Advertisement

ಶಿಕ್ಷಣ ಸಂಸ್ಥೆ ಹೆಚ್ಚುತ್ತಿದ್ದರೂ ಶಿಕ್ಷಣದ ಗುಣಮಟ್ಟ ಕುಸಿದಿದೆ

02:53 PM Mar 29, 2018 | |

ಮೈಸೂರು: ಸ್ವಾತಂತ್ರ್ಯಾ ನಂತರ ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಹುಟ್ಟಿಕೊಂಡಿದ್ದರೂ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್‌ ವಿ.ಪಾಟೀಲ್‌ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ವತಿಯಿಂದ ಶಿವರಾತ್ರೀಶ್ವರ ನಗರದಲ್ಲಿರುವ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಕೇವಲ ಪದವಿ, ಡಿಪ್ಲೊಂಮೋ ಅಥವಾ ಪ್ರಮಾಣ ಪತ್ರಗಳನ್ನು ನೀಡುವ ಉದ್ಯಮವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಹೆಚ್ಚಿನ ಉದ್ದೇಶ ಮತ್ತು ಗುರಿಗಳನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು, ವಿವಿಗಳು ಕಲಿಕೆಯ ಸ್ಥಳಗಳಲ್ಲದೆ ಸೇವೆಗಳ ಕೇಂದ್ರವೂ ಆಗಿರಬೇಕಿದೆ ಎಂದರು.

ಸಂಬಂದಕ್ಕೆ ಬೆಲೆ ಕಟ್ಟಲಾಗಲ್ಲ: ಆರೋಗ್ಯವೇ ಭಾಗ್ಯ ಎಂಬಂತೆ ಶಿಕ್ಷಣ ಮತ್ತು ಆರೋಗ್ಯ ಎರಡು ಮೂಲಭೂತ ಹಕ್ಕು ಮತ್ತು ಸೌಕರ್ಯಗಳಾಗಿದೆ. ಹೀಗಾಗಿ
ಆರೋಗ್ಯ, ಸಮಯ ಮತ್ತು ಸಂಬಂಧಗಳಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ನಾವು ಅವುಗಳನ್ನು ಕಳೆದುಕೊಂಡಾಗ ಮಾತ್ರ ಅದರ ಮೌಲ್ಯವನ್ನು ಅರಿತುಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಯಾವುದೇ ವ್ಯಕ್ತಿ ಉತ್ತಮ ಆರೋಗ್ಯ ಹೊಂದಿಲ್ಲದಿದ್ದರೆ, ಆತ ಎಷ್ಟೇ ಸಾಮರ್ಥಯ,

ಕೌಶಲತೆ, ಕಾರ್ಯಕ್ಷಮತೆ ಮತ್ತು ಕೊಡುಗೆಗಳನ್ನು ಹೊಂದಿದ್ದರೂ, ಅದು ದುರ್ಬಲಗೊಳ್ಳಲಿದೆ. ಯಾವುದೇ ರಾಷ್ಟ್ರದ ನಾಗರಿಕತೆಯಲ್ಲಿ ಶಿಕ್ಷಣ ಎಂಬುದು ಮಾನವ ಅಭಿವೃದ್ಧಿಗೆ ಮೂಲಭೂತ ಹಕ್ಕು ಮತ್ತು ಸವಲತ್ತಾಗಿದೆ. ಹೀಗಾಗಿ ಮೌಲ್ಯ ಆಧಾರಿತ ಜಾnನ, ಕೌಶಲ್ಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ. ಗುಣಮಟ್ಟದ ಶಿಕ್ಷಣ ಮತ್ತು ಮೌಲ್ಯಗಳ ಮೂಲಕ ಭವಿಷ್ಯದಲ್ಲಿ ಮಾನವನ ಘನತೆ ಅವಲಂಬಿಸಿರುತ್ತದೆ ಎಂದು ಹೇಳಿದರು.

