Advertisement

ವಿದೇಶದಲ್ಲಿ ಶಿಕ್ಷಣ ಕುಗ್ಗದ ವಿದ್ಯಾರ್ಥಿಗಳ ಹುಮ್ಮಸ್ಸು

12:36 AM Sep 06, 2020 | mahesh |

ಮಣಿಪಾಲ: ಕೋವಿಡ್‌ನಿಂದಾಗಿ ಶೈಕ್ಷಣಿಕ ವರ್ಷ ದಲ್ಲಿ ಗಮನಾರ್ಹ ಬದಲಾವಣೆಗಳು ಆಗಿರು ವುದು ಸುಳ್ಳಲ್ಲ. ಕೊರೊನಾ ತಂದೊಡ್ಡಿದ ಹತ್ತಾರು ತೊಡಕುಗಳ ನಡುವೆಯೂ ವಿದ್ಯಾರ್ಥಿಗಳಲ್ಲಿ ಕಲಿಯುವ ಹುಮ್ಮಸ್ಸೇನೂ ಕಡಿಮೆಯಾಗಿಲ್ಲ. ಹೊರ ದೇಶಕ್ಕೆ ತೆರಳಿ ವಿದ್ಯಾಭ್ಯಾಸ ಮಾಡಲು ಭಾರತೀಯ ವಿದ್ಯಾರ್ಥಿಗಳು ಸಿದ್ಧರಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

Advertisement

“ಎಡ್ವೊಯ…’ ಶಿಕ್ಷಣ ಸಲಹಾ ಸಂಸ್ಥೆಯು ಕೋವಿಡ್‌ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಅರ್ಜಿ ಹಾಕುತ್ತಿರುವ ವಿದ್ಯಾರ್ಥಿಗಳ ಆಸಕ್ತಿಯ ಬಗ್ಗೆ ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಿತ್ತು.

ಕೆನಡಾ ನಂಬರ್‌ 1
ಅಧ್ಯಯನ ವರದಿ ಪ್ರಕಾರ ಸೆಪ್ಟಂಬರ್‌ 2020ರ ಅಂತ್ಯದ ವೇಳೆಗೆ ಶೇ.35ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಲು ಬಯಸಿದ್ದಾರೆ. ಶೇ.33ರಷ್ಟು ವಿದ್ಯಾರ್ಥಿಗಳು ಐರ್ಲೆಂಡ್‌ಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದಾರೆ. ಎಡ್ವೊಯ… ಸಂಸ್ಥೆ ಯುಕೆ, ಯುಎಸ್‌, ಕೆನಡಾ ಮತ್ತು ಐರ್ಲೆಂಡ್‌ನ‌ಲ್ಲಿರುವ ಕಾಲೇಜು ಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಿದ್ದ ಸುಮಾರು 4 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಈ ಸಮೀಕ್ಷೆಗೆ ಒಳಪಡಿಸಿತ್ತು.

ಅಮೆರಿಕದತ್ತ ಒಲವು
ಅಮೆರಿಕವನ್ನು ಉತ್ತಮ ಅಧ್ಯಯನ ಕ್ಷೇತ್ರವೆಂದು ಪರಿಗಣಿಸಲಾಗಿದೆ. 2021ರ ಜನವರಿ ವೇಳೆಗೆ ಹೆಚ್ಚಿನ ವಿದ್ಯಾರ್ಥಿಗಳು ಯುಎಸ್‌ಗೆ ತೆರಳುವ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇನ್ನು ಶೇ.43ರಷ್ಟು ವಿದ್ಯಾರ್ಥಿಗಳು ಯುಎಸ್‌ನಲ್ಲಿಯೇ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆನ್‌ಲೈನ್‌ನತ್ತ ಹೆಜ್ಜೆ
ವಿಶ್ವಾದ್ಯಾಂತ ಶಿಕ್ಷಣ ಸಂಸ್ಥೆಗಳು, ಹಲವಾರು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿವೆ. ಬದಲಾದ ಪರಿಸ್ಥಿತಿಗೆ ವಿದ್ಯಾರ್ಥಿಗಳು ಹೊಂದಿಕೊಂಡಿದ್ದು, ಸಮಸ್ಯೆಗಳ ನಡುವೆ ಆನ್‌ಲೈನ್‌ ಶಿಕ್ಷಣ ವಿಧಾನದ ಮೊರೆ ಹೋಗುತ್ತಿದ್ದಾರೆ. ಶೇ. 42ರಷ್ಟು ವಿದ್ಯಾರ್ಥಿಗಳು, ಯುಕೆ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

Advertisement

ಅಮೆರಿಕದಲ್ಲಿ 7.33 ಲಕ್ಷ ವಿದೇಶಿ ವಿದ್ಯಾರ್ಥಿಗಳು
ಅಮೆರಿಕದಲ್ಲಿ 2019ರಲ್ಲಿ ಚೀನ ಮತ್ತು ಭಾರತದ ಶೇ.48 ರಷ್ಟು ವಿದ್ಯಾರ್ಥಿ ಗಳಿದ್ದರು ಎಂದು ವರದಿ ತಿಳಿಸಿದೆ. ವಲಸೆ ವಿದ್ಯಾರ್ಥಿಗಳ ಕುರಿತು ಅಮೆರಿಕ ವಲಸೆ ಮತ್ತು ಕಸ್ಟಮ್ಸ… ಜಾರಿ (ಐಸಿಇ)ಸಂಸ್ಥೆ ಈ ಬಗ್ಗೆ ವರದಿ ಸಿದ್ಧಪಡಿಸಿದ್ದು, ಶೇ. 48ರಷ್ಟು ಅಂದರೆ 7.33 ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ನಡೆಸಿದ್ದಾರೆ. ಇವರಲ್ಲಿ ಚೀನದ 4.74 ಲಕ್ಷ ಮತ್ತು ಭಾರತದ 2.49 ಲಕ್ಷ ವಿದ್ಯಾರ್ಥಿಗಳಿ¨ªಾರೆ. 2018ರಲ್ಲಿ ಉಭಯ ದೇಶಗಳ ಶೇ.47ರಷ್ಟು ವಿದ್ಯಾರ್ಥಿಗಳಿದ್ದರು.

ಏಷ್ಯಾದಿಂದ ಹೆಚ್ಚು
ಏಷ್ಯಾದ ಕೆಲವು ರಾಷ್ಟ್ರಗಳಾದ ಕತಾರ್‌, ಸಿರಿಯಾ ಮತ್ತು ಯೆಮನ್‌ ರಾಷ್ಟ್ರಗಳು ಕೆಲವೇ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿವೆ. ಆದರೆ ಕಾಂಬೋಡಿಯಾ ಮತ್ತು ಕಿರ್ಗಿಸ್ಥಾನ ಹೆಚ್ಚು ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿವೆ. ವಿದೇಶಿಯರಲ್ಲಿ 6.71ಲಕ್ಷ (ಶೇ.49) ವಿದ್ಯಾರ್ಥಿನಿಯರು, 4.42 ಲಕ್ಷ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next