Advertisement

ಶಿಕ್ಷಣಕ್ಕಿದೆ ಮೃಗವನ್ನು ಮನುಷ್ಯನನ್ನಾಗಿಸೋ ಶಕ್ತಿ

03:05 PM May 08, 2022 | Team Udayavani |

ಹಾನಗಲ್ಲ: ಬದುಕಿನ ಶಿಕ್ಷಣವನ್ನು ಅನುಭವದಿಂದ ಮಾತ್ರ ಪಡೆಯಲು ಸಾಧ್ಯವಾಗಿದ್ದು, ಶಾಲಾ ಶಿಕ್ಷಣ ಇದಕ್ಕೆ ಸಹಕಾರಿ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

Advertisement

ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕ ವಿದ್ಯಾರ್ಥಿ ಸಂಘ, ವಿವಿಧ ವಿಷಯವಾರು ಸಂಘಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಣಕ್ಕೆ ಮೃಗವನ್ನು ಮನುಷ್ಯನನ್ನಾಗಿಸುವ ಶಕ್ತಿಯಿದೆ. ಆದ್ದರಿಂದ, ಸಮರ್ಥ ಶಿಕ್ಷಣ ಪಡೆದ ವ್ಯಕ್ತಿಗಳಿಂದ ಸಮರ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಸರಿಯಾದ ರೀತಿಯಲ್ಲಿ ಶಿಕ್ಷಣ ಪಡೆದು ಸಮಾಜ ತಿದ್ದುವ ಕಾಯಕ ಮಾಡಬೇಕು. ಇಂದು ವ್ಯಕ್ತಿಗಳು ವಿಷಯವನ್ನು ಕೇಳುವ ವ್ಯವದಾನವನ್ನೇ ಕಳೆದುಕೊಂಡು ಬಿಟ್ಟಿದ್ದಾರೆ. ಆದರೆ, ಹಾಗಾಗಬಾರದು. ಗುರುಗಳು ಹೇಳುವ ವಿಷಯವನ್ನು ಕೇಳುವ ವ್ಯವದಾನವನ್ನು ಪ್ರತಿಯೊಬ್ಬರೂ ಹೊಂದಿರಬೇಕು. ಇಲ್ಲದಿದ್ದರೆ ವಿಷಯ ಆಲಿಸುವ ಅಭಾವದಿಂದ ಸಮಾಜದಲ್ಲಿ ಅಲ್ಲೋಲ್ಲ ಕಲ್ಲೋಲವೇ ಆಗಬಹುದು. ಹಾಗಾಗಿ, ವಿಷಯವನ್ನು ಸರಿಯಾಗಿ ಕೇಳಿ ಮಾತನಾಡುವ ರೀತಿಯನ್ನು ಕಲಿಯಬೇಕಾಗಿದೆ ಎಂದು ತಿಳಿಸಿದರು.

ಹಾನಗಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌. ಎನ್‌.ಹುರುಳಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸರಿಯಾದ ಮಾರ್ಗದರ್ಶನದಿಂದ ಸರಿಯಾದ ವ್ಯಕ್ತಿಗಳನ್ನು ನಿರ್ಮಾಣ ಮಾಡಲು ಸಾಧ್ಯ. ಸರಿ ದಾರಿ ತೋರುವ ಗುರು ಹಾಗೂ ಶಿಕ್ಷಣ ಸಂಸ್ಥೆಯನ್ನು ಹುಡುಕಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಕ ಶ್ರೀಕಾಂತ ಹುಲ್ಮನಿ, ಶಿಕ್ಷಕ ರಾಷ್ಟ್ರ ಕಟ್ಟುವ ಸಾರಥಿ. ಅವನ ನುಡಿಯೇ ಸಮಾಜಕ್ಕೆ ಪ್ರೇರಣೆ. ಜಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರಗಳು ಪೈಪೋಟಿಗೆ ಇಳಿಯಲು ಕಾರಣ ಶಿಕ್ಷಣ. ಅದಕ್ಕೆ ಯಾವ ರಾಷ್ಟ್ರದಲ್ಲಿ ಸಮರ್ಥ ಶಿಕ್ಷಕರು ಇರುತ್ತಾರೋ ಆ ರಾಷ್ಟ್ರ ಜಗತ್ತಿನ ಶ್ರೇಷ್ಟ ರಾಷ್ಟ್ರವಾಗುವುದರಲ್ಲಿ ಎರಡು ಮಾತಿಲ್ಲ ಎಂದರು.

Advertisement

ಡಾ|ಪ್ರಕಾಶ ಹುಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ|ಸದಾಶಿವಪ್ಪ ಎನ್‌. ಪ್ರತಿಜ್ಞಾವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಎಂ.ಬಿ.ನಾಯ್ಕ, ಸಲಹಾ ಮಂಡಳಿ ಸದಸ್ಯರಾದ ಗುರುಸಿದ್ದಪ್ಪ ಕೊಂಡೊಜ್ಜಿ, ಪ್ರಧಾನ ಕಾರ್ಯದರ್ಶಿ ಕು. ಸಹನಾ ಹೊಂಬಳಿ, ಪ್ರೊ. ರಾಘವೇಂದ್ರ ಮಾಡಳ್ಳಿ, ಡಾ| ವಿಶ್ವನಾಥ ಬೊಂದಾಡೆ, ಜೀತೇಂದ್ರ ಜಿ.ಟಿ., ಡಾ|ರುದ್ರೇಶ ಬಿ.ಎಸ್‌., ಡಾ|ಪ್ರಕಾಶ ಜಿ.ವಿ., ದಿನೇಶ ಆರ್‌., ಎಂ.ಎಂ.ನಿಂಗೋಜಿ, ಎಸ್‌.ಸಿ.ವಿರಕ್ತಮಠ, ಕಳೆದ ಸಾಲಿನಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಸಂದೀಪ ಹೊಂಕಣ ಹಾಗೂ ಪರ್ಜಿನ್‌ ಇತರರು ಭಾಗವಹಿಸಿದ್ದರು. ಜಯಶ್ರೀ ಎಸ್‌. ಪ್ರಾರ್ಥಿಸಿ, ಎಂ.ವಿ.ಪೂರ್ಣಿಮಾ ಸ್ವಾಗತಿಸಿ, ಪದ್ಮಾವತಿ ಬನವಾಸಿ ಅತಿಥಿಗಳನ್ನು ಪರಿಚಯಿಸಿದರು.

ಕಾಂಚನಾ ಮತ್ತು ಸಂಗಡಿಗರು ವಚನ ನೃತ್ಯ ಮಾಡಿದರು. ಸುಮಾ ವಿ.ಕೆ. ಮತ್ತು ಲಕ್ಷ್ಮೀ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next