Advertisement

ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ಸಂಜೀವಿನಿ

12:36 PM Apr 21, 2017 | |

ಮೈಸೂರು: ಸ್ಪರ್ಧಾತ್ಮಕ ಯುಗದಲ್ಲಿ ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ಶಿಕ್ಷಣ ಬಹುಮುಖ್ಯ ಎಂದು ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು. ನಗರದ ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ಬನುಮೋತ್ಸವ ಸಮಾರೋಪ, ಅಂತರಕಾಲೇಜು ಭಾವಗೀತೆ ಮತ್ತು ಜಾನಪದ ಗೀತೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇಂದು ಸವಾಲಿನ ಜಗತ್ತು ನಮ್ಮ ಮುಂದಿದೆ. ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡಮಟ್ಟದ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಂತಹ ಸವಾಲುಗಳನ್ನು ಸ್ವೀಕರಿಸಬೇಕಾದರೆ ಎದೆಗಾರಿಕೆ ಬೇಕು. ಬದುಕನ್ನು ಸವಾಲಾಗಿ ಸ್ವೀಕರಿಸಿದರೆ ಏನನ್ನಾದರೂ ಸಾಧಿಸಬಹುದು ಎಂದರು.

ಶಿಕ್ಷಣಕ್ಕೆ ಅಗಾಧ ಶಕ್ತಿಯಿದೆ. ಶಿಕ್ಷಣ ಎಲ್ಲಾ ಸಮಸ್ಯೆಗಳಿಗೂ ಸಂಜೀವಿನಿ. ಇಂದಿನ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಪರಿಗಣಿಸಿದಷ್ಟು ಗಂಭೀರವಾಗಿ ಪದವಿ ಶಿಕ್ಷಣವನ್ನು ಪರಿಗಣಿಸುತ್ತಿಲ್ಲ. ವಿದ್ಯಾರ್ಥಿಗಳು ಶಿಕ್ಷಣವನ್ನು ಅಸ್ತ್ರವಾಗಿ ಮಾಡಿಕೊಂಡು ತಮ್ಮ ವ್ಯಕ್ತಿತ್ವವನ್ನು ಗಟ್ಟಿಯಾಗಿಸಿಕೊಳ್ಳುವ ಹಠಕ್ಕೆ ಬೀಳಬೇಕು.

ಸದಾ ಎತ್ತರದ ಕನಸುಗಳನ್ನು ಕಾಣಬೇಕು. ಅಪರಿಮಿತ ಕನಸುಗಳ ಸಾಕಾರಕ್ಕಾಗಿ ನಿರಂತರವಾಗಿ ಶ್ರಮಪಡಬೇಕು. ಜೀವನವನ್ನು ಕಟ್ಟಿಕೊಳ್ಳುವ ಭರದಲ್ಲಿ ಪರಿಸರವನ್ನು ಮರೆಯಬಾರದು. ನಮ್ಮ ಬದುಕನ್ನು ಪ್ರೀತಿಸುವುದರ ಜತೆಗೆ ಸಮಾಜ, ಪರಿಸರ, ಪ್ರಾಣಿ-ಪಕ್ಷಿಗಳನ್ನೂ ಸಹ ಪ್ರೀತಿಸಬೇಕು ಎಂದರು.

ಡಿ.ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ವಿ.ಬಿ. ಜಯದೇವ, ಆಡಳಿತಾಧಿಕಾರಿ ಡಾ. ಎನ್‌. ತಿಮ್ಮಯ್ಯ, ಗೌರವ ಕಾರ್ಯದರ್ಶಿ ಎಸ್‌.ಜೆ.. ಲಕ್ಷೆಗೌಡ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪೊ›. ಸುರೇಶ್‌ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next