Advertisement
ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ನಡೆದ ಮತದಾನದಲ್ಲಿ ಅಂತೀಮವಾಗಿ ಶೇ 93 ರಷ್ಟು ಮತದಾನವಾಗಿದೆ.
ಸಂಸ್ಥೆಯ ಮತಾಧಿಕಾರ ಹೊಂದಿ ವಿದೇಶದಲ್ಲಿದ್ದವರು ಚುನಾವಣೆಗೆ ಆಗಮಿಸಿ ತಮ್ಮಹಕ್ಕು ಚಲಾಯಿಸಿರುವುದು ಸಹ ಕಂಡು ಬಂತು. ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ವಿಧಾನ ಪರಿಷತ ಸದಸ್ಯರು ಹಾಗೂ ಮಾಜಿ ಅಧ್ಯಕ್ಣರಾದ ಶಶೀಲ್ ನಮೋಶಿ ಮತ್ತು ನಾಲ್ಕು ಸಲ ಅಧ್ಯಕ್ಷ ರಾಗಿರುವ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಫೆನಾಲ್ ದೊಂದಿಗೆ ಸ್ಪರ್ಧಿಸಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
Related Articles
Advertisement
ಆರು ಗಂಟೆವರೆಗೂ ನಡೆದ ಮತದಾನ: ಮತದಾನ ವೇಳೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ನಿಗದಿಯಾಗಿದ್ದರೂ ಸಂಜೆ ಐದು ಗಂಟೆಯೊಳಗೆ ಮತಕೇಂದ್ರದೊಳಗೆ ನೂರಾರು ಮತದಾರರು ಇರುವುದರಿಂದ ಸಂಜೆ ಆರು ಗಂಟೆವರೆಗೂ ಚುನಾವಣೆ ನಡೆಯಿತು.
ಭಾನುವಾರ ಮತ ಏಣಿಕೆ; ಫೆ. 28ರ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಪಿಡಿಎ ಇಂಜಿನಿಯರಿಂಗ್ ಕಾಲೇಜ್ ನ ಗ್ರಂಥಾಲಯದಲ್ಲಿ ನಡೆಯಲಿದೆ. ಸಂಜೆ ಇಲ್ಲವೇ ರಾತ್ರಿ ಹತ್ತರ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳಿವೆ. ಚುನಾವಣಾಧಿಕಾರಿಯಾಗಿ ಸಿ.ಸಿ.ಪಾಟೀಲ್, ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗುರ ಚುನಾವಣಾ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಚುನಾವಣೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.