Advertisement

ಹಣ ಸಂಪಾದನೆ ಮುಖ್ಯವಲ್ಲ: ಯಾವುದೇ ವ್ಯಕ್ತಿ ಮನರಂಜನೆ ಅಥವಾ ಪ್ರವಾಸಕ್ಕಾಗಿ ನ್ಯಾಯಾಲಯ ಮತ್ತು ಆಸ್ಪತ್ರೆಗಳಿಗೆ ಬರುವುದಿಲ್ಲ ಎಂಬುದನ್ನು ವೈದ್ಯರು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ ವೈದ್ಯರು ಪ್ರತಿ ಸಂದರ್ಭದಲ್ಲೂ ತಮ್ಮ ವೃತ್ತಿಯಿಂದ ಹಣ ಸಂಪಾದನೆಯನ್ನೇ ಮುಖ್ಯವಾಗಿಸಿಕೊಳ್ಳದೆ, ಅನಾರೋಗ್ಯ ಮತ್ತು ಸಂಕಷ್ಟದಲ್ಲಿರುವವರಿಗೆ ಸೇವೆ ಮತ್ತು ಸಹಾನುಭೂತಿಯಿಂದ ನೆರವಾಗಬೇಕಿದೆ.

ಅನಾರೋಗ್ಯ, ಸಂಕಷ್ಟದಿಂದ ಬಳಲುತ್ತಿರುವ ಸಂದರ್ಭದಲ್ಲಿ ಶ್ರೀಮಂತರು ಹಣವನ್ನು ಪಾವತಿಸಿದರೆ, ಬಡವರು ಸೇವೆವಾಗಿ ಪ್ರಾರ್ಥಿಸುತ್ತಾರೆ. ಈ ಸಂದರ್ಭದಲ್ಲಿ ಹಣ ಮೌಲ್ಯವನ್ನು ಹೊಂದಿದ್ದರೂ, ಪ್ರಾರ್ಥನೆ ಅಮೂಲ್ಯವಾಗಲಿದ್ದು, ಹಣದ ಪಾವತಿಗಿಂತಲೂ ಪ್ರಾರ್ಥನೆಗೆ ಹೆಚ್ಚು ಶಕ್ತಿಯುತವಾಗಿರುತ್ತದೆ ಎಂದರು.

ಸಮಾರಂಭದಲ್ಲಿ 144 ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾಯ ನಿರ್ವಾಹಕ ಡಾ.ಸಿ.ಜೆ.ಬೆಟಸೂರ್‌ ಮಠ, ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಬಿ.ಸುರೇಶ್‌, ಕುಲಸಚಿವ ಡಾ.ಬಿ.ಮಂಜುನಾಥ್‌, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಬಸವನಗೌಡಪ್ಪ ಮತ್ತಿತರರು ಹಾಜರಿದ್ದರು.

ಡಾ.ಅತಿರಾ ದಾಸ್‌ಗೆ 7 ಚಿನ್ನ: ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ 8 ಚಿನ್ನದ ಪದಕ ಹಾಗೂ 18 ನಗದು ಬಹುಮಾನಗಳನ್ನು ವಿತರಿಸಲಾಯಿತು. ಅದರಂತೆ ಕೇರಳದ ಡಾ.ಅತಿರಾ ಜಿ.ದಾಸ್‌ 7 ಚಿನ್ನದ ಪದಕ ಹಾಗೂ 11 ನಗದು ಬಹುಮಾನ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

ಉಳಿದಂತೆ ಮೈಸೂರಿನ ಡಾ.ಎಸ್‌.ಆರ್‌.ಶಿವಾನಿ ಹಾಗೂ ಕಲ್ಲಿಕೋಟೆಯ ಡಾ.ಸಂಧ್ಯಾ ತಲಾ 1 ಚಿನ್ನದ ಪದಕ ಪಡೆದರು. ತಮಿಳುನಾಡಿನ ಡಾ.ಪಿ.ಎಸ್‌.ಶಿವಾಂಬಿಕ 1, ಉತ್ತರ ಪ್ರದೇಶದ ಡಾ.ಪ್ರೇರಣ ಡೋಂಗ್ರೆ 2, ಕೇರಳದ ಡಾ.ಆರ್ಶ ಸದಾರ್‌ 2 ಹಾಗೂ ಆಂಧ್ರಪ್ರದೇಶದ ಡಾ.ಸಾಯಿ ತೇಜಸ್ವಿನಿ 1 ನಗದು ಬಹುಮಾನ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next