟೇಶ್ವರ ಪ್ರಾಥಮಿಕ ಶಾಲೆಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಡಜನರ ಪರವಾಗಿ ರೈತರ ಪರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಂಸ್ಥೆಯವರು ಮುಂದಾಗಿರುವುದು ಉತ್ತಮ ಕಾರ್ಯ ಎಂದರು.

ಹುಲಸೂರಿನ ಡಾ| ಶಿವಾನಂದ ಸ್ವಾಮೀಜಿ ಮಾತನಾಡಿ, ಇಂದು ಮಹಿಳೆಯರು ಏನು ಬೇಕಾದರು ಮಾಡಬಹುದು. ಅವರಲ್ಲಿ ದೊಡ್ಡ ಶಕ್ತಿಯಿದೆ. ಬುದ್ಧ, ಬಸವ, ಅಂಬೇಡ್ಕರ್‌ ಹೇಳಿದ ಹಾಗೆ ಮಕ್ಕಳಿಗೆ ಕಷ್ಟ ಪಟ್ಟು ಗುಣಮಟ್ಟದ ಶಿಕ್ಷಣ ಕಲಿಸಬೇಕು ಎಂದು ಹೇಳಿದರು. ಮುಡಬಿ ಪೊಲೀಸ್‌ ಠಾಣೆ ಪಿಎಸ್‌ಐ ವಸೀಮ್‌ ಪಟೇಲ್‌ ಮಾತನಾಡಿ, ಗುರಿ ಸಾಧಿ ಸಲು ಮನುಷ್ಯನಲ್ಲಿ ಛಲವಿರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು. 

ಸಂಸ್ಥೆ ಅಧ್ಯಕ್ಷೆ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ಭಾಲ್ಕಿ ಸೂರ್ಯೋದಯ ಪಬ್ಲಿಕ್‌ ಶಾಲೆ ಸಂಸ್ಥಾಪಕಿ ಉಷಾ ಖಂಡ್ರೆ, ಮುಡಬಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಹಳ್ಳದ, ನ್ಯಾಯವಾದಿ ಶ್ರೀನಿವಾಸರಾವ್‌, ಮುಡಬಿ ಸಿಆರ್‌ಪಿ ಹಣಮಂತ ಆರ್‌.ಬಿ, ವಸಾಪ ತಾಲೂಕು ಅಧ್ಯಕ್ಷ ಕಲ್ಯಾಣರಾವ್‌ ಮದರಗಾಂವಕರ್‌, ವೀರೇಶ ಪಂಚಾಳ, ಸಿವಿಲ್‌ ಇಂಜಿನಿಯರ ಸಯ್ಯದ್‌ ಅಲ್ತಾಫ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next