Advertisement
ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ ವಿಶೇಷಚೇತನ ವಿದ್ಯಾರ್ಥಿ ಮಲೇಗೌಡನನ್ನು ಕರೆದುಕೊಂಡು ಹೋಗಿ ಬರಲು ಹೆಸರೂರು ಗ್ರಾಮದ ಸರಕಾರಿ ಶಾಲಾ ಶಿಕ್ಷಕರೊಬ್ಬರಿಗೆ ಜವಾಬ್ದಾರಿಯನ್ನು ನೀಡಿದ್ದಾರೆ. ಸೋಮವಾರ ಖಾಸಗಿ ವಾಹನದ ಮೂಲಕ ಹೆಸರೂರು ಗ್ರಾಮದಿಂದ ಪರಿಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ.
Related Articles
Advertisement
ವಿದ್ಯಾರ್ಥಿಯ ತಂದೆ ಚಂದ್ರಪ್ಪ ಮಾತನಾಡಿ, ಬಿಸಿಲಲ್ಲಿ ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಮೂರು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು. ನನ್ನ ಮಗನ ಪರೀಕ್ಷೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಅಧಿಕಾರಿಗಳು ಮಲೇಗೌಡನನ್ನು ಉಳಿದ ಪರೀಕ್ಷಾ ದಿನಗಳಲ್ಲಿ ಕರೆದುಕೊಂಡು ಹೋಗಿ ಬರುವ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೆಸರೂರು ಗ್ರಾಮದ ಸರಕಾರಿ ಶಾಲೆ ಶಿಕ್ಷಕ ವೀರಭದ್ರಗೌಡ ಪಾಟೀಲ್ ತಿಳಿಸಿದ್ದಾರೆ